ವಿಷಕಾರಿ ಕೆಮಿಕಲ್‌ ಕಂಪನಿಗಳ ವಿರುದ್ಧ ಪತ್ರ ಚಳವಳಿ..!

KannadaprabhaNewsNetwork |  
Published : Jun 23, 2025, 12:33 AM IST
 ಭರತಕುಮಾರ ಗುಮಡಾಲ್, ಸೈದಾಪುರ | Kannada Prabha

ಸಾರಾಂಶ

Letter campaign against toxic chemical companies..!

- ಜನಾಂದೋಲನಕ್ಕೆ ಪರಿಸರವಾದಿಗಳು, ಚಿಂತಕರ ಚಿಂತನೆ

- ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶ : ಕೆಮಿಕಲ್‌ ಕಂಪನಿಗಳ ವಿರುದ್ಧ ಹೋರಾಟ

- ಕನ್ನಡಪ್ರಭ ಸರಣಿ ವರದಿ ಭಾಗ : 76

ಆನಂದ.ಎಂ.ಸೌದಿ

ಕನ್ನಡಪ್ರಭ ವಾರ್ತೆ ಯಾದಗಿರಿ

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್‌ -ತ್ಯಾಜ್ಯ ಕಂಪನಿಗಳ ವಿಷಗಾಳಿ ದುರ್ನಾತದ ವಿರುದ್ಧ ಜನಾಂದೋಲನ ರೂಪುಗೊಳ್ಳುತ್ತಿದೆ. ಕಿಲ್ಲನಕೇರಾ, ಬಾಡಿಯಾಳ, ಸೈದಾಪುರ ಹಾಗೂ ಕಡೇಚೂರು ಗ್ರಾಮ ಪಂಚಾಯಿತಿಗಳು ಸಾಮಾನ್ಯ ಸಭೆಯಲ್ಲಿ ಕಂಪನಿಗಳ ವಿರುದ್ಧ ಒಮ್ಮತದ ನಿರ್ಧಾರ ಹೊರಡಿಸಿದ್ದಾರೆ.

ಈ ಮಧ್ಯೆ, 27 ಕಂಪನಿಗಳಿಗೆ ಜಿಲ್ಲಾಡಳಿತ ನೋಟಿಸ್‌ ನೀಡಿ, ಅದರಲ್ಲಿ ಒಂದಕ್ಕೆ ಬೀಗಮುದ್ರೆ ಹಾಕಿದ್ದ ಬೆನ್ನಲ್ಲೇ, ಹಿಂದಿನ ನೋಟಿಸ್‌ಗಳಿಗೆ ಪ್ರತಿಕ್ರಿಯಿಸದ ಮತ್ತೆ ನಾಲ್ಕು ಕಂಪನಿಗಳಿಗೆ ಮತ್ತೊಂದು ಹಂತದ ನೋಟಿಸ್‌ ಸಿದ್ಧತೆ ನಡೆಸಿದೆ. ಸೋಮವಾರ ಈ ಕಂಪನಿಗಳಿಗೆ ಕೊನೆಯ ಹಂತದ ನೋಟಿಸ್‌ ರವಾನೆಯಾಗುವ ಸಾಧ್ಯತೆಯಿದೆ.

-

ಕೋಟ್- 1: ನಮ್ಮ ಭಾಗದ ರೈತರು ತಮ್ಮ ಭೂಮಿಯನ್ನು ಕೈಗಾರಿಕೆಗಳಿಗೆ ನೀಡಿ ಹಣ ಪಡೆದು, ಆರೋಗ್ಯವನ್ನು ಕಳೆದುಕೊಂಡಿದ್ದಾರೆ. ಉದ್ಯೋಗ ಸೃಷ್ಟಿಯಾಗುತ್ತವೆ ಎಂದು ನಮ್ಮ ರೈತರು ಭೂಮಿಯನ್ನು ನೀಡಿದ್ದಾರೆ. ಆದರೆ, ಇಂದು ಯಾವುದೇ ಉದ್ಯೋಗವಿಲ್ಲದೆ ಮತ್ತೆ ಗುಳೆ ಹೋಗುತ್ತಿರುವುದನ್ನು ಇಲ್ಲಿನ ಸರಕಾರದ ಮಂತ್ರಿಗಳು ಮತ್ತು ಜಿಲ್ಲಾಧಿಕಾರಿಗಳು ಗಮನಿಸಬೇಕು. ಈ ಬಗ್ಗೆ ಉನ್ನತ ಅಧಿಕಾರಿಗಳು ನಮ್ಮ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಕಂಪನಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳಲು ಮನವಿ ಮಾಡುತ್ತೇನೆ.-

-ಭರತಕುಮಾರ ಗುಮಡಾಲ್, ಸೈದಾಪುರ. (22ವೈಡಿಆರ್‌17)

---

ಕೋಟ್- 2: ಇಲ್ಲಿರುವ ರಾಸಾಯನಿಕ ಕಂಪನಿಗಳು ಹೊರ ಹಾಕುತ್ತಿರುವ ವಿಷ ತ್ಯಾಜವು ನಮ್ಮ ಭಾಗದ ಗಾಳಿ, ನೀರು ಮತ್ತು ಮಣ್ಣಿನ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದಾಗಿ ವಯೋವೃದ್ಧರು, ಮಹಿಳೆಯರು, ಮಕ್ಕಳು, ಗರ್ಭಿಣಿ ಮತ್ತು ನವಜಾತ ಶಿಶುಗಳ ಉಸಿರಾಟ ತೊಂದರೆ ಅನುಭವಿಸುತ್ತಿರುವುದು ಹೆಚ್ಚಾಗಿದೆ. ಈ ಭಾಗಕ್ಕೆ ಇಂತಹ ಕಂಪನಿಗಳನ್ನು ಬರುವುದಕ್ಕೆ ಸರಕಾರದ ಪ್ರಭಾವಿ ನಾಯಕರ ಕೃಪಾಕಟಾಕ್ಷವಿದೆ ಎಂಬುವುದು ಜನಸಾಮಾನ್ಯರ ಮಾತುಗಳಾಗಿವೆ. ಆದ್ದರಿಂದ, ಸೈದಾಪುರ ವಲಯದ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಪಕ್ಷಾತೀತವಾಗಿ ಉಗ್ರವಾದ ಹೋರಾಟ ಮಾಡುವುದು ಅವಶ್ಯಕವಾಗಿದೆ.

- ಸಿದ್ದು ಪೂಜಾರಿ. ಬದ್ಧೇಪಲ್ಲಿ. (22ವೈಡಿಆರ್‌18)

---

ಕೋಟ್‌-3 : ಕಡೇಚೂರು-ಬಾಡಿಯಾಳ ಕೈಗಾರಿಕೆ ಪ್ರದೇಶದಲ್ಲಿರುವ ರಾಸಾಯನಿಕ ಕಂಪನಿಗಳು ಮತ್ತು ಐದು ರಾಜ್ಯಗಳ ತ್ಯಾಜ್ಯ ಸಂಗ್ರಹಣ ಘಟಕವು ನಮ್ಮ ಭಾಗದ ಜನರ ಜೀವ ಹಿಂಡುತ್ತಿರುವ ಕಂಪನಿಗಳ ವಿರುದ್ಧ ಜನರ ಧ್ವನಿಯಾಗಿ ನಮ್ಮ ಭಾಗದ ಶಾಸಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗೂ ಈ ಕೈಗಾರಿಕೆಗಳ ವಿರುದ್ಧ ಪರಿಸರವಾದಿಗಳು, ತಜ್ಞರು, ವೈದೈರು, ರಾಜಕೀಯ ಧುರೀಣರು, ಪ್ರಜ್ಞಾವಂತರು ಹಾಗೂ ಸಾಮಾಜಿಕ ಕಾರ್ಯಕರ್ತರು, ಸೇರಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೆ ಪತ್ರ ಚಳವಳಿ ಜೊತೆ ರಸ್ತೆಗೆ ಇಳಿದು ಉಗ್ರವಾದ ಹೋರಾಟ ಮಾಡುತ್ತೇವೆ.

- ವೆಂಕಟೇಶ ಗಡದ್, ಸೈದಾಪುರ (22ವೈಡಿಆರ್‌19)

-

22ವೈಡಿಆರ್20 : ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶ.

PREV

Recommended Stories

ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ
12.69 ಲಕ್ಷ ಶಂಕಾಸ್ಪದ ಬಿಪಿಎಲ್‌ ಚೀಟಿ ರಾಜ್ಯದಲ್ಲಿ ಪತ್ತೆ: ಮುನಿಯಪ್ಪ