ಧರ್ಮ ಪರಿಪಾಲನೆಯಿಂದ ಮುನ್ನಡೆದರೆ ಬದುಕು ಆದರ್ಶಮಯ

KannadaprabhaNewsNetwork |  
Published : May 13, 2025, 01:20 AM IST
12ಎಚ್ಎಸ್ಎನ್15ಎ :  | Kannada Prabha

ಸಾರಾಂಶ

ಧರ್ಮದ ಪರಿಪಾಲನೆಯಿಂದ ಮನ್ನಡೆದರೆ ಬದುಕು ಆದರ್ಶಗೊಳ್ಳುತ್ತದೆ. ಅಲ್ಲದೆ ಸತ್ಕಾರ್ಯಗಳಿಂದ ಮನುಷ್ಯ ಅಂತರಂಗ ಪರಿಶುದ್ಧವಾಗುತ್ತದೆ ಎಂದು ಬಾಳೆಹೂನ್ನೂರು ಶ್ರೀಮದ್ ರಂಬಾಪುರಿ ೧೦೦೮ ಜಗದ್ಗುರು ಡಾ. ವೀರ ಸೋಮೇಶ್ವರ ಜಗದ್ಗುರು ಭಗವತ್ಪಾದರು ತಿಳಿಸಿದ್ದಾರೆ. ಮುಸುವತ್ತೂರಿನ ನೂತನ ಶ್ರೀ ವೀರಭದ್ರೇಶ್ವರ ದೇವಸ್ಥಾನ ಪುನರ್ ನಿರ್ಮಾಣ ಪ್ರಾಣ ಪ್ರತಿಷ್ಠಾಪನೆ ಮತ್ತು ಶ್ರೀ ಶಂಭುಲಿಂಗೇಶ್ವೇರ ಜಂಪೋತ್ಸವದ ಅಂಗವಾಗಿ ಜರುಗಿದ ಜನ ಜಾಗೃತಿ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬಸವಾಪಟ್ಟಣ

ಧರ್ಮದ ಪರಿಪಾಲನೆಯಿಂದ ಮನ್ನಡೆದರೆ ಬದುಕು ಆದರ್ಶಗೊಳ್ಳುತ್ತದೆ. ಅಲ್ಲದೆ ಸತ್ಕಾರ್ಯಗಳಿಂದ ಮನುಷ್ಯ ಅಂತರಂಗ ಪರಿಶುದ್ಧವಾಗುತ್ತದೆ ಎಂದು ಬಾಳೆಹೂನ್ನೂರು ಶ್ರೀಮದ್ ರಂಬಾಪುರಿ ೧೦೦೮ ಜಗದ್ಗುರು ಡಾ. ವೀರ ಸೋಮೇಶ್ವರ ಜಗದ್ಗುರು ಭಗವತ್ಪಾದರು ತಿಳಿಸಿದ್ದಾರೆ.

ಮುಸುವತ್ತೂರಿನ ನೂತನ ಶ್ರೀ ವೀರಭದ್ರೇಶ್ವರ ದೇವಸ್ಥಾನ ಪುನರ್ ನಿರ್ಮಾಣ ಪ್ರಾಣ ಪ್ರತಿಷ್ಠಾಪನೆ ಮತ್ತು ಶ್ರೀ ಶಂಭುಲಿಂಗೇಶ್ವೇರ ಜಂಪೋತ್ಸವದ ಅಂಗವಾಗಿ ಜರುಗಿದ ಜನ ಜಾಗೃತಿ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ ತಿಳಿಸಿದರು.ಭಗವಂತನಿಂದ ನಿರ್ಮಿತವಾದ ಈ ಜಗತ್ತಿನಲ್ಲಿ ಇರುವುದೆಲ್ಲವೂ ಅಮುಲ್ಯ ಸಂಪತ್ತು. ಮಣ್ಣು , ನೀರು ಬೆಂಕಿ, ಗಾಳಿ, ಕಲ್ಲು ಎಲ್ಲವಲ್ಲೂ ದೇವರನ್ನು ಕಂಡು ಪೂಜಿಸಿದವರು ಭಾರತೀಯರು. ಮುನಷ್ಯ ಚಿನ್ನವಿಲ್ಲದೆ ಜೀವಿಸಬಹುದು ಆದರೆ ಅನ್ನವಿಲ್ಲದೆ ಜೀವಿಸಲಾರ. ಬದುಕುಪೂರ ದೇಹ, ಮನ, ಬುದ್ಧಿ, ಕೈಕಾಲು ಇವೆಲ್ಲವೂ ನಿಜವಾದ ಸಂಪತ್ತುಗಳೇ. ಬೆಲೆಬಾಳುವ ವಸ್ತುಗಳಿಂದ ಉತ್ತಮ ಧರ್ಮಪರಿಪಾಲನೆಯನ್ನು ಮಾಡಿ ಮುನ್ನಡೆದರೆ ಬದುಕು ಆದರ್ಶಗೊಳ್ಳುತ್ತದೆ. ಮನುಷ್ಯನಿಗೆ ಆದ್ಯಾತ್ಮ ಚಿಂತನೆ ಆಗತ್ಯ. ಹಲವರು ನಮ್ಮ ಧರ್ಮದ ಮೇಲೆ ಅಪಪ್ರಚಾರ ಮಾಡಲು ಮುಂದಾಗಿದ್ದರೂ ನೂರಾರು ವರ್ಷಗಳಿಂದ ನಮ್ಮ ಹಿಂದೂ ಧರ್ಮ ಎಲ್ಲವನ್ನೂ ಮೆಟ್ಟಿನಿಂತು ಉಜ್ವಲವಾಗುತ್ತಾ ಬಂದಿದೆ. ಆದರೂ ಹಲವಾರು ಧರ್ಮದ ಹಾದಿಯಲ್ಲಿ ಸಾಗಲು ಶ್ರಮಿಸಬೇಕು ಎಂದರು.

ರಾಜ್ಯದಲ್ಲಿ ನಡೆಯುವ ಜನಗಣತಿ ವೇಳೆ ಸಮಾಜ ಬಂಧುಗಳು ವೀರಶೈವ ಲಿಂಗಾಯಿತ ಎಂದು ನಮೂದಿಸಲು ತಿಳಿಸಿದರು.

ಹೀರೆಮಠ ಸದಾಶಿವ ಶಿವಾಚಾರ್ಯ ಸ್ವಾಮಿಗಳು ಮತನಾಡಿ, ಮಾನವ ಜೀವನ ಅಮೂಲ್ಯ ದೇವರು ಕೊಟ್ಟ ಕೊಡುಗೆಗಳಿಗೆ ಸರಿಸಾಟಿ ಯಾವುದೂ ಇಲ್ಲ ಅರಿತು ಬಾಳುವುದಾದರೆ ಬಾಳು ಬಂಗಾರ ಮರೆತು ಬಾಳಿದರೆ ಬಾಳು ಬಂಧನಕಾರಿ ಸಂಪತ್ತು ಇತ್ಯಾದಿಗಳು ಕ್ಷಣಿಕ. ಗುರುವಿನ ಮಾರ್ಗದರ್ಶನವೇ ಅಮೂಲ್ಯವಾದದ್ದು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಗೇಂದ್ರ, ಅಖಿಲಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಬೆಮ್ಮತ್ತಿ ಸುರೇಶ್ ಸಹ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿಂದೂ ಧರ್ಮದ ಬಗ್ಗೆ ಹಾರಿಕ ಮಂಜುನಾಥ ಉತ್ತಮ ಉಪನ್ಯಾಸಕ್ಕೆ ಭಕ್ತಸಾಗರ ನಿಬ್ಬೆರಗಾಯಿತು.ಗ್ರಾಪಂ ಅಧ್ಯಕ್ಷ ಶ್ರೀಕಂಠಸ್ವಾಮಿ, ವಿವಿಧ ಮಠಗಳ ಶ್ರೀಗಳು, ಹರಗೂರು ಚರಮೂರ್ತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಜಗದ್ಗುರು ಬಾಗವತ್ಪಾದರು ಅಡ್ಡಪಲ್ಲಕ್ಕಿ ಉತ್ಸವ ಜರುಗಿತು. ಊದ್ದೂರು ವೀರಗಾಸೆ ಪ್ರದರ್ಶನ ಮತ್ತು ಸುಮಂಗಲಿಯರಿಂದ ಪೂರ್ಣಕುಂಭ ಸ್ವಾಗತವನ್ನು ನೀಡಲಾಗಿತು. ಆಗಮಿಸಿದ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಷೇತ್ರದ ಕೆಲಸವನ್ನು ತಲೆಮೇಲೆ ಹೊತ್ತು ಮಾಡುವೆ
ಜಾತಿ ವೈಷಮ್ಯಕ್ಕೆ ಅವಕಾಶವಿಲ್ಲ:ಡಾ. ತೌಫೀಕ್‌ ಪಾರ್ಥನಳ್ಳಿ