ದೀಪ ಹಚ್ಚೋದು ಅರಿವು, ಜ್ಞಾನದ ಬೆಳಕು ಹರಡುವ ಸಂಕೇತ: ಡಾ.ಸುಧೀಂದ್ರ ಸ್ವಾಮೀಜಿ

KannadaprabhaNewsNetwork |  
Published : Dec 14, 2025, 04:00 AM IST
(ಫೋಟೊ 13ಬಿಕೆಟಿ1,(1) ಲಕ್ಷ ದೀಪೋತ್ಸವ ಚಿತ್ರ) | Kannada Prabha

ಸಾರಾಂಶ

ಇದು ಕೇವಲ ದೀಪ ಹಚ್ಚುವ ಹಬ್ಬವಲ್ಲ, ಬದಲಿಗೆ ಅರಿವು ಮತ್ತು ಜ್ಞಾನದ ಬೆಳಕನ್ನು ಜೀವನದಲ್ಲಿ ಹರಡುವ ಸಂಕೇತವಾಗಿದೆ. ಸಮುದಾಯದ ಭಕ್ತಿ ಮತ್ತು ಆಧ್ಯಾತ್ಮಿಕ ಒಗ್ಗಟ್ಟನ್ನು ಪ್ರದರ್ಶಿಸುತ್ತದೆ ಎಂದು ನಾಲತವಾಡದ ಬ್ರಹ್ಮಾಂಡ ಬೇರಿ ಮಠದ ಡಾ.ಸುಧೀಂದ್ರ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಇದು ಕೇವಲ ದೀಪ ಹಚ್ಚುವ ಹಬ್ಬವಲ್ಲ, ಬದಲಿಗೆ ಅರಿವು ಮತ್ತು ಜ್ಞಾನದ ಬೆಳಕನ್ನು ಜೀವನದಲ್ಲಿ ಹರಡುವ ಸಂಕೇತವಾಗಿದೆ. ಸಮುದಾಯದ ಭಕ್ತಿ ಮತ್ತು ಆಧ್ಯಾತ್ಮಿಕ ಒಗ್ಗಟ್ಟನ್ನು ಪ್ರದರ್ಶಿಸುತ್ತದೆ ಎಂದು ನಾಲತವಾಡದ ಬ್ರಹ್ಮಾಂಡ ಬೇರಿ ಮಠದ ಡಾ.ಸುಧೀಂದ್ರ ಸ್ವಾಮೀಜಿ ಹೇಳಿದರು.

ಸಮೀಪದ ಮುರನಾಳ ಪುನರ ವಸತಿ ಕೇಂದ್ರ ಮುರನಾಳ ಗ್ರಾಮದಲ್ಲಿ ಜಗದ್ಗುರು ಶ್ರೀ ಮಳೆರಾಜೇಂದ್ರಸ್ವಾಮಿ ಮಠದ ಕಾರ್ತಿಕೋತ್ಸವ ಹಾಗೂ ಲಕ್ಷ ದೀಪೋತ್ಸವಕ್ಕೆ ದೀಪ ಬೇಳಗುವದ ಮೂಲಕ ಚಾಲನೆ ನೀಡಿ ಮಾತನಾಡಿದರು.

ಕಾರ್ತಿಕೋತ್ಸವ ಎಂದರೆ ಕಾರ್ತಿಕ ಮಾಸದಲ್ಲಿ ದೇವಾಲಯಗಳಲ್ಲಿ ನಡೆಯುವ ದೀಪೋತ್ಸವ, ವಿಶೇಷ ಪೂಜೆಗಳು, ಮತ್ತು ಧಾರ್ಮಿಕ ಕಾರ್ಯಕ್ರಮಗಳ ಸಂಭ್ರಮವಾಗಿದ್ದು, ಇದು ಕತ್ತಲೆಯನ್ನು ದೂರಮಾಡಿ ಜ್ಞಾನದ ಬೆಳಕನ್ನು ಹರಡುವ ಹಬ್ಬವಾಗಿದೆ, ಇದರಲ್ಲಿ ಭಕ್ತರು ದೀಪಗಳನ್ನು ಹಚ್ಚಿ, ವಿಶೇಷ ಅಲಂಕಾರದೊಂದಿಗೆ ದೇವರ ದರ್ಶನ ಪಡೆಯುತ್ತಾರೆ. ಇದನ್ನು ಲಕ್ಷದೀಪೋತ್ಸವ ಎಂದೂ ಕರೆಯುತ್ತಾರೆ. ಸಮುದಾಯದ ಭಕ್ತಿ ಮತ್ತು ಆಧ್ಯಾತ್ಮಿಕ ಒಗ್ಗಟ್ಟನ್ನು ಪ್ರದರ್ಶಿಸುತ್ತದೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಶ್ರೀ ಮಠದ ಗುರುಲಿಂಗ ಸ್ವಾಮೀಜಿ ಮಹಾಪುರುಷ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಇದೊಂದು ಕೃಷಿ ಪರಂಪರೆಯ ಮಠವಾಗಿದ್ದು, ಸಕಾಲಕ್ಕೆ ಬೇಕಾಗುವ ಮಳೆ ಬೆಳೆ ನೀಡುವ ಏಕೈಕ ಮಠವಾಗಿದೆ ಎಂದರು. ವೇದಿಕ ಮೇಲೆ ಗಿಣಗೇರಾ ಆನೆಗುಂದಿ ಸಂಸ್ಥಾನ ಸರಸ್ವತಿ ಪೀಠದ ನರಸಿಂಹ ಸ್ವಾಮೀಜಿ, ಶ್ರೀ ಕಂಠಸ್ವಾಮೀಜಿ ಪಾವನ ಸಾನ್ನಿಧ್ಯ ವಹಸಿ ಆಶೀರ್ವಚನ ನೀಡಿದರು.

