ಮಲ್ಲಿಕಾ, ಬೇನಿಶಾ, ದಸೇರಿ ತಳಿಯ ಮಾವಿಗೆ ಬೇಡಿಕೆ

KannadaprabhaNewsNetwork |  
Published : May 26, 2025, 12:13 AM IST
ಪೋಟೊ25ಕೆಎಸಟಿ1: ಕುಷ್ಟಗಿ ಪಟ್ಟಣದ ಸಿಂಡಿಕೇಟ್ ಬ್ಯಾಂಕ್ ಹತ್ತಿರ ಮುತ್ತಣ್ಣ ನಿಡಶೇಸಿ ಮಾವಿನ ಹಣ್ಣಿನ ವ್ಯಾಪಾರ ಮಾಡುತ್ತಿರುವದು. | Kannada Prabha

ಸಾರಾಂಶ

ಒಂದು ಕೆಜಿಯಲ್ಲಿ ಮೂರರಿಂದ ಐದು ಮಾವಿನ ಹಣ್ಣುಗಳು ಬರುತ್ತವೆ. ಮೊಟ್ಟೆ ಗಾತ್ರದ ಸ್ವಲ್ಪ ಉದ್ದವಾಗಿರುವ ದಸೇರಿ ಮಾವು ಹೆಚ್ಚು ರುಚಿಕಟ್ಟಾಗಿವೆ

ಪರಶಿವಮೂರ್ತಿ ದೋಟಿಹಾಳ ಕುಷ್ಟಗಿ

ಮಾರುಕಟ್ಟೆಯಲ್ಲಿ ಈಗ ಹಣ್ಣಿನ ರಾಜನದ್ದೇ ದರ್ಬಾರ್‌, ಪಟ್ಟಣದ ಯಾವ ಭಾಗಕ್ಕೆ ಹೋದರೂ ಅಲ್ಲಿನ ಪ್ರಮುಖ ರಸ್ತೆ, ತಳ್ಳುವ ಗಾಡಿಗಳಲ್ಲಿ ಮಾವಿನ ಹಣ್ಣುಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ಗ್ರಾಹಕರನ್ನು ಸೆಳೆಯುವ ತಂತ್ರವನ್ನು ವ್ಯಾಪಾರಿಗಳು ಮಾಡುತ್ತಿದ್ದಾರೆ.

ದೊಡ್ಡ ಹಣ್ಣಿಗೆ ಕಡಿಮೆ ಬೆಲೆ ಇದ್ದರೆ ಚಿಕ್ಕ ಗಾತ್ರದ ಮಾವಿನ ಹಣ್ಣುಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಹಣ್ಣುಗಳು ಚಿಕ್ಕದಾದರೂ ಬಹಳ ರುಚಿಕಟ್ಟಾಗಿರುತ್ತದೆ. ನಾನಾ ತಳಿಯ ಹಣ್ಣುಗಳು ಮಾರಾಟಕ್ಕೆ ಲಭ್ಯವಿದ್ದು, ಇದು ಗುಣಮಟ್ಟ ಹಾಗೂ ಗಾತ್ರಕ್ಕೆ ಅನುಗುಣವಾಗಿ ಕನಿಷ್ಠ ₹80ರಿಂದ ₹ 200ರ ವರೆಗೂ ಮಾರಾಟವಾಗುತ್ತಿದೆ.

ಒಂದು ಕೆಜಿಯಲ್ಲಿ ಮೂರರಿಂದ ಐದು ಮಾವಿನ ಹಣ್ಣುಗಳು ಬರುತ್ತವೆ. ಮೊಟ್ಟೆ ಗಾತ್ರದ ಸ್ವಲ್ಪ ಉದ್ದವಾಗಿರುವ ದಸೇರಿ ಮಾವು ಹೆಚ್ಚು ರುಚಿಕಟ್ಟಾಗಿವೆ. ಇವು ₹100ರಿಂದ ₹150ರ ವರೆಗೆ ಮಾರಾಟವಾಗುತ್ತಿವೆ. ಮಲ್ಲಿಕಾ ಮಾವು ₹100ರಿಂದ ₹160ರ ವರೆಗೂ ಮಾರಾಟವಾಗುತ್ತಿವೆ. ಮಾವಿನ ಹಣ್ಣಿನ ರುಚಿಗೊತ್ತಿದ್ದವರು ಬೆಲೆ ಹೆಚ್ಚಿದ್ದರೂ ದಸೇರಿ ಹಾಗೂ ಮಲ್ಲಿಕಾ ಮಾವುಗಳನ್ನು ಕೊಂಡೊಯ್ಯುತ್ತಿದ್ದಾರೆ. ಕೆಲವು ತಳಿಯ ಮಾವಿನ ಹಣ್ಣು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ.

ಎಲ್ಲೆಲ್ಲಿ ಮಾರಾಟ?:

ಪಟ್ಟಣ ಸೇರಿದಂತೆ ತಾಲೂಕಿನ ತಾವರಗೇರಾ, ಹನಮಸಾಗರ, ಹನಮನಾಳ, ದೋಟಿಹಾಳ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನಾನಾ ತಳಿಗಳ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಕೆಲವು ವ್ಯಾಪಾರಿಗಳು ಬಸ್ ನಿಲ್ದಾಣದ ಮುಂಭಾಗ, ಮಾರುತಿ ವೃತ್ತ, ಕನಕದಾಸ ವೃತ್ತ, ಬಸವೇಶ್ವರ ವೃತ್ತದಲ್ಲಿ ಮಾರಾಟ ಮಾಡುತ್ತಿದ್ದರೆ ಕೆಲವು ವ್ಯಾಪಾರಿಗಳು ತಳ್ಳು ಗಾಡಿಗಳಲ್ಲಿಟ್ಟು ವ್ಯಾಪಾರ ಮಾಡುತ್ತಿರುವುದು ಕಂಡು ಬರುತ್ತದೆ.

ಸಾವಯವ ಹಣ್ಣಿಗೆ ಬೇಡಿಕೆ:

ಕೆಲ ಪ್ರದೇಶಗಳಲ್ಲಿ ಮಾವು ಬೆಳೆಗೆ ರೋಗ ಹೆಚ್ಚಾಗಿರುವುದರಿಂದ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕ ಹೆಚ್ಚಾಗಿ ಬಳಸಲಾಗಿದೆ. ಜತೆಗೆ ಮಾವಿನಕಾಯಿ ಹಣ್ಣು ಮಾಡಲು ಹಲವು ರಾಸಾಯನಿಕ ಬಳಸುವುದರಿಂದ ಅಂತಹ ಹಣ್ಣುಗಳನ್ನು ತಿಂದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ. ಇನ್ನು ಸಾವಯವ ಪದ್ಧತಿಯಲ್ಲಿ ಬೆಳೆದ ಮತ್ತು ರಾಸಾಯನಿಕ ಬಳಸದೆ ನೈಸರ್ಗಿಕವಾಗಿ ಆದ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ.

ಯಾವ್ಯಾವ ಹಣ್ಣುಗಳು?:

ಹಣ್ಣುಗಳ ರಾಜ ಎಂದೇ ಕರೆಯಲ್ಪಡುವ ಮಾವಿನ ಹಣ್ಣು ಪ್ರಿಯರಿಗೆ ಸಿಹಿ ಅನುಭವವನ್ನುಂಟು ಮಾಡಿದೆ. ಆಫೂಸ್, ಕೇಸರಿ, ದಸೇರಿ, ಕಲ್ಮಿ, ತೋತಾಪುರಿ, ಬಾದಾಮಿ, ಸವಾರಿ, ಬೇನಿಶಾ, ಸಿಂಡುಲಾ, ರಸಿಪುರಿ ಸೇರಿ ವಿವಿಧ ತಳಿಯ ಮಾವಿನ ಹಣ್ಣುಗಳು ಪಟ್ಟಣದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ನಿಡಶೇಸಿಯಲ್ಲಿ ತೋಟ ಹೊಂದಿದ್ದು, ಮಲ್ಲಿಕಾ ಹಾಗೂ ಕೇಸರಿ ತಳಿಯ ಹಣ್ಣುಗಳನ್ನು ಮಾತ್ರ ಮಾರಾಟ ಮಾಡುತ್ತೇನೆ. ಕೆಜಿಗೆ ₹100ರಂತೆ ಪ್ರತಿದಿನಕ್ಕೆ ಸುಮಾರು 2 ಕ್ವಿಂಟಲ್ ಹಣ್ಣು ಮಾರಾಟ ಮಾಡವಾಗುತ್ತಿದೆ ಎಂದು ಕುಷ್ಟಗಿ ಮಾವಿನ ಹಣ್ಣಿನ ವ್ಯಾಪಾರಿ ಮುತ್ತಣ್ಣ ನಿಡಶೇಸಿ ತಿಳಿಸಿದ್ದಾರೆ.

ಮಾವಿನ ಹಣ್ಣು ಎಲ್ಲ ದಿನದಲ್ಲಿ ಸಿಗುವುದಿಲ್ಲ, ಅದರ ಸೀಸನ್‌ನಲ್ಲಿ ಮಾತ್ರ ಸಿಗುವುದು. ರಾಸಾಯನಿಕ ಬಳಸಿದ ಹಣ್ಣು ಸೇವಿಸುವುದಕ್ಕಿಂತ ಸಾವಯುವ ಹಣ್ಣನ್ನು ಸೇವಿಸಬೇಕಿದೆ. ಮಾವಿನ ಹಣ್ಣಿನ ದರ ಹೆಚ್ಚಿದ್ದರೂ ಖರೀದಿಸಿ ಮಾವಿನ ಹಣ್ಣಿನ ಸಿಹಿ ಸವಿಯುತ್ತಿದ್ದೇವೆ ಎಂದು ಗ್ರಾಹಕರಾದ ಶಾರದಾ ಶೆಟ್ಟರ್‌ ಹಾಗೂ ಉಮಾದೇವಿ ಪಾಟೀಲ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಳಚೆ ನೀರಲ್ಲಿ ತಟ್ಟೆ ತೊಳೆದ ಪ್ರಕರಣ; ಶಿಕ್ಷಕಿ ಅಮಾನತು
ಅಲೆಮಾರಿ ಜನಾಂಗದವರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಿ: ಪಲ್ಲವಿ