ಸಿದ್ದಾಪುರ: ಹಣ, ಆಸ್ತಿ, ಅಂತಸ್ತುಗಳೇ ಬದುಕಿನಲ್ಲಿ ಮುಖ್ಯವಲ್ಲ. ಸಂಸ್ಕೃತಿ, ಸಂಸ್ಕಾರವನ್ನು ಅಳವಡಿಸಿಕೊಂಡಾಗ ಜೀವನಕ್ಕೆ ಮಹತ್ವ ಬರುತ್ತದೆ. ಆದರೆ ಇಂದು ಸಂಸೃತಿ, ಸಂಸ್ಕಾರ ದೂರವಾಗುತ್ತಿದೆ ಎಂದು ಆನಂದಪುರದ ಶ್ರೀ ಮುರುಘರಾಜೇಂದ್ರ ಮಹಾಸಂಸ್ಥಾನ ಮಠ ಹಾಗೂ ಶಿವಮೊಗ್ಗ ಬೆಕ್ಕಿನ ಕಲ್ಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀ ಹೇಳಿದರು.
ಸೊರಬ ತಾಲೂಕಿನ ಜಡೆ ಸಂಸ್ಥಾನಮಠದ ಡಾ.ಮಹಾಂತ ಸ್ವಾಮಿಗಳು ಆಶೀರ್ವಚನ ನೀಡಿ, ಹೆಗ್ಗೋಡಮನೆ ಎನ್ನುವುದು ಹೆಗ್ಗಳಿಕೆ ಆಗಿದೆ. ಸಮಾಜಕ್ಕೆ ಪೂರಕವಾದ ಕೆಲಸಕಾರ್ಯಗಳನ್ನು ಮಾಡುತ್ತ ಶ್ರೇಷ್ಠತೆಯನ್ನು ಗಳಿಸಿಕೊಂಡು ಸಮಾಜದ ಗೌರವಕ್ಕೆ ಹೆಗ್ಗೋಡಮನೆ ಕಾರಣವಾಗಿದೆ. ಇಂತಹ ಕುಟುಂಬ ಮಲೆನಾಡಿನಲ್ಲಿ ಅಪರೂಪ ಎಂದರು.ಕಾನಳ್ಳಿ ಮಠದ ಪರಮೇಶ್ವರಯ್ಯ ಹೆಗ್ಗೋಡಮನೆಯ ಇತಿಹಾಸವನ್ನು ವಿವರಿಸಿದರು.
ಕುಟುಂಬದ ಹಿರಿಯರಾದ ಎಂ.ಎಸ್.ಗೌಡರ್ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದ ಪೂರ್ವದಲ್ಲಿ ಸಂಗೀತ ಕಾರ್ಯಕ್ರಮ ನಡೆಯಿತು.
ಕೆಳದಿ ರಾಜಗುರು ಮಹಾಮತ್ತಿನ ಭುವನಗಿರಿ ದುರ್ಗ ಸಂಸ್ಥಾನಮಠದ ಪಟ್ಟಾಧ್ಯಕ್ಷರಾದ ಶ್ರೀ ಮರುಳಸಿದ್ಧ ಶಿವಾಚಾರ್ಯ ಸ್ವಾಮಿಗಳವರ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಮನೆಯ ಹೆಣ್ಣುಮಕ್ಕಳಿಗೆ ಅರಿಶಿಣ ಕುಂಕುಮ ಭಾಗೀನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಹೆಗ್ಗೋಡಮನೆ ಕುಟುಂಬದ ಸದಸ್ಯರುಗಳಿದ್ದರು.ಸಿದ್ದಾಪುರ ತಾಲೂಕಿನ ಹೆಗ್ಗೋಡುಮನೆಯಲ್ಲಿ ಬೆಕ್ಕಿನ ಕಲ್ಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.