ಸನ್ಮಾನ: ಎಂಜಿಜನಿಯರಿಂಗ್ ಕಂಪ್ಯೂಟರ್ ಸೈನ್ಸ್ ನಲ್ಲಿನ ಪಿಎಚಡಿಗಾಗಿ ಗೌರವ ಡಾಕ್ಟರೇಟ್‌ ಪದವಿ ಪಡೆದ ಡಾ.ರಾಘವೇಂದ್ರ ಬಡಿಗೇರ, ಸಹಾಯಕ ಪ್ರಾಧ್ಯಾಪಕಿ ಡಾ.ದೀಪಾ ಬಡಿಗೇರ ಮತ್ತು ಬಾಗಲಕೋಟೆಯ ಕೆಇಬಿ ಎಂಜಿನಿಯರ್‌ ಸಂಘ ಸಿಇಸಿ ಮಲ್ಲಪ್ಪ ಗೊಲಭಾವಿ ಸೇರಿದಂತೆ ಲಕ್ಷ ದೀಪೋತ್ಸವ ದಾನಿಗಳಿಗೆ ಶ್ರೀಮಠದಿಂದ ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆ ಮೇಲೆ ಯಚ್ಚರಪ್ಪ ಪತ್ತಾರ ಹೊಳೆ ಆಲೂರ, ಬಸವರಾಜ ಯಂಕಂಚಿ, ಪಾಂಡುರಂಗ ಪತ್ತಾರ, ದೇವೆಂದ್ರ ಅಗಳತಕಟ್ಟಿ, ಕೆಇಬಿಯ ಅಧೀಕ್ಷಕ ಅಭಿಯಂತರರ ಸಿ.ಬಿ ಯಂಕಂಚಿ, ಪಿಡಿಒ ಮಹಾಂತೇಶ ನಾಲತವಾಡ, ಶಿವನಗೌಡ ಪಾಟೀಲ, ಹುಚ್ಚಪ್ಪ ಶಿರೂರ, ಶಿವಪುತ್ರಪ್ಪ ತೆಗ್ಗಿ, ಶಿವಣ್ಣ ಬೂದಿಹಾಳ, ಸೇರಿದಂತೆ ಗ್ರಾಮದ ಪಂಚಾಯತಿ ಸದಸ್ಯರು, ಊರಿನ ಹಿರಿಯರು ಯವಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ನಾಡಿನ ನಾನಾ ಭಾಗಗಳಿಂದ ಆಗಮಿಸಿದ್ದ ಭಕ್ತರು ಸಾಲಿನಲ್ಲಿ ನಿಂತು ದರ್ಶನ ಪಡೆದರು. ದೇವಸ್ಥಾನ ಹಾಗೂ ಶಿಖರವನ್ನು ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ದೇವಸ್ಥಾನ ಮುಂದಿನ ಆವರಣದಲ್ಲಿ ಸಾಲಾಗಿ ಜೋಡಿಸಲಾಗಿದ್ದ ಹಣತೆಗಳನ್ನು ಮಾತೆಯರು ಸೇರಿದಂತೆ ಭಕ್ತಾಧಿಗಳು ಬೆಳಗುವ ಮೂಲಕ ಭಕ್ತಿ ಸಮರ್ಪಿಸಿದರು.

ಸಂಭ್ರಮದ ಲಕ್ಷದೀಪೋತ್ಸವ:

ಕಾರ್ತಿಕೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ವಿಜಂಭಣೆಯಿಂದ ಶ್ರೀ ಮಳೆರಾಜೇಂದ್ರ ಸ್ವಾಮಿಮಠದ ಆವರಣದಲ್ಲಿ ಜರುಗಿತು. ಕಾರ್ತಿಕೋತ್ಸವ ನಿಮಿತ್ತ ಬೆಳಗಿನ ಜಾವ ಶ್ರೀ ಮಳೆಸ್ವಾಮಿಗೆ ಪಂಚಾಮೃತ ಅಭಿಷೇಕ, ಜಲಾಭೀಷೇಕ, ಪುಷ್ಪಾಲಂಕಾರ ಮಾಡಿ ಮಹಾಮಂಗಳಾರತಿ ಮಾಡಿ ವರುಣನ ಪ್ರಾರ್ಥನೆ ಮಾಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