ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮುಧೋಳದಲ್ಲಿ ಕೆನರಾ ಬ್ಯಾಂಕಿನಲ್ಲಿ ರೈತರು ಪಡೆದಿರುವ ಸಾಲ ಮರುಪಾವತಿ ವಿಚಾರವಾಗಿ ಬ್ಯಾಂಕ್‌ಗಳಿಂದ ನೋಟಿಸ್, ಆಸ್ತಿ ಜಪ್ತಿ ನೋಟಿಸ್ ಬರುತ್ತಿವೆ. ಇದರಿಂದ ರೈತರು ಮಾನಸಿಕ ಕಿರುಕುಳ ಅನುಭವಿಸುತ್ತಿದ್ದಾರೆ. ನ್ಯಾಯಾಲಯದಿಂದ ಆಸ್ತಿ ಜಪ್ತಿ ನೋಟಿಸ್ ಜಾರಿ ಮಾಡಿದರೆ ರೈತರು ತುಂಬಾ ತೊಂದರೆ ಅನುಭವಿಸಬೇಕಾಗುತ್ತದೆ. ಹೀಗಾಗಿ ರೈತರಿಗೆ ಒನ್ ಟೈಮ್ ಸೆಟಲ್ ಮೆಂಟ್ ನಲ್ಲಿ ಕಡಿಮೆ ಹಣ ಪಾವತಿಗೆ ಅವಕಾಶ ಕಲ್ಪಿಸಿಕೊಡಬೇಕು. ರೈತರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಬೇಕು. ಇಲ್ಲವಾದಲ್ಲಿ ರೈತರು ಉಗ್ರ ಹೋರಾಟ ಮಾಡುವುದಾಗಿ ಸಂಸದರಿಗೆ ತಿಳಿಸಿದರು.
ಅನೇಕ ರೈತರ ಸಾಲವೂ ಕಟಬಾಕಿ ಇದ್ದು, ