ಆರೋಗ್ಯ ಸಮಸ್ಯೆಗಳಿಗೆ ಜೀವನಶೈಲಿಯೇ ಕಾರಣ

KannadaprabhaNewsNetwork |  
Published : Sep 03, 2025, 01:01 AM IST
ಕೆ ಕೆ ಪಿ ಸುದ್ದಿ 01:ನಗರದ ರೋಟರಿ ಭವನದಲ್ಲಿ ಉಚಿತ ಔಷದ ರಹಿತ ಚಿಕಿತ್ಸಾ ಶಿಬಿರ.  | Kannada Prabha

ಸಾರಾಂಶ

ಕನಕಪುರ: ಆಧುನಿಕ ಹಾಗೂ ತಂತ್ರಜ್ಞಾನ ಯುಗದಲ್ಲಿ ಜನರಿಗೆ ಆರೋಗ್ಯದ ಸಮಸ್ಯೆ ಹೆಚ್ಚಾಗಿ ಕಾಡಲು ಇಂದಿನ ಬದುಕಿನ ಒತ್ತಡದ ಜೀವನಶೈಲಿ, ಆಹಾರ ಪದ್ಧತಿಗಳೇ ಮುಖ್ಯ ಕಾರಣ ಎಂದು ಡಾ.ಬಸವರಾಜ್‌ ಹೇಳಿದರು.

ಕನಕಪುರ: ಆಧುನಿಕ ಹಾಗೂ ತಂತ್ರಜ್ಞಾನ ಯುಗದಲ್ಲಿ ಜನರಿಗೆ ಆರೋಗ್ಯದ ಸಮಸ್ಯೆ ಹೆಚ್ಚಾಗಿ ಕಾಡಲು ಇಂದಿನ ಬದುಕಿನ ಒತ್ತಡದ ಜೀವನಶೈಲಿ, ಆಹಾರ ಪದ್ಧತಿಗಳೇ ಮುಖ್ಯ ಕಾರಣ ಎಂದು ಡಾ.ಬಸವರಾಜ್‌ ಹೇಳಿದರು.

ರೋಟರಿ ಟ್ರಸ್ಟ್, ಕನಕಪುರ ರೋಟರಿ ಹಾಗೂ ಬಸವ ಅಕ್ಯು ಅಕಾಡೆಮಿ, ನೆನಪು ಹೀಲಿಂಗ್ ಸೆಂಟರ್ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಔಷಧ ರಹಿತ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದ ಅವರು, ನಮ್ಮ ಪರಂಪರೆ ಹಾಗೂ ಸಂಸ್ಕೃತಿ ಮರೆತು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿ ಹಲವು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಹೇಳಿದರು. ತಲೆನೋವು, ಬೆನ್ನು ನೋವು, ಮಧುಮೇಹದಂತಹ ಕಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು ಇದಕ್ಕೆಲ್ಲಾ ಆಂಗ್ಲ ಔಷಧಿ ಪದ್ದತಿ ತಾತ್ಕಾಲಿಕ ಪರಿಹಾರದ ಜೊತೆಗೆ ದುಷ್ಪರಿಣಾಮ ಬೀರುವ ಸಂಭವ ಇದ್ದು, ಹಿಂದಿನ ಕಾಲದ ನಾಡಿ ಪರೀಕ್ಷೆ ಮೂಲಕ ಕಾಯಿಲೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಸಲಹೆ ನೀಡಿದರು.

ಕನಕಪುರ ನಗರ ಹಾಗು ತಾಲೂಕಿನ ವಿವಿಧ ಭಾಗಗಳಿಂದ ಹೆಚ್ಚು ಸಾರ್ವಜನಿಕರು ಭಾಗಿಯಾಗಿ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು. ಕಲರ್ ಥೆರಪಿ, ಆಕ್ಯುಪ್ರೆಷರ್, ಸೀಡ್ ಥೆರಪಿ, ಮರ್ಮ ಥೆರಪಿ, ಆರಿಕ್ಯುಲರ್ ಥೆರಪಿ ಸೇರಿದಂತೆ ವಿವಿಧ ಸುಲಭ ಹಾಗೂ ಸರಳವಾಗಿ ಉಚಿತ ಚಿಕಿತ್ಸಾ ವಿಧಾನದಲ್ಲಿ ತಲೆ ನೋವು, ಭುಜದ ನೋವು, ಬೆನ್ನು ನೋವು,ಮಧು ಮೇಹ, ಮೂತ್ರಪಿಂಡದಲ್ಲಿ ಕಲ್ಲು ಸೇರಿದಂತೆ ಹಲವು ಕಾಯಿಲೆಗಳಿಗೆ ನುರಿತ ಕಲರ್ ಥೆರಪಿ ತಜ್ಞರು ನೀಡಿದ ಸಲಹೆ ಸೂಚನೆಗಳ ಮೂಲಕ ಪರಿಹಾರ ಪಡೆದು ಕೊಂಡರು.

ರೋಟರಿ ಅಧ್ಯಕ್ಷ ಕೆ.ಬಿ.ಸಿದ್ಧರಾಜು, ಮಾಜಿ ಅಧ್ಯಕ್ಷ ಭಾನುಪ್ರಕಾಶ್, ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಬಾಲಕೃಷ್ಣ ಆರ್ಯ ಹಾಗೂ ಬೆಂಗಳೂರು, ಮಾಗಡಿ, ಆನೇಕಲ್, ಬಿಡದಿ ಹಿಲೀಂಗ್ ಕೇಂದ್ರದ ಮುಖ್ಯಸ್ಥರು ಹಾಗೂ ಪತಂಜಲಿ ಯೋಗ ಸಮಿತಿ ಸದಸ್ಯರು ಹಾಗೂ ಸಾರ್ವಜನಿಕರು ಶಿಬಿರದಲ್ಲಿ ಉಪಸ್ಥಿತರಿದ್ದರು.

ಕೆ ಕೆ ಪಿ ಸುದ್ದಿ 01:

ಕನಕಪುರ ರೋಟರಿ ಭವನದಲ್ಲಿ ಉಚಿತ ಔಷದ ರಹಿತ ಚಿಕಿತ್ಸಾ ಶಿಬಿರ

PREV

Recommended Stories

ಉತ್ಪನ್ನ ಗುಣಮಟ್ಟ ಹೆಚ್ಚಿಸಿ ರಫ್ತು ಏರಿಸಿ: ರೆಡ್ಡಿ
ಪ್ಯಾರಾ ಥ್ರೋ ಬಾಲ್: ರಾಜ್ಯ ಮಹಿಳಾ ತಂಡಕ್ಕೆ ಟ್ರೋಫಿ