ಹೂವಿನಹಡಗಲಿ: ಕನ್ನಡ ಸಾಹಿತ್ಯ ಲೋಕದಲ್ಲಿ ಸಾಕಷ್ಟು ವಿಭಿನ್ನ ಪುಸ್ತಕಗಳು ಇವೆ. ಜತೆಗೆ ಇಂದಿನ ಯುವ ಕವಿಗಳು ಸಾಮಾಜಿಕ ಸಮಸ್ಯೆಗಳ ಬಗ್ಗೆ ಕವಿತೆ, ಬರೆಯುತ್ತ ಗಮನ ಹರಿಸಬೇಕಿದೆ ಎಂದು ನಿವೃತ್ತ ಪ್ರಾಚಾರ್ಯ ಶಾಂತಮೂರ್ತಿ ಬಿ. ಕುಲಕರ್ಣಿ ಹೇಳಿದರು.
ಗ್ರಂಥಾಲಯ ಜ್ಞಾನದ ಕಣಜವಾಗಿದೆ. ಪುಸ್ತಕ ಬದುಕಿನ ಸಂಗಾತಿ ಗ್ರಂಥಗಳನ್ನು ಹೆಚ್ಚು ಓದುವುದರಿಂದ ಮನುಷತ್ವ ಬೆಳೆಯುತ್ತದೆ. ಗ್ರಂಥಾಲಯದ ಸದುಪಯೋಗವನ್ನು ಯುವಕರು ಮಕ್ಕಳು ಪಡೆದುಕೊಳ್ಳಲು ತಿಳಿಸಿದರು.
ಪುಸ್ತಕ ಓದಿನ ಅನುಭೂತಿ ಅನುಭಾವ ಮೊಬೈಲ್ ಫೋನ್‌ನಿಂದ ಸಿಗುವುದಿಲ್ಲ. ವಿದ್ಯಾವಂತರು ಓದಿನಿಂದ ವಿಮುಕ್ತರಾಗುತ್ತಿರುವುದು ವಿಷಾದನೀಯ. ನಿತ್ಯ ಕನಿಷ್ಠ ಒಂದು ದಿನ ಪತ್ರಿಕೆ ಓದದವರು ಇರುವುದು ವಿಪರ್ಯಾಸ ಎಂದರು.ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಕೊಟ್ರಗೌಡ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವ ವಿದ್ಯಾರ್ಥಿಗಳಿಗೆ ಮೊದಲನೇ ಮಹಡಿ ಶೀಘ್ರದಲ್ಲೇ ಉದ್ಘಾಟನೆ ನೆರವೇರಿಸುವ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ಬಳಗದ ಹಿರಿಯ ಸದಸ್ಯರಾದ ಬೀರಬ್ಬಿ ಬಸವರಾಜ, ಮಲ್ಲಿಗೆ ಪ್ರಕಾಶನದ ಎಲ್.ಖಾದರ ಭಾಷಾ ಮಾತನಾಡಿದರು.
ಕವಿ ಉಪನ್ಯಾಸಕ ಶಂಕರ್ ಬೆಟಗೇರಿ ಕೃತಿ ಪರಿಚಯಿಸಿದರು. ಗ್ರಾಪಂ ಮೇಲ್ವಿಚಾರಕರ ಸಂಘದ ಜಿಲ್ಲಾಧ್ಯಕ್ಷ ಕುರಿ ಮಂಜುನಾಥ, ತಾಲೂಕು ಅಧ್ಯಕ್ಷ ಕೆ.ದೊಡ್ಡಬಸಪ್ಪ, ಶಾಖಾ ಗ್ರಂಥಾಲಯಾಧಿಕಾರಿ ಬಿ.ನಾರಾಯಣ್, ಪತ್ರಕರ್ತ ಬಿಚ್ಚುಗತ್ತಿ ಖಾಜಾ ಹುಸೇನ್, ಎಂ.ದಯಾನಂದ ಉಪಸ್ಥಿತರಿದ್ದರು.