ಉಡುಪಿ ಜಿಲ್ಲಾ ಧ್ವನಿ ಬೆಳಕು ಸಂಯೋಜಕರ ಸಂಘಟನೆಯ ಉಡುಪಿ ವಲಯದ 15ನೇ ವಾರ್ಷಿಕ ಮಹಾಸಭೆಯ ಕುಮಾರ್ ಎಸ್. ಬಂಗೇರ ಅಧ್ಯಕ್ಷತೆಯಲ್ಲಿ ಯುಬಿಎಂಸಿ ಹಾಲ್ ಉಡುಪಿಯಲ್ಲಿ ಜರುಗಿತು.
ಉಡುಪಿ: ಉಡುಪಿ ಜಿಲ್ಲಾ ಧ್ವನಿ ಬೆಳಕು ಸಂಯೋಜಕರ ಸಂಘಟನೆಯ ಉಡುಪಿ ವಲಯದ 15ನೇ ವಾರ್ಷಿಕ ಮಹಾಸಭೆಯ ಕುಮಾರ್ ಎಸ್. ಬಂಗೇರ ಅಧ್ಯಕ್ಷತೆಯಲ್ಲಿ ಯುಬಿಎಂಸಿ ಹಾಲ್ ಉಡುಪಿಯಲ್ಲಿ ಜರುಗಿತು.
ವಲಯದ ಹಿರಿಯ ಸದಸ್ಯರಾದ ಪ್ರಕಾಶ್ ಕುಲಾಲ್, ಅಬ್ದುಲ್ ಸಮದ್, ಪೀಟರ್ ಡಿಸೋಜಾ ಹಾಗೂ ಸದಾಶಿವ ಆಚಾರ್ಯ ಅವರನ್ನು ಗೌರವಿಸಲಾಯಿತು. ಸಂಘಟನೆಯ ಮಹಾಲಕ್ಷ್ಮೀ ವಿದ್ಯಾನಿಧಿಯಿಂದ 16 ಮಕ್ಕಳಿಗೆ ಧನಸಹಾಯ ನೀಡಿ ಪ್ರೋತ್ಸಾಹಿಸಲಾಯಿತು.ಸಮಾಜಸೇವೆಯನ್ನು ತಮ್ಮನ್ನು ಸಂಪೂರ್ಣವಾಗಿ ಮುಡಿಪಾಗಿಟ್ಟ ನಿತ್ಯಾನಂದ ಒಳಕಾಡು ಅವರನ್ನು ಸಂಘಟನೆಯ ವತಿಯಿಂದ ಗೌರವಿಸಲಾಯಿತು. ಸಮ್ಮಾನ ಸ್ವೀಕರಿಸಿ ಮಾತನಾಡಿದ ನಿತ್ಯಾನಂದ ಒಳಕಾಡು ತಮ್ಮ ಸಮಾಜ ಸೇವೆಯನ್ನು ಸಂಘಟನೆ ಗುರುತಿಸಿರುವುದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು. ಸಂಘಟನೆಯು ನಿರ್ವಹಿಸಿದ ಕ್ರಿಕೆಟ್ ಕ್ರೀಡಾಕೂಟದ ಟ್ರೋಫಿಯನ್ನು ಸಮಾಜಸೇವಕ ಹಾಗೂ ಪ್ರಾಯೋಜಕರಾದ ಕೃಷ್ಣಮೂರ್ತಿ ಆಚಾರ್ಯ ವಿತರಿಸಿದರು. ಈ ವೇಳೆ ಮಾತನಾಡಿದ ಕೃಷ್ಣಮೂರ್ತಿ ಆಚಾರ್ಯ ಧ್ವನಿ ಬೆಳಕು ಸಂಘಟನೆ ಇತರ ಸಂಘಟನೆಗಳಿಗಿಂತ ವಿಭಿನ್ನವಾಗಿದ್ದು ಸಮಾಜಮುಖಿ ಕಾರ್ಯಗಳಿಗೂ ಪ್ರಾತಿನಿಧ್ಯತೆ ನೀಡುತ್ತಿದ್ದು ಅವರೊಂದಿಗೆ ಸದಾ ಇರುವುದಾಗಿ ಭರವಸೆ ನೀಡಿದರು.
ಸಂಘದ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಡೊನ್ ಡಿಸೋಜಾ ಹಾಗೂ ಲೆಕ್ಕಪತ್ರವನ್ನು ಕೋಶಾಧಿಕಾರಿ ಪ್ರಕಾಶ್ ಮಂಡಿಸಿದರು. ಜಿಲ್ಲಾಧ್ಯಕ್ಷ ಸತೀಶ್ ಶುಭ ಹಾರೈಸಿದರು. ಪ್ರಕಾಶ್ ನಾಯ್ಕ ಸ್ವಾಗತಿಸಿ, ಸಂತೋಷ್ ಶೆಟ್ಟಿಗಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡೋನ್ ಡಿಸೋಜಾ ವಂದಿಸಿ, ಶಾಂತರಾಮ ಆಚಾರ್ಯ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.