ಕಾವೇರಿ ತಂತ್ರಾಂಶ ಕೈಬಿಡುವಂತೆ ಆಗ್ರಹ: ಪತ್ರ ಬರಹಗಾರರ ಒಕ್ಕೂಟ

KannadaprabhaNewsNetwork |  
Published : Dec 10, 2025, 02:30 AM IST
9ಕೆಡಿವಿಜಿ1-ದಾವಣಗೆರೆ ಉಪ ನೋಂದಣಾಧಿಕಾರಿ ಕಚೇರಿ ಎದುರು ಮಂಗಳವಾರ ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಪರವಾನಿಗೆ ಪಡೆದ ಪತ್ರ ಬರಹಗಾರರ ಒಕ್ಕೂಟದ ನೇತೃತ್ವದಲ್ಲಿ ಪತ್ರ ಬರಹಗಾರರು ಪ್ರತಿಭಟನಾ ಧರಣಿ ನಡೆಸಿದರು. | Kannada Prabha

ಸಾರಾಂಶ

ಡಿಜಿಟಲೀಕರಣದ ಹೆಸರಿನಲ್ಲಿ ಕಾವೇರಿ 1.0, ಕಾವೇರಿ 2.0 ತಂತ್ರಾಂಶ ಜಾರಿಗೊಳಿಸಿ, ನ.5ರಿಂದ ಕಾವೇರಿ 3.0 ತಂತ್ರಾಶ ಚಾಲನೆಗೆ ತರುವ ಮೂಲಕ ಫೇಸ್‌ ಲೆಸ್‌, ಪೇಪರ್ ಲೆಸ್‌ ನೋಂದಣಿಗೆ ಮುಂದಾಗಿರುವ ರಾಜ್ಯ ಸರ್ಕಾರ ಇದನ್ನು ಕೈಬಿಟ್ಟು, ಮುಂಚಿನಂತೆ ಆಸ್ತಿ ನೋಂದಣಿ ಕಾರ್ಯಕ್ಕೆ ಅವಕಾಶ ಮಾಡಿಕೊಡಲೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಪರವಾನಗಿ ಪಡೆದ ನಗರದ ಉಪ ನೋಂದಣಾಧಿಕಾರಿ ಕಚೇರಿ ಬಳಿ ಮಂಗಳವಾರ ಧರಣಿ ನಡೆಸಿತು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಡಿಜಿಟಲೀಕರಣದ ಹೆಸರಿನಲ್ಲಿ ಕಾವೇರಿ 1.0, ಕಾವೇರಿ 2.0 ತಂತ್ರಾಂಶ ಜಾರಿಗೊಳಿಸಿ, ನ.5ರಿಂದ ಕಾವೇರಿ 3.0 ತಂತ್ರಾಶ ಚಾಲನೆಗೆ ತರುವ ಮೂಲಕ ಫೇಸ್‌ ಲೆಸ್‌, ಪೇಪರ್ ಲೆಸ್‌ ನೋಂದಣಿಗೆ ಮುಂದಾಗಿರುವ ರಾಜ್ಯ ಸರ್ಕಾರ ಇದನ್ನು ಕೈಬಿಟ್ಟು, ಮುಂಚಿನಂತೆ ಆಸ್ತಿ ನೋಂದಣಿ ಕಾರ್ಯಕ್ಕೆ ಅವಕಾಶ ಮಾಡಿಕೊಡಲೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಪರವಾನಗಿ ಪಡೆದ ನಗರದ ಉಪ ನೋಂದಣಾಧಿಕಾರಿ ಕಚೇರಿ ಬಳಿ ಮಂಗಳವಾರ ಧರಣಿ ನಡೆಸಿತು.

ನಗರದ ಹಳೆ ಪಿಬಿ ರಸ್ತೆಯಲ್ಲಿರುವ ಉಪ ನೋಂದಣಾಧಿಕಾರಿ ಕಚೇರಿ ಬಳಿ ಒಕ್ಕೂಟದ ಅಧ್ಯಕ್ಷ ಡಿ.ಕೆ.ಸಂಗಮೇಶ ಎಲಿಗಾರ್, ಪ್ರಧಾನ ಕಾರ್ಯದರ್ಶಿ ಧರ್ಮರಾಜ್ ವಿ.ಏಕಬೋಟೆ ಇತರರ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆಸಿದ ಪತ್ರ ಬರಹಗಾರರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಉಪ ನೋಂದಣಾಧಿಕಾರಿ ಕಚೇರಿ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದರು.

ಇದೇ ವೇಳೆ ಮಾತನಡಿದ ಡಿ.ಕೆ.ಸಂಗಮೇಶ ಎಲಿಗಾರ್, ಪತ್ರ ಬರಹಗಾರರ ಸಮಸ್ಯೆಗಳ ಕುರಿತಂತೆ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಭಾಗಿಯಾಗಿರುವ ಕಂದಾಯ ಇಲಾಖೆಯ ಸಚಿವರಿಗೆ ಒಕ್ಕೂಟದ ನೇತೃತ್ವದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಪತ್ರ ಬರಹಗಾರರು ತೆರಳಿ, ಮನವಿ ಸಲ್ಲಿಸಲಿದ್ದೇವೆ. ಒಂದು ವೇಳೆ ನಮ್ಮ ಬೇಡಿಕೆಗೆ ಸಚಿವರು, ರಾಜ್ಯ ಸರ್ಕಾರದ ಕಡೆಯಿಂದ ಸ್ಪಂದನೆ ಸಿಗದಿದ್ದರೆ ಹೈಕೋರ್ಟ್ ಮೊರೆ ಹೋಗುತ್ತೇವೆ ಎಂದರು.

