ಗ್ರಂಥಾಲಯು ಜ್ಞಾನ ಭಂಡಾರ ಹೆಚ್ಚಿಸುವ ದೇಗುಲಗಳು: ವೈ.ಎಸ್.ಸುಬ್ರಮಣ್ಯ

KannadaprabhaNewsNetwork |  
Published : Feb 22, 2026, 01:30 AM IST
ನರಸಿಂಹರಾಜಪುರ ತಾಲೂಕಿನ ಗಡಿ ಭಾಗದ ಕುದುರೆಗುಂಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ನೂತನ ಅಕ್ಷರ ಲೋಕ ಗ್ರಂಥಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೊಪ್ಪದ ಯಡಗರೆ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ವೈ.ಎಸ್.ಸುಬ್ರಮಣ್ಯ ಚಿತ್ರಕತೆ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಂಕ ಪಟ್ಟಿ ವಿತರಿಸಿದರು. | Kannada Prabha

ಸಾರಾಂಶ

ನರಸಿಂಹರಾಜಪುರಗ್ರಂಥಾಲಯ ಜ್ಞಾನ ಭಂಡಾರ ಹೆಚ್ಚಿಸುವ ದೇಗುಲಗಳಿದ್ದಂತೆ ಎಂದು ಕೊಪ್ಪದ ಯಡಗೆರೆ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ವೈ.ಎಸ್.ಸುಬ್ರಮಣ್ಯ ತಿಳಿಸಿದರು.

- ಕುದುರೆಗುಂಡಿ ಸರ್ಕಾರಿ ಶಾಲೆಯಲ್ಲಿ ಅಕ್ಷರ ಲೋಕ ಗ್ರಂಥಾಲಯ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಗ್ರಂಥಾಲಯ ಜ್ಞಾನ ಭಂಡಾರ ಹೆಚ್ಚಿಸುವ ದೇಗುಲಗಳಿದ್ದಂತೆ ಎಂದು ಕೊಪ್ಪದ ಯಡಗೆರೆ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ವೈ.ಎಸ್.ಸುಬ್ರಮಣ್ಯ ತಿಳಿಸಿದರು.

ಶುಕ್ರವಾರ ಕುದುರೆಗುಂಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ನೂತನವಾಗಿ ಪ್ರಾರಂಭಗೊಂಡ ಅಕ್ಷರ ಲೋಕ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದರು. ಶಾಲೆಗಳಲ್ಲಿ ಗ್ರಂಥಾಲಯ ಇದ್ದರೆ ವಿದ್ಯಾರ್ಥಿಗಳಿಗೆ ಓದುವ ಅಭ್ಯಾಸ ಹೆಚ್ಚಾಗಲಿದೆ. ಕುತೂಹಲದಿಂದ ಪುಸ್ತಕ ಓದುತ್ತಾ ಮುಂದೆ ನಿರಂತರ ಓದುವ ರೂಡಿಯಾಗುತ್ತದೆ. ಶಿಕ್ಷಕರ ಪರಿಶ್ರಮದಿಂದ ಪ್ರಾರಂಭವಾದ ಗ್ರಂಥಾಲಯವನ್ನು ಮಕ್ಕಳು ಉಪಯೋಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕುದುರೆಗುಂಡಿ ಸರ್ಕಾರಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ಧನಂಜಯ ಮೇದೂರ ಮಾತನಾಡಿ, ಗ್ರಂಥಾಲಯ ನಿರ್ಮಿ ಸಲು ಕ್ಯಾಂಪ್ಕೋ ಸಂಸ್ಥೆ ₹1 ಲಕ್ಷ ಹಾಗೂ ಹಲವಾರು ದಾನಿಗಳು ದೇಣಿಗೆ ನೀಡಿದ್ದಾರೆ. ಗ್ರಂಥಾಲಯ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ದಾರಿ ದೀಪವಾಗಲಿದೆ ಎಂದರು. ಗ್ರಂಥಾಲಯ ಉದ್ಘಾಟನೆ ನೆನಪಿಗಾಗಿ ವಿದ್ಯಾರ್ಥಿಗಳೇ ರಚಿಸಿದ ಚಿಗರು ಎಂಬ ಕೃತಿಯನ್ನು ಪೋಷಕರಾದ ಶಾಲಿನಿ ಸಂತೋಷ್ ಬಿಡುಗಡೆ ಮಾಡಿದರು. ಅಕ್ಷರ ಲೋಕ ಎಂಬ ನಾಮಾಂಕಿತ ಫಲಕವನ್ನು ಪೋಷಕ ಮನೋಹರ್ ಅನಾವರಣಗೊಳಿಸಿದರು. ದಾನಿಗಳ ಮಾಹಿತಿ ಫಲಕವನ್ನು ದಾನಿ ವೈ.ಎಸ್.ಮಹೇಶ್ ಅನಾವರಣಗೊಳಿಸಿದರು. ದಾನ ನೀಡಿದ ಎಲ್ಲರನ್ನು ಗೌರವಿಸಲಾಯಿತು. ಚಿತ್ರ ಕಲೆ ಪರೀಕ್ಷೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಅಂಕ ಪಟ್ಟಿ ವಿತರಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿಎಂಸಿ ಅಧ್ಯಕ್ಷ ಪಾಪಣ್ಣ ವಹಿಸಿದ್ದರು. ಸಭೆಯಲ್ಲಿ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ನುಗ್ಗಿ ಮಂಜುನಾಥ್, ಎಸ್.ಡಿಎಂಸಿ ಸದಸ್ಯರಾದ ಸತೀಶ್, ಮಂಜುನಾಥ್, ಅಶ್ವಿನಿ, ನೀತುಶ್ರೀ, ಉಮಾ, ಶಾಲಿನಿ, ಸಹ ಶಿಕ್ಷಕರಾದ ಶಂಕರಗೌಡ, ಶಿಲ್ಪ ವಿ ಭಟ್, ವಾಣಿ, ಉಷಾ, ರೂಪ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾಂಡವಪುರ: ಬೇಬಿ ಬೆಟ್ಟ ಜಾತ್ರೆಯಲ್ಲಿ ಎತ್ತುಗಳ ಆಕರ್ಷಣೆ
ಭಿನ್ನತೆಗಳ ಮರೆತು ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದೇನೆ