ಸಾಮಾಜಿಕ ಜಾಲತಾಣದ ಜಾಹೀರಾತಿನಲ್ಲಿ 6 ಲಕ್ಷ ರು. ವಂಚನೆ

KannadaprabhaNewsNetwork |  
Published : May 26, 2025, 12:12 AM IST
ಸಾಂದರ್ಭಿಕ ಚಿತ್ರ. | Kannada Prabha

ಸಾರಾಂಶ

ಹೂಡಿಕೆ ಮಾಡಿದ್ದ ಹಣಕ್ಕೆ ಶೇ. 3ರಂತೆ ಲಾಭಾಂಶ ಕೊಡುವಂತೆ ನಂಬಿಸಿದ್ದರು. ಅದನ್ನು ನಂಬಿ ಹೆಚ್ಚಿನ ಲಾಭಾಂಶದ ಆಸೆಯಿಂದ ನನ್ನ ಹಾಗೂ ನನ್ನ ಹೆಂಡತಿಯ ಖಾತೆಯಿಂದ ₹5,93,240 ಹಣ ಹೂಡಿಕೆ ಮಾಡಲಾಗಿತ್ತು. ಆದರೆ ಲಾಭಾಂಶ ನೀಡದೆ ಮೋಸ ಮಾಡಿರುವ ಕುರಿತು ವಕೀಲರೊಬ್ಬರು ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹಾವೇರಿ: ಟ್ರಂಪ್ ಹೋಟೆಲ್ ರೆಂಟೆಲ್ ಎಂಬ ಸಾಮಾಜಿಕ ಜಾಲತಾಣದಲ್ಲಿ ಬಂದ ಜಾಹೀರಾತು ಶೀರ್ಷಿಕೆ (AI) ನೋಡಿ ಜಿಲ್ಲೆಯ ವಕೀಲರೊಬ್ಬರು ಸುಮಾರು ₹6 ಲಕ್ಷ ಕಳೆದುಕೊಂಡಿರುವ ಘಟನೆ ನಡೆದಿದೆ.ಈ ಕುರಿತು ಇಲ್ಲಿನ ಸೈಬರ್ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ವಕೀಲರೊಬ್ಬರು ದೂರು ದಾಖಲಿಸಿದ್ದಾರೆ. ಜನವರಿ 25ರಿಂದ ಏಪ್ರಿಲ್ 4ರ ವರೆಗಿನ ಅವಧಿಯಲ್ಲಿ ಯೂಟ್ಯೂಬ್ ನೋಡುತ್ತಿದ್ದಾಗ ಟ್ರಂಪ್ ಹೋಟೆಲ್ ರೆಂಟೆಲ್ ಎಂಬ ದುಪ್ಪಟ್ಟು ಹಣ ಮಾಡುವ ಶೀರ್ಷಿಕೆಯಿಂದ ಜಾಹೀರಾತು ಬಂದಿದ್ದು, ಗಮನಿಸಿ ಯೂಸರ್ ಐಡಿ, ಪಾಸ್‌ವರ್ಡ್ ಕ್ರಿಯೇಟ್ ಮಾಡಿ ಲಾಗಿನ್ ಆಗಿದ್ದೆ. ನನ್ನ ಅಕೌಂಟ್ ಆ್ಯಕ್ಟಿವ್ ಮಾಡಲು ಅವರು ₹1500 ರಿಜಾರ್ಜ್ ಮಾಡಲು ತಿಳಿಸಿದ್ದರು.

ಆ ಪ್ರಕಾರ ರಿಜಾರ್ಜ್ ಮಾಡಲಾಗಿತ್ತು. ಹೂಡಿಕೆ ಮಾಡಿದ್ದ ಹಣಕ್ಕೆ ಶೇ. 3ರಂತೆ ಲಾಭಾಂಶ ಕೊಡುವಂತೆ ನಂಬಿಸಿದ್ದರು. ಅದನ್ನು ನಂಬಿ ಹೆಚ್ಚಿನ ಲಾಭಾಂಶದ ಆಸೆಯಿಂದ ನನ್ನ ಹಾಗೂ ನನ್ನ ಹೆಂಡತಿಯ ಖಾತೆಯಿಂದ ₹5,93,240 ಹಣ ಹೂಡಿಕೆ ಮಾಡಲಾಗಿತ್ತು. ಆದರೆ ಲಾಭಾಂಶ ನೀಡದೆ ಮೋಸ ಮಾಡಿರುವ ಕುರಿತು ವಕೀಲರೊಬ್ಬರು ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೇ ರೀತಿ ಜಿಲ್ಲೆಯ ಹಲವರಿಗೆ ವಂಚನೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಮುಂದುವರಿದ ಜಿಟಿ ಜಿಟಿ ಮಳೆ

ಹಾವೇರಿ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಭಾನುವಾರ ಬೆಳಗ್ಗೆಯಿಂದ ಸಂಜೆಯವರೆಗೂ ಮೋಡ ಕವಿದು ತಂಪು ವಾತಾವರಣ ಕಂಡುಬಂದಿದ್ದು, ಆಗಾಗ ಹಗುರವಾಗಿ ಮಳೆಯಾಗಿದೆ.ಜಿಲ್ಲೆಯ ರಾಣಿಬೆನ್ನೂರು, ಹಾವೇರಿ, ಬ್ಯಾಡಗಿ, ಹಾನಗಲ್ಲ, ಶಿಗ್ಗಾಂವಿ, ಸವಣೂರು, ಹಿರೇಕೆರೂರು ಸೇರಿದಂತೆ ಹಲವೆಡೆ ಭಾನುವಾರ ಬೆಳಗ್ಗೆಯೇ ಮೋಡ ಕವಿದು ಅಲ್ಲಲ್ಲಿ ತುಂತುರು ಮಳೆಯಾಗಿದೆ. ಬಳಿಕ ಸ್ವಲ್ಪ ಬಿಡುವು ನೀಡಿ ಮಧ್ಯಾಹ್ನದ ವೇಳೆ ಸುತ್ತಲೂ ಮೋಡ ಕವಿದು ಮತ್ತೆ ಹಗುರವಾಗಿ ಮಳೆ ಸುರಿದಿದೆ.ಸಂಜೆಯವರೆಗೂ ಹಲವೆಡೆ ಜಿಟಿ ಜಿಟಿ ಮಳೆಯಾದರೆ, ಇನ್ನೂ ಕೆಲವೆಡೆ ತಂಪಾದ ವಾತಾವರಣ ಕಂಡುಬಂದಿತು. ಇದರಿಂದ ಕೆಲಕಾಲ ವ್ಯಾಪಾರ, ವಹಿವಾಟು, ಜನಸಂಚಾರಕ್ಕೆ ತೊಂದರೆಯಾಯಿತು. ಆಗಾಗ ವಿದ್ಯುತ್ ಪೂರೈಕೆಯಲ್ಲೂ ವ್ಯತ್ಯಯವಾಗಿದ್ದು, ಜನರನ್ನು ಕಂಗಾಲಾಗುವಂತೆ ಮಾಡಿತು. ಇನ್ನೂ ಹಾವೇರಿ ನಗರದಲ್ಲಿ ಸಂಜೆಯಿಂದ ಕೆಲಹೊತ್ತು ಜಿಟಿ ಜಿಟಿ ಮಳೆಯಾಗುತ್ತಿದ್ದು, ರಾತ್ರಿಯವರೆಗೂ ಮುಂದುವರಿದಿದೆ.

ಇತ್ತ ಗ್ರಾಮೀಣ ಪ್ರದೇಶದಲ್ಲಿ ರೈತರು ಮುಂಗಾರು ಬಿತ್ತನೆ ಕಾರ್ಯಕ್ಕಾಗಿ ಬೀಜ, ಗೊಬ್ಬರ ಖರೀದಿಸಿ ಇಟ್ಟುಕೊಂಡಿದ್ದಾರೆ. ಮಳೆ ಬಿಡುವು ನೀಡಿದರೆ ಬಿತ್ತನೆ ಕೃಷಿ ಚಟುವಟಿಕೆಗಳು ನಡೆಯಲಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಳಚೆ ನೀರಲ್ಲಿ ತಟ್ಟೆ ತೊಳೆದ ಪ್ರಕರಣ; ಶಿಕ್ಷಕಿ ಅಮಾನತು
ಅಲೆಮಾರಿ ಜನಾಂಗದವರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಿ: ಪಲ್ಲವಿ