ಹಾನಗಲ್ಲ: ಅರ್ಥಪೂರ್ಣ ಸಮ್ಮೇಳನಕ್ಕೆ ಸಾಕ್ಷಿಯಾದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾನಗಲ್ಲ ತಾಲೂಕು ಘಟಕದ ಪದಾಧಿಕಾರಿಗಳು ಹಾಗೂ ಶರಣ ಬಂಧುಗಳ ಶ್ರಮ ಸಾರ್ಥಕವಾಗಿದೆ ಎಂದು ಎರಡನೇ ತಾಲೂಕು ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ನೀಲಮ್ಮ ಉದಾಸಿ ಹೇಳಿದರು.
ಜಿಲ್ಲಾಧ್ಯಕ್ಷ ಪ್ರೊ. ಮಾರುತಿ ಶಿಡ್ಲಾಪೂರ ಮಾತನಾಡಿ, ಒಟ್ಟಾಗಿ ಕೆಲಸ ಮಾಡಿದರೆ ಎಲ್ಲದರಲ್ಲೂ ಯಶಸ್ಸು ಕಾಣಲು ಸಾಧ್ಯ. ಶರಣರ ಜೀವನದ ಪ್ರತಿಪಾದನೆಗೆ ಶರಣ ಸಾಹಿತ್ಯ ಪರಿಷತ್ತು ವಿಶೇಷವಾಗಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಸಮ್ಮೇಳನಗಳು ಕೂಡ ವಚನಗಳ ಪ್ರಚಾರಕ್ಕೆ ಒಳ್ಳೆಯ ವೇದಿಕೆಗಳು. ಸದಾ ವಚನ ಚಿಂತನೆ ಮಾಡುತ್ತ, ಸಮಾಜದಲ್ಲಿ ವಚನಗಳ ಸಾರವನ್ನು ಹಂಚಿದರೆ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ಸ್ವಾಗತ ಸಮಿತಿ ಅಧ್ಯಕ್ಷ ನಾಗಪ್ಪ ಸವದತ್ತಿ ಮಾತನಾಡಿ, ಮಕ್ಕಳಿಗೆ ಸಂಸ್ಕಾರ ನೀಡುವಲ್ಲಿ ಕುಟುಂಬಗಳು ಸೋಲುತ್ತಿವೆ. ಶರಣರ ಚಿಂತನೆಗಳು ಸುಲಭವಾಗಿ ಮಕ್ಕಳನ್ನು ಮುಟ್ಟಬಲ್ಲದು ಎಂದರು.ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ಗೌರವಾಧ್ಯಕ್ಷ ರವಿಬಾಬು ಪೂಜಾರ ಮಾತನಾಡಿ, ಸೌಹಾರ್ದಯುತ ಸಹಕಾರದಿಂದಾಗಿ ಸಮ್ಮೇಳನ ಯಶಸ್ವಿಯಾಗಿದೆ ಎಂದರು.
ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಸಿ. ಕಲ್ಲನಗೌಡರ, ನಗರ ಘಟಕದ ಅಧ್ಯಕ್ಷ ಸಿ. ಮಂಜುನಾಥ, ಕದಳಿ ಅಧ್ಯಕ್ಷೆ ಶಿವಗಂಗಕ್ಕ ಪಟ್ಟಣದ, ಜಿಲ್ಲಾ ಕಾರ್ಯದರ್ಶಿ ನಿರಂಜನ ಗುಡಿ, ಪದಾಧಿಕಾರಿಗಳಾದ ಎಸ್.ವಿ. ಹೊಸಮನಿ, ಅಶೋಕ ದಾಸರ, ಎಂ. ಪ್ರಸನ್ನಕುಮಾರ, ರೇಖಾ ಶೆಟ್ಟರ, ರತ್ನಾ ಬಳ್ಳಾರಿ, ವೀಣಾ ಗುಡಿ, ನಾಗರತ್ನಾ ಶೇಟ್ ಮಾತನಾಡಿದರು.ಶೋಭಾ ಪಾಟೀಲ, ಸೌಭಾಗ್ಯ ಉದಾಸಿ, ರೂಪಾ ಗೌಳಿ, ಸುವರ್ಣಾ ಹಿರೇಗೌಡರ, ಕಲಮಲಾಕ್ಷಿ ಕೊಂಡೋಜಿ, ಶೀಲಾ ಗಾಣಿಗೇರ, ವಿಜಯಲಕ್ಷ್ಮೀ ಹಳ್ಳಿಕೇರಿ, ಸವಿತಾ ಉದಾಸಿ, ದಾಕ್ಷಾಯಿಣಿ ಯರಗಟ್ಟಿ, ಲಕ್ಷ್ಮೀ ಸಿಂಧೂರ, ಸುಮಂಗಲಾ ಕಟ್ಟೀಮಠ, ಎಚ್. ಸುಧಾ, ಸುನೀತಾ ಉಪ್ಪಿನ, ಸಂತೋಷ ದೊಡ್ಡಮನಿ, ಶಂಭಣ್ಣ ಇಂಗಳಕಿ, ಪ್ರಭು ಹೂಗಾರ, ಶ್ರೀಕಾಂತ ಹಿರೇಮಠ ಪಾಲ್ಗೊಂಡಿದ್ದರು.