ಹೆಜಮಾಡಿ ಟೋಲ್‌: ಇವಿ ಹೈವೇ ಪ್ಯಾಟ್ರೋಲ್ ‘ರಾಜ್‌ಮಾರ್ಗ್ ಸಾಥಿ’ ಲೋಕಾರ್ಪಣೆ

KannadaprabhaNewsNetwork |  
Published : May 26, 2025, 12:14 AM IST
ಹೆಜಮಾಡಿ ಟೋಲ್‌  ನಲ್ಲಿ ಇವಿ ಹೈವೇ ಪ್ಯಾಟ್ರೋಲ್ ರಾಜ್‌ಮಾರ್ಗ್ ಸಾಥಿ ವಾಹನ ಲೋಕಾರ್ಪಣೆ  | Kannada Prabha

ಸಾರಾಂಶ

ರಾಷ್ಟ್ರೀಯ ಹೆದ್ದಾರಿಯಲ್ಲಿ ಸುವ್ಯವಸ್ಥೆ ಕಾಪಾಡುವ ಮಹತ್ವದ ಉದ್ದೇಶದೊಂದಿಗೆ ರಾಷ್ಟ್ರೀಯ ಹೆದ್ದಾರಿ 66 ರ ಕುಂದಾಪುರ-ತಲಪಾಡಿವರೆಗೆ ರಸ್ತೆ ನಿರ್ವಹಣೆಗಾಗಿ ಕೆ.ಕೆ.ಆರ್. ಹೈವೆ ಕನ್‌ಸ್ಟ್ರಕ್ಷನ್ ಸಂಸ್ಥೆಯ ಉಡುಪಿ ಟೋಲ್‌ವೇ ವತಿಯಿಂದ ಹೆಜಮಾಡಿ ಟೋಲ್ ಪ್ಲಾಝಾ ಬಳಿ ಇವಿ ಹೈವೇ ಪ್ಯಾಟ್ರೋಲ್ ರಾಜ್‌ಮಾರ್ಗ್ ಸಾಥಿ ವಾಹನಗಳನ್ನು ಲೋಕಾರ್ಪಣೆಗೊಳಿಸಲಾಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ದೇಶಾದ್ಯಂತ ರಾಷ್ತ್ರೀಯ ಹೆದ್ದಾರಿ ಸುವ್ಯವಸ್ಥೆಗಾಗಿ ರಾಜ್‌ಮಾರ್ಗ್ ಸಾಥಿ ರಸ್ತೆ ಗಸ್ತು ವಾಹನವನ್ನು ಬಿಡುಗಡೆಗೊಳಿಸಲಾಗಿದ್ದು ಪ್ರಥಮ ಬಾರಿಗೆ ಉಡುಪಿ ಟೋಲ್‌ವೇ ಕಂಪನಿ ಮೂಲಕ ಮೂರು ವಾಹನಗಳನ್ನು ಪರಿಚಯಿಸಲಾಗಿದೆ. ಸಾಸ್ತಾನ, ಹೆಜಮಾಡಿ ಮತ್ತು ತಲಪಾಡಿ ಟೋಲ್ ಪ್ಲಾಝಾ ಮೂಲಕ ಇವುಗಳು ಕಾರ್ಯಾಚರಿಸಲಿವೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಜಾವೇದ್ ಆಜ್ಮಿ ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಸುವ್ಯವಸ್ಥೆ ಕಾಪಾಡುವ ಮಹತ್ವದ ಉದ್ದೇಶದೊಂದಿಗೆ ರಾಷ್ಟ್ರೀಯ ಹೆದ್ದಾರಿ 66 ರ ಕುಂದಾಪುರ-ತಲಪಾಡಿವರೆಗೆ ರಸ್ತೆ ನಿರ್ವಹಣೆಗಾಗಿ ಕೆ.ಕೆ.ಆರ್. ಹೈವೆ ಕನ್‌ಸ್ಟ್ರಕ್ಷನ್ ಸಂಸ್ಥೆಯ ಉಡುಪಿ ಟೋಲ್‌ವೇ ವತಿಯಿಂದ ಹೆಜಮಾಡಿ ಟೋಲ್ ಪ್ಲಾಝಾ ಬಳಿ ಇವಿ ಹೈವೇ ಪ್ಯಾಟ್ರೋಲ್ ರಾಜ್‌ಮಾರ್ಗ್ ಸಾಥಿ ವಾಹನಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಸರ್ವ ಸುಸಜ್ಜಿತ ರಾಜ್‌ ಮಾರ್ಗ್ ಸಾಥಿ ಇಡೀ ದಿನ ನಿರ್ದಿಷ್ಟ ಸಮಯಗಳಲ್ಲಿ ತಮ್ಮ ವ್ಯಾಪ್ತಿಯಲ್ಲಿ ಸಂಚರಿಸಿ ರಸ್ತೆ ಹೊಂಡ, ರಸ್ತೆ ಅಡೆತಡೆಗಳನ್ನು ಗುರುತಿಸಿ ತಕ್ಷಣ ತೆರವು ಮಾಡಿ ಸುಗಮ ಸಂಚಾರ ವ್ಯವಸ್ಥೆ ಮಾಡಿಕೊಡುತ್ತದೆ. ಜೊತೆಗೆ ಪ್ರತಿದಿನವೂ ಸಂಚರಿಸಿ ರಸ್ತೆಗಳ ಸ್ಥಿತಿಗತಿ ಮೇಲ್ವಿಚಾರಣೆ ನಡೆಸಿ, ಸ್ವತಃ ದುರಸ್ತಿ ನಡೆಸಿ ಸಂಬಂಧಪಟ್ಟವರಿಗೆ ವರದಿ ಮಾಡಲಿದೆಯೆಂದು ಹೇಳಿದರು.

ಹೆದ್ದಾರಿ ಪ್ರಾಧಿಕಾರದ ಟೆಕ್ನಿಕಲ್ ಮ್ಯಾನೇಜರ್ ಕೆ. ಚಂದ್ರಶೇಖರ್, ಐ.ಇ. ಜ್ಞಾನೇಂದರ್ ಸಾಹು, ಎ.ಐ. ನವೀನ್, ಕೆಕೆಆರ್ ಟೋಲ್ ಪ್ಲಾಝಾದ ಉಪಾಧ್ಯಕ್ಷ ಅಣ್ಣಾಮಲೈ ಮುತ್ತು, ಪ್ರಾಜೆಕ್ಟ್ ಕೋರ್ಡಿನೇಟರ್ ಆಶೀಲ್ ಪಾಟೀಲ್, ಪ್ರಾಜೆಕ್ಟ್ ಮ್ಯಾನೇಜರ್ ರೀತಮ್ ಗಂಗೂಲಿ, ಟೋಲ್ ಮ್ಯಾನೇಜರ್ ತಿಮ್ಮಯ್ಯ ಎ.ಎಸ್. ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಳಚೆ ನೀರಲ್ಲಿ ತಟ್ಟೆ ತೊಳೆದ ಪ್ರಕರಣ; ಶಿಕ್ಷಕಿ ಅಮಾನತು
ಅಲೆಮಾರಿ ಜನಾಂಗದವರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಿ: ಪಲ್ಲವಿ