ಗುರುವಿನ ಆದರ್ಶ ಪಾಲನೆ ಮಾಡೋಣ: ಚಂದ್ರಶೇಖರ ಸುರಕೋಡ

KannadaprabhaNewsNetwork |  
Published : Dec 29, 2025, 02:30 AM IST
ಅಣ್ಣಿಗೇರಿ ಪಟ್ಟಣದ ದಾಸೋಹ ಮಠದಲ್ಲಿ ನಡೆದ ಸದ್ಗುರು ರುದ್ರಮುನೀಶ್ವರ ಶ್ರೀಗಳ 62ನೇ ಪುಣ್ಯ ಸ್ಮರಣೋತ್ಸವ ಹಾಗೂ ವೇದಾಂತ ಪರಿಷತ್ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಆರೂಢ ಪರಂಪರೆ ಹೊಂದಿರುವ ದಾಸೋಹ ಮಠದ ಜಾತ್ರೆಯ ಸತ್ಕಾರ್ಯದಲ್ಲಿ ನಾವೆಲ್ಲರೂ ಪಾಲ್ಗೊಂಡು ರುದ್ರಮುನೀಶ್ವರ ಆದರ್ಶಗಳನ್ನು ಪಾಲನೆ ಮಾಡೋಣ ಎಂದು ಉದ್ಯಮಿ ಚಂದ್ರಶೇಖರ ಸುರಕೋಡ ಹೇಳಿದರು.

ಅಣ್ಣಿಗೇರಿ: ರುದ್ರಮುನಿ ಶ್ರೀಗಳು ಪವಾಡ ಪುರುಷರು. ಆರೂಢ ಪರಂಪರೆ ಹೊಂದಿರುವ ದಾಸೋಹ ಮಠದ ಜಾತ್ರೆಯ ಸತ್ಕಾರ್ಯದಲ್ಲಿ ನಾವೆಲ್ಲರೂ ಪಾಲ್ಗೊಂಡು ರುದ್ರಮುನೀಶ್ವರ ಆದರ್ಶಗಳನ್ನು ಪಾಲನೆ ಮಾಡೋಣ ಎಂದು ಉದ್ಯಮಿ ಚಂದ್ರಶೇಖರ ಸುರಕೋಡ ಹೇಳಿದರು.

ಪಟ್ಟಣದ ದಾಸೋಹ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಸದ್ಗುರು ರುದ್ರಮುನೀಶ್ವರ ಶ್ರೀಗಳ 62ನೇ ಪುಣ್ಯ ಸ್ಮರಣೋತ್ಸವ ಹಾಗೂ ವೇದಾಂತ ಪರಿಷತ್ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಹುಬ್ಬಳ್ಳಿ ಶಾಂತಾಶ್ರಮದ ಅಭಿನವ ಸಿದ್ದಾರೂಢ ಶ್ರೀಗಳು ಮಾತನಾಡಿ, ಪ್ರತಿಯೊಬ್ಬ ಮನುಷ್ಯನ ಲೌಕಿಕ ಜೀವನದಲ್ಲಿ ಆಧ್ಯಾತ್ಮಿಕ ಆದರ್ಶ ಮೌಲ್ಯಗಳು ಅತ್ಯವಶ್ಯಕವಾಗಿವೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಜಾತ್ರಾ ಮಹೋತ್ಸವದಲ್ಲಿ ಡಾ. ಶಿವಕುಮಾರ ಶ್ರೀಗಳು ಸಾವಿರಾರು ಭಕ್ತರನ್ನು ಸೇರಿಸಿ ಅವರಲ್ಲಿ ಜ್ಞಾನ ದಾಸೋಹ ಬಿತ್ತುವ ಕಾರ್ಯ ಕೈಗೊಂಡಿರುವುದು ಶ್ರೇಷ್ಠ ಕಾರ್ಯ ಎಂದರು.

ಮುಚಳಂಬದ ನಾಗಭೂಷಣ ಶಿವಯೋಗಿಗಳ ಮಠದ ಪ್ರಣವಾನಂದ ಶ್ರೀಗಳು ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ವಿರೂಪಾಕ್ಷಪ್ಪ ಹಾಳದೋಟರ, ಉಪಾಧ್ಯಕ್ಷ ಚಂದ್ರಶೇಖರ ಬಿನ್ನಾಳ, ಶ್ರೀಮಠದ ಸೇವಾ ಸಮಿತಿ ಅಧ್ಯಕ್ಷ ರಾಜೇಶ್ವರರಾವ್‌ ದೇಸಾಯಿ, ಚಂಬಣ್ಣ ಸುರಕೋಡ, ಜಗದೀಶ ಅಬ್ಬಿಗೇರಿಮಠ, ಮುದಕಣ್ಣ ಕೊರವರ ಸೇರಿದಂತೆ ಹಲವರಿದ್ದರು.ಜಾತ್ರಾಮಹೋತ್ಸವ

ಶ್ರೀ ರುದ್ರಮುನೀಶ್ವರ ಮಠ ಸೌಹಾರ್ದತೆ ಮಠ. ಇಲ್ಲಿ ಜಾತಿ, ಮತ ಎಂಬ ಭೇದವಿಲ್ಲ. ಪ್ರತಿವರ್ಷವೂ ಎಲ್ಲ ಸಮಾಜ ಬಾಂಧವರು ಜಾತ್ರಾಮಹೋತ್ಸವದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುತ್ತಾರೆ ಎಂದು ಉದ್ಯಮಿ - ಚಂದ್ರಶೇಖರ ಸುರಕೋಡ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ ಹೋರಾಟಗಾರರ ಪ್ರಕರಣ ವಾಪಸ್‌: ಸಿದ್ದರಾಮಯ್ಯ
ರಾಜ್ಯದಲ್ಲಿ ಡ್ರಗ್ಸ್‌ ಫ್ಯಾಕ್ಟರಿ ಪತ್ತೆಯಾಗಿದ್ದಕ್ಕೆ ಬಿಜೆಪಿ ಕಿಡಿ