ಅರಸೀಕೆರೆ ಪಟ್ಟಣದಲ್ಲಿರುವ ಎಲ್ಐಸಿ ಶಾಖಾ ಕಚೇರಿಯಲ್ಲಿ ಆಯೋಜಿಸಿದ್ದ 68ನೇ ವಾರ್ಷಿಕೋತ್ಸವ ಹಾಗೂ ವಿಮಾ ಸಪ್ತಾಹ ಉದ್ಘಾಟಿಸಿ ಮಾತನಾಡಿದ ಅವರು, ಸೆಪ್ಟೆಂಬರ್ ಒಂದರಿಂದ 9ನೇ ತಾರೀಕಿನವರೆಗೂ ಆಯೋಜಿಸಿರುವ ವಿಮಾ ಸಪ್ತಾಹದಲ್ಲಿ ಪ್ರತಿನಿಧಿಗಳಿಗೆ ಗ್ರಾಹಕರಿಗೆ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ವಿಮಾ ನೌಕರರಿಗೆ ಹಾಗೂ ಸಾರ್ವಜನಿಕರಿಗೆ ಆಯೋಜಿಸಿರುವ ವಿವಿಧ ಕ್ರೀಡೆಗಳು, ಪ್ರಬಂಧ ಸ್ಪರ್ಧೆ, ರಸಪ್ರಶ್ನೆ ಕಾರ್ಯಕ್ರಮ, ಹಾಡುಗಾರಿಕೆ ಹಾಗೂ ಮ್ಯಾರಥಾನ್ ಮತ್ತು ಪ್ರತಿನಿಧಿಗಳ ಸಾಧನೆಗೆ ತಕ್ಕಂತೆ ಅವರಿಗೆ ಸನ್ಮಾನ ಏರ್ಪಡಿಸಲಾಗಿದೆ ಎಂದು ಜೀವ ವಿಮಾ ನಿಗಮ ಎಂದು ಶಾಖಾ ಪ್ರಬಂಧಕ ಬಲವಂತ ಮಾರುತಿ ಹೇಳಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಪ್ರಪಂಚದಲ್ಲೇ ಉತ್ತಮ ಹಣಕಾಸಿನ ವ್ಯವಹಾರವನ್ನು ಹೊಂದಿರುವ ಹಾಗೂ ಜನಸಾಮಾನ್ಯರಿಗೆ ಕ್ಷಿಪ್ರ ಗತಿಯಲ್ಲಿ ಹಣ ಸಂದಾಯ ಮಾಡುವ ಏಕೈಕ ಸಂಸ್ಥೆ ಎಂದರೆ ಭಾರತೀಯ ಜೀವ ವಿಮಾ ನಿಗಮ ಎಂದು ಶಾಖಾ ಪ್ರಬಂಧಕ ಬಲವಂತ ಮಾರುತಿ ಹೇಳಿದರು. ಪಟ್ಟಣದಲ್ಲಿರುವ ಎಲ್ಐಸಿ ಶಾಖಾ ಕಚೇರಿಯಲ್ಲಿ ಆಯೋಜಿಸಿದ್ದ 68ನೇ ವಾರ್ಷಿಕೋತ್ಸವ ಹಾಗೂ ವಿಮಾ ಸಪ್ತಾಹ ಉದ್ಘಾಟಿಸಿ ಮಾತನಾಡಿದ ಅವರು, ಸೆಪ್ಟೆಂಬರ್ ಒಂದರಿಂದ 9ನೇ ತಾರೀಕಿನವರೆಗೂ ಆಯೋಜಿಸಿರುವ ವಿಮಾ ಸಪ್ತಾಹದಲ್ಲಿ ಪ್ರತಿನಿಧಿಗಳಿಗೆ ಗ್ರಾಹಕರಿಗೆ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ವಿಮಾ ನೌಕರರಿಗೆ ಹಾಗೂ ಸಾರ್ವಜನಿಕರಿಗೆ ಆಯೋಜಿಸಿರುವ ವಿವಿಧ ಕ್ರೀಡೆಗಳು, ಪ್ರಬಂಧ ಸ್ಪರ್ಧೆ, ರಸಪ್ರಶ್ನೆ ಕಾರ್ಯಕ್ರಮ, ಹಾಡುಗಾರಿಕೆ ಹಾಗೂ ಮ್ಯಾರಥಾನ್ ಮತ್ತು ಪ್ರತಿನಿಧಿಗಳ ಸಾಧನೆಗೆ ತಕ್ಕಂತೆ ಅವರಿಗೆ ಸನ್ಮಾನ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಾರ್ಷಿಕೋತ್ಸವದ ಮುಖ್ಯ ಅತಿಥಿಯಾಗಿ ಮೊದಲ ವಿಮಾ ಕಂತನ್ನ ಪಾವತಿಸಿದ ಕುಮಾರವರಿಗೆ ಸನ್ಮಾನಿಸಲಾಯಿತು ಹಾಗೂ ಮೈಸೂರು ವಿಭಾಗದಲ್ಲೇ ಪ್ರಥಮ ಸ್ಥಾನ ಗಳಿಸಿದ್ದ ಅಭಿವೃದ್ಧಿ ಅಧಿಕಾರಿ ಜೈಪಾಲ್ ಎಚ್, ಬೆಟ್ಟನಾರ್ ಹಾಗೂ ಸಿಎಲ್‌ಐಎ ಆರ್ ಎಂ ಲೋಕೇಶ್ ರವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಉಪಶಾಖಾಧಿಕಾರಿ ಶ್ರೀನಿವಾಸ್ ಮಾತನಾಡಿ, ಭಾರತೀಯ ಜೀವ ವಿಮಾ ನಿಗಮದ ನಮ್ಮ ಶಾಖೆ ಮೂರು ಸಾವಿರ ಪಾಲಿಸಿ ದಾರರಿಗೆ ವಿಮೆ ನೀಡಿ ಮೈಸೂರು ವಿಭಾಗದಲ್ಲಿ ಪ್ರಥಮ ಸ್ಥಾನ ಹೊಂದಿದೆ ಹಾಗೂ ವಿಮಾ ನಿಗಮದ ಬಗ್ಗೆ ಸವಿವರವಾಗಿ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕವಿತಾ, ಉಮಾ, ಶ್ರೀಲಕ್ಷ್ಮೀ, ರಮ್ಯ ಸೇರಿದಂತೆ ಈ ಸಂದರ್ಭದಲ್ಲಿ ನೂರಾರು ವಿಮಾ ಪ್ರತಿನಿಧಿಗಳು ಭಾಗವಹಿಸಿ ಸಿಹಿ ಹಂಚಿ ಸಂಭ್ರಮಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.