ಫೇಸ್‌ಲೆಸ್ ಮತ್ತು ಪೇಪರ್‌ ಲೆಸ್ ನೋಂದಣಿ ಕಾರ್ಯ ಪ್ರಾರಂಭವಾದರೆ ಪತ್ರ ಬರಹಗಾರಿಗೆ ಯಾವುದೇ ರೀತಿ ಬರವಣಿಗೆ ಕಾರ್ಯ ಇಲ್ಲದಂತಾಗುತ್ತದೆ. ಅಂದರೆ ಪತ್ರ ಬರಹಗಾರರನ್ನು ಹುದ್ದೆಯನ್ನೇ ತಟಸ್ಥಗೊಳಿಸುವ ಷಡ್ಯಂತ್ರ ಇದರ ಹಿಂದಿದೆ. ಇದೇ ವೃತ್ತಿ ಅವಲಂಭಿಸಿ ರಾಜ್ಯಾದ್ಯಾಂತ 12000ಕ್ಕೂ ಹೆಚ್ಚಿನ ಪತ್ರ ಬರಹಗಾರರು, ಸಹಾಯಕರು, ಕುಟುಂಬ ವರ್ಗವು ಬೀದಿ ಪಾಲಾಗುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಸಿದರು.

ನಕಲಿ ನೋಂದಣಿಗಳಿಗೆ ಮತ್ತು ಡಬಲ್ ರಿಜಿಸ್ಟ್ರೇಷನ್‌ಗಳಿಗೆ ಸರ್ಕಾರವೇ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಸಾರ್ವಜನಿಕರ ಆಸ್ತಿ ಅಭದ್ರತೆಯಾಗುತ್ತದೆ. ಇಸಿಯಲ್ಲಿ ಕೇವಲ ಇ-ಸ್ವತ್ತಿನ ಸಂಖ್ಯೆ ಮತ್ತು ಅಳತೆ ಮಾತ್ರ ಬರುವುದರಿಂದ, ಕ್ರಯಪತ್ರ, ದಾನಪತ್ರ, ಹಕ್ಕು ಖುಲಾಸೆ ಪತ್ರ, ಪಾಲು ವಿಭಾಗ ಪತ್ರ, ಅದಲು ಬದಲಾವಣೆ ಪತ್ರ, ತಿದ್ದುಪಡಿ ಪತ್ರ, ಕ್ರಯದ ಕರಾರು ಪತ್ರ, ಇತರ ಆಸ್ತಿ ಮೇಲೆ ಸಾಲ ಸೌಲಭ್ಯ ಪಡೆಯುವುದರಿಂದಲೂ ಸಾರ್ವಜನಿಕರು ವಂಚಿತರಾಗುತ್ತಾರೆ ಎಂದರು.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಧರ್ಮರಾಜ ವಿ.ಏಕಭೋಟೆ ಮಾತನಾಡಿ, ಅನ್ಯ ರಾಜ್ಯದಲ್ಲಿರುವಂತೆ ನಮ್ಮ ರಾಜ್ಯದಲ್ಲೂ ಸಹ ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್ ನೀಡಬೇಕು. ನೋಂದಾವಣೆಯಾಗುವ ಎಲ್ಲಾ ದಸ್ತಾವೇಜುಗಳಿಗೆ ಕಡ್ಡಾಯವಾಗಿ ಪತ್ರ ಬರಹಗಾರರ ಅಥವಾ ವಕೀಲ ಚಿಕ್ಕಲಂ ಕಡ್ಡಾಯಗೊಳಿಸಬೇಕು ಎಂದು ಮನವಿ ಮಾಡಿದರು.

ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ವಿ.ಶಿವಾನಂದ, ಬಿ.ವಿ.ರಾಜಶೇಖರ, ಕೃಷ್ಣ ಮೂರ್ತಿ, ರಾಜಶೇಖರ, ಕೆ.ಎಸ್.ಗುರುರಾಜ, ಮಧುಸೂದನ್, ಎಚ್.ಎಸ್.ಮಾರುತಿ, ಯಲ್ಲಪ್ಪ, ವೈ.ಆರ್.ಶಿವರಾಜ, ಯು.ಎಂ.ಪ್ರಮೋದ, ಶ್ರೀನಾಥ, ಕರಿಬಸಪ್ಪ, ಜಿ.ವೈ.ಬಸವರಾಜಪ್ಪ, ಟಿ.ರಮೇಶ, ಎಸ್.ಮೆಹಬೂಬ್, ಬಿ.ಎನ್.ಜಗದೀಶ, ಎಂ.ಮಲ್ಲಿಕಾರ್ಜುನ, ಶಂಷುದ್ದೀನ್, ಬಿ.ಶಿವರಾಜ, ವೀರಣ್ಣ, ರಂಗಪ್ಪ, ಬಸವರಾಜ, ಎಂ.ಜಿ.ಬಣಕಾರ್, ರಾಜು ಬಣಕಾರ್, ಅರ್ಜುನ, ಅರುಣ, ಆಕಾಶ, ಗಂಗಾಧರ, ಮುತ್ತುರಾಜ, ಶಿವರಾಜ, ಚಂದ್ರಶೇಖರ, ಭರತ, ಸಂಪತ್ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿವೇಕಾನಂದ ಲೇಔಟ್‌ ಪಾರ್ಕ್ ಜಾಗ ನೀಡಲ್ಲ: ದೂಡಾ ಆಯುಕ್ತ
ಡಿ.ಟಿ.ಶ್ರೀನಿವಾಸ್‌ಗೆ ಸಚಿವ ಸ್ಥಾನ ನೀಡಿ