ಬೆಂಗಳೂರಿನಲ್ಲಿ ಮೇ 26ರಂದು ಗ್ರಂಥಾಲಯ ಮೇಲ್ವಿಚಾರಕರಿಂದ ಧರಣಿ

KannadaprabhaNewsNetwork |  
Published : May 25, 2025, 01:26 AM IST
ಪೋಟೊ ಕ್ಯಾಪ್ಸನ್:ಗವಿಸಿದ್ದಪ್ಪ ಹಳ್ಳಾಕರ ಗ್ರಂಥಾಲಯ ಮೇಲ್ವಿಚಾರಕ ಸಂಘದ ಗದಗ ಜಿಲ್ಲಾ ಅಧ್ಯಕ್ಷ | Kannada Prabha

ಸಾರಾಂಶ

ಗ್ರಂಥಾಲಯ ಮೇಲ್ವಿಚಾರಕರು ಯಾವ ಇಲಾಖೆ ನೌಕರರು ಎಂದು ಪ್ರಶ್ನಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮೇ 26ರಂದು ರಾಜ್ಯದ ಎಲ್ಲ ಗ್ರಂಥಾಲಯ ಮೇಲ್ವಿಚಾರಕರಿಂದ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಗದಗ ಗ್ರಂಥಾಲಯ ಮೇಲ್ವಿಚಾರಕ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಗವಿಸಿದ್ದಪ್ಪ ಹಳ್ಳಾಕರ ತಿಳಿಸಿದ್ದಾರೆ.

ಡಂಬಳ: ಗ್ರಂಥಾಲಯ ಮೇಲ್ವಿಚಾರಕರು ಯಾವ ಇಲಾಖೆ ನೌಕರರು ಎಂದು ಪ್ರಶ್ನಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮೇ 26ರಂದು ರಾಜ್ಯದ ಎಲ್ಲ ಗ್ರಂಥಾಲಯ ಮೇಲ್ವಿಚಾರಕರಿಂದ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಗದಗ ಗ್ರಂಥಾಲಯ ಮೇಲ್ವಿಚಾರಕ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಗವಿಸಿದ್ದಪ್ಪ ಹಳ್ಳಾಕರ ತಿಳಿಸಿದ್ದಾರೆ.

ಈ ಕುರಿತು ಡಂಬಳ ಗ್ರಾಮದಲ್ಲಿ ಪತ್ರಿಕಾ ಪ್ರಕಟಣೆ ನೀಡಿರುವ ಅವರು ಗದಗ ಜಿಲ್ಲೆಯ ಎಲ್ಲಾ ಗ್ರಂಥಾಲಯ ಮೇಲ್ವಿಚಾರಕರು ಧರಣಿಯಲ್ಲಿ ಭಾಗಿಯಾಗಬೇಕು ಎಂದು ಕೋರಿದ್ದಾರೆ. ಗ್ರಂಥಾಲಯ ಮೇಲ್ವಿಚಾರಕರು ಕಳೆದ 25ರಿಂದ 30 ವರ್ಷದಿಂದ ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಕೆಲಸ ಮಾಡಿದ್ದಾರೆ. ನಮ್ಮನ್ನೂ ಆರ್‌ಡಿಪಿಆರ್‌ ಇಲಾಖೆಗೆ ಸೇರಿಸಿದರು. ಅದನ್ನು ಪ್ರಶ್ನಿಸಿ ಗ್ರಾಮ ಪಂಚಾಯತನವರು ಹೋರಾಟ ಮಾಡಿದರು. ಹಾಗಾದರೆ ನಾವು ಯಾವ ಇಲಾಖೆ ನೌಕರರು ಎಂದು ಸರ್ಕಾರ ಸ್ಪಷ್ಟಪಡಿಸಬೇಕು ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಧರಣಿ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಒಂದೆ ಸೇವಾ ನಿಯಮಾವಳಿ ತರುವುದರ ಮೂಲಕ ನಮ್ಮನ್ನು ಮುಂಬಡ್ತಿ ನೀಡಬೇಕೆಂದು ಇಲ್ಲವಾದರೆ ಮಾತೃ ಇಲಾಖೆಗೆ ಕಳಿಸಬೇಕು ಎಂದು ಆಗ್ರಹಿಸಿದ್ದಾರೆ. ಸಂಘದ ರಾಜ್ಯಾಧ್ಯಕ್ಷ ಸತ್ಯನಾರಾಯಣ ನೇತೃತ್ವದಲ್ಲಿ ಹೋರಾಟ ಜರುಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸರ್ಕಾರದ ಗಮನ ಸೆಳೆಯಬೇಕೆಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ವೀರೇಶ ತಮ್ಮನಗೌಡರ, ಖಜಾಂಚಿ ಭಗವಂತ ತಾರಿಕೊಪ್ಪ, ಜಿಲ್ಲಾ ಸಂಚಾಲಕರಾದ ಹಾಲಪ್ಪ ಕೋರ್ಲಹಳ್ಳಿ, ಮುಂಡರಗಿ ತಾಲೂಕು ಅಧ್ಯಕ್ಷ ಪ್ರೇಮಜಿ ಪವಾರ, ಕಾರ್ಯದರ್ಶಿ ಅಂದಪ್ಪ ತುರ್ಕಾನಿ‌, ಗ್ರಂಥ ಪಾಲಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5000 ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ : ಲಕ್ಷ್ಮೀ
ನಾಯಿಗಳ ಮೇಲೂ ತೆರಿಗೆ ಹೇರಿಕೆಗೆ ಮುಂದಾದ ಸರ್ಕಾರ!