ಚನ್ನಪಟ್ಟಣ: ವಕೀಲರಿಗೆ ಗ್ರಂಥಾಲಯ ಜ್ಞಾನಮಂಟಪವಿದ್ದಂತೆ, ಅದನ್ನು ಸಮರ್ಪಕವಾಗಿ ಬಳಸಿಕೊಂಡು ವೃತ್ತಿಯಲ್ಲಿ ಪ್ರಬುದ್ಧತೆ ಬೆಳೆಸಿಕೊಂಡು ಕಕ್ಷಿದಾರರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಶಿವಶಂಕರೇಗೌಡ ಸಲಹೆ ನೀಡಿದರು.
ವ್ಯಾಜ್ಯಗಳ ಹೆಚ್ಚಳ: ಆಧುನಿಕತೆ, ತಂತ್ರಜ್ಞಾನ ಬೆಳೆದಂತೆ ಹೊಸ ರೀತಿಯ ವ್ಯಾಜ್ಯಗಳು ನ್ಯಾಯಾಲಯಕ್ಕೆ ಬರುವುದು ಹೆಚ್ಚಾಗುತ್ತಿದೆ. ಪ್ರತಿನಿತ್ಯ ಹೊಸ ಬಗೆಯ ವ್ಯಾಜ್ಯಗಳೊಂದಿಗೆ ಜನ ನ್ಯಾಯಾಲಯದ ಮೆಟ್ಟಿಲೇರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಕೀಲರು ಆಪ್‌ಡೇಟ್ ಆಗುವುದು ಮುಖ್ಯ. ಇತ್ತೀಚಿನ ದಿನಗಳಲ್ಲಿ ವಕೀಲ ವೃತ್ತಿಯ ಕಡೆಗೆ ಸಾಕಷ್ಟು ಮಂದಿ ಆಕರ್ಷಿತರಾಗುತ್ತಿದ್ದು, ವಕೀಲರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು ಬೇರೆಲ್ಲಾ ಕ್ಷೇತ್ರಗಳಿಗಿಂತ ನ್ಯಾಯಾಂಗ ಕ್ಷೇತ್ರ ಹೆಚ್ಚು ಅವಕಾಶಗಳನ್ನು ನೀಡುತ್ತಿದೆ. ವಕೀಲರು ವೃತ್ತಿಪರತೆ ಬೆಳೆಸಿಕೊಳ್ಳಬೇಕು ಎಂದರು.
ಇತ್ತಿಚ್ಚಿನ ದಿನಗಳಲ್ಲಿ ವಕೀಲ ವೃತ್ತಿಗೆ ಬರುತ್ತಿರುವ ಯುವಕ ಯುವತಿಯರಲ್ಲಿ ಏಕಾಗ್ರತೆ ಮತ್ತು ಕಮಿಟ್‌ಮೆಂಟ್ ಕಡಿಮೆಯಾಗುತ್ತಿದೆ. ಇದರಿಂದ ವೃತ್ತಿಯಲ್ಲಿ ಹಿನ್ನಡೆ ಅನುಭವಿಸುವ ಅಪಾಯವಿದೆ. ನಿರಂತರ ಅಭ್ಯಾಸ ಮಾಡುವ ಜತೆಗೆ ವರ್ಕ್‌ಶಾಪ್‌ಗಳಲ್ಲಿ ಭಾಗವಹಿಸಬೇಕು. ಸಮಯ ಸಿಕ್ಕಾಗ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಹೈಕೋರ್ಟ್ ಮಾದರಿಯಲ್ಲೆ ತಲ್ಲೆ ಎತ್ತಿರುವ ಇಲ್ಲಿನ ಭವ್ಯ ನ್ಯಾಯಾಲಯದ ಸುತ್ತಾ ಕಾಂಪೌಂಡ್ ಹಾಗೂ ಗ್ರಂಥಾಲಯ ಬೇಡಿಕೆಗಳಿದ್ದು, ಅದರಲ್ಲೊಂದು ಕೋರಿಕೆ ಈಡೇರಿದೆ ಎಂದರು.ಶಾಸಕ ಸಿ.ಪಿ.ಯೋಗೇಶ್ವರ್ ಮಾತನಾಡಿ, ಚನ್ನಪಟ್ಟಣ ನ್ಯಾಯಾಲಯ ಕಟ್ಟಡ ನಿರ್ಮಾಣದ ವಿಚಾರದಲ್ಲಿ ನಾವು ಸಹ ಅಳಿಲು ಸೇವೆ ಸಲ್ಲಿಸಿದ್ದೆ. ಆದರೆ, ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ ಎಂಬ ಕೊರಗು ನನ್ನನ್ನು ಕಾಡುತಿತ್ತು. ಆದರೆ ಇಂದು ಗ್ರಂಥಾಲಯ ಉದ್ಘಾಟಿಸುವ ಮೂಲಕ ಆ ಕೊರಗು ನಿವಾರಣೆಯಾಗಿದೆ. ನಾನು ಸದಾ ವಕೀಲರ ಜತೆಗಿದ್ದು, ವಕೀಲರ ಕೆಲಸ ಕಾರ್ಯಗಳಿಗೆ ಸಹಕರಿಸುತ್ತೇನೆ ಎಂದು ತಿಳಿಸಿದರು.
ಪೋಟೊ೧೮ಸಿಪಿಟಿ೨:
ಪೋಟೊ೧೮ಸಿಪಿಟಿ೩: