ಆಶ್ರಯ ಮನೆ ಹಂಚಿಕೆಯ ಫಲಾನುಭವಿಗಳ ಪಟ್ಟಿ ನ್ಯಾಯಸಮ್ಮತ

KannadaprabhaNewsNetwork |  
Published : May 26, 2025, 12:15 AM IST
25ಕೆಕೆಆರ್1:ಕುಕನೂರು ತಾಲೂಕಿನ ಚಂಡೂರು ಗ್ರಾಮದಲ್ಲಿ ಆಶ್ರಯ ಮನೆ ಹಂಚಿಕೆಯಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ, ಹಣ ಪಡೆದಿಲ್ಲ ಎಂದು ಜರುಗಿದ ಸುದ್ದಿಗೋಷ್ಠಿಯಲ್ಲಿ ಗ್ರಾಮದ ಅಪಾರ ಮಹಿಳೆಯರು ಭಾಗವಹಿಸಿದ್ದರು. | Kannada Prabha

ಸಾರಾಂಶ

ಪಿಡಿಓ ನೇತೃತ್ವದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ನಮ್ಮ ಮೇಲೆ ಆರೋಪ ಮಾಡುವಂತಹ ಗ್ರಾಮಸ್ಥರಿಗೂ ಮನೆಗಳನ್ನು ಆಯ್ಕೆ ಮಾಡಲಾಗಿದೆ.

ಕುಕನೂರು: ತಾಲೂಕಿನ ಚಂಡೂರು ಗ್ರಾಮದ ಆಶ್ರಯ ಯೋಜನೆಯ ಮನೆ ಹಂಚಿಕೆಯಲ್ಲಿ ಯಾವುದೆ ಭ್ರಷ್ಟಾಚಾರವಾಗಿಲ್ಲ. ಕಾನೂನು ರೀತಿಯಲ್ಲಿ ಸಭೆ ನಡೆಸಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಶಿರೂರು ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ ಸಣ್ಣಹನುಮಪ್ಪ ಜ್ಯೋತಿ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಂಡೂರು ಗ್ರಾಮದ ಬಡವರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಜಿಪಂ ಸದಸ್ಯರಾಗಿದ್ದ ಹನುಮಂತಗೌಡ ಪಾಟೀಲ್ ಆಶ್ರಯ ಮನೆ ನಿರ್ಮಾಣ ಮಾಡುವುದಕ್ಕಾಗಿ ೧೫ ವರ್ಷಗಳ ಹಿಂದೆ ಕಡಿಮೆ ಬೆಲೆಗೆ ಗ್ರಾಮಸ್ಥರ ಜೊತೆಗೂಡಿ ₹೩.೧೮ ಎಕರೆ ಭೂಮಿ ಖರೀದಿಸಿದ್ದರು. ಈಗ ಆ ಜಾಗದಲ್ಲಿ ೧೪೩ ಮನೆಗಳನ್ನು ಹಂಚಿಕೆ ಮಾಡುವುದಕ್ಕೆ ಶಿರೂರು ಗ್ರಾಪಂನಲ್ಲಿ ಸಭೆ ಕರೆಯಲಾಗಿತ್ತು. ನೋಟಿಸ್‌ ಹಚ್ಚಿ ಡಂಗೂರ್ ಸಾರಲಾಗಿದೆ. ಎಲ್ಲ ಗ್ರಾಮಸ್ಥರು ತಿಳಿಸಲಾಗಿತ್ತು, ಪಿಡಿಓ ನೇತೃತ್ವದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ನಮ್ಮ ಮೇಲೆ ಆರೋಪ ಮಾಡುವಂತಹ ಗ್ರಾಮಸ್ಥರಿಗೂ ಮನೆಗಳನ್ನು ಆಯ್ಕೆ ಮಾಡಲಾಗಿದೆ. ದುಡ್ಡು ತೆಗೆದುಕೊಂಡು ಆಯ್ಕೆ ಮಾಡಿರುವುದು ಸತ್ಯಕ್ಕೆ ದೂರವಾದ ಮಾತು. ನಿವೇಶನಕ್ಕೆ ಪಟ್ಟಿ ತಯಾರಿಸಿರುವಂತಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಇನ್ನು ಕೆಲವು ಬಡವರಿಗೆ ಮನೆ ಹಂಚಿಕೆ ಮಾಡಲಾಗುವುದು. ಸುಳ್ಳು ಆರೋಪ ಮಾಡುವುದರಿಂದ ಸತ್ಯ ಮುಚ್ಚಿಡಲು ಸಾಧ್ಯವಿಲ್ಲ ಎಂದು ಹೇಳಿದರು.

ಗ್ರಾಪಂ ಸದಸ್ಯ ಶಂಕ್ರಪ್ಪ ಕುರಿ, ಈರಪ್ಪ ಹಿರೇಮನಿ, ದೇವಪ್ಪ ಕುರಿ, ಗುಡದಪ್ಪ ನಿಂಗಾಪೂರ, ಮಲ್ಲಪ್ಪ ಜ್ಯೋತಿ, ಲಕ್ಷ್ಮಪ್ಪ ಸೇರಿದಂತೆ ಗ್ರಾಮಸ್ಥ ಅಪಾರ ಮಹಿಳೆಯರು ಸಹ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!