ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಹಬ್ಬದ ಪೂರ್ವಭಾವಿಯಾಗಿ ಶ್ರೀಕಂಚಿನ ಮಾರಮ್ಮನವರಿಗೆ ಕಂಬ ಹಾಕಲಾಗಿದ್ದು ಶ್ರೀಪಟ್ಟಲದಮ್ಮನ ಕೊಂಡೋತ್ಸವ ಸಹ ಗ್ರಾಮಸ್ಥರ ಸಮ್ಮುಖದಲ್ಲಿ ಜರುಗಿದ್ದು ಗ್ರಾಮದ ಶಕ್ತಿ ದೇವತೆ ಶ್ರೀಕಂಚಿನ ಮಾರಮ್ಮ ಹಬ್ಬಕ್ಕೆ ಗ್ರಾಮ ಸಜ್ಜಾಗಿದೆ.
ಫೆ.23ರಂದು ಸಂಜೆ ಶ್ರೀಬಸವೇಶ್ವರ ಸ್ವಾಮಿ ಕೊಂಡ ಬಂಡಿ ಉತ್ಸವ ಫೆ.24 ರಂದು ಬೆಳಗ್ಗೆ 6 ಗಂಟೆಗೆ ಶ್ರೀಬಸವೇಶ್ವರ ಸ್ವಾಮಿ ಕೊಂಡೋತ್ಸವ ಮತ್ತು ಗ್ರಾಮದಲ್ಲಿ ಮೆರವಣಿಗೆ ಉತ್ಸವ ಜರುಗಲಿದೆ.ಫೆ.25ರ ಸಂಜೆ 6 ಗಂಟೆಗೆ ಶ್ರೀಕಂಚಿನ ಮಾರಮ್ಮನವರ ಕೊಂಡ ಬಂಡಿ ಉತ್ಸವ ಫೆ.26ರಂದು ಶ್ರೀ ವೀರಮಸ್ತಿ ಕೆಂಪಮ್ಮನವರ ಕರಗ ಉತ್ಸವ, ಸಂಜೆ 4 ಗಂಟೆಗೆ ಶ್ರೀ ಕಂಚಿನ ಮಾರಮ್ಮನವರ ಹೂ ಹೊಂಬಾಳೆ ಮತ್ತು ಬಾಯಿಬೀಗ ಮತ್ತು ಸಂಜೆ 6 ಗಂಟೆಗೆ ಶ್ರೀಕಂಚಿನ ಮಾರಮ್ಮನವರ ಕೊಂಡೋತ್ಸವ ಮತ್ತು ಮೆರವಣಿಗೆ ಉತ್ಸವ ವಿಜೃಂಭಣೆಯಿಂದ ಜರುಗಲಿದೆ.
ನಾಳೆ ಶ್ರೀಕಾಳಲಿಂಗೆಶ್ವರ ಸ್ವಾಮಿ ಉತ್ಸವ
ತಾಲೂಕಿನ ಮಾರಸಿಂಗನಹಳ್ಳಿ ಗ್ರಾಮದಲ್ಲಿ ನೆಲೆಗೊಂಡಿರುವ ಶ್ರೀ ಕಾಳಲಿಂಗೇಶ್ವರ ಸ್ವಾಮಿ 26ನೇ ವರ್ಷದ ಕರಗ ಮಹೋತ್ಸವವು ಫೆ.23 ರಂದು ಜರುಗಲಿದೆ. ಫೆ.22ರಂದು ಗ್ರಾಮದಲ್ಲಿರುವ ಶ್ರೀ ಕಾಳಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಸಂಜೆ ಹೋಮ ಮತ್ತು ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಫೆ.23ರಂದು ಬೆಳಗ್ಗೆ 9 ಗಂಟೆಯಿಂದ 12 ಗಂಟೆಯವರೆಗೆ ಗ್ರಾಮದಲ್ಲಿ ದೇವರ ಕರಗ ಉತ್ಸವ ಮೆರವಣಿಗೆ ಹಾಗು ದೇವಸ್ಥಾನ ಆವರಣದಲ್ಲಿ ಮಹಾ ಮಂಗಳಾರತಿ ಮತ್ತು ಅನ್ನ ಸಂತರ್ಪಣೆ ಜರುಗಲಿದೆ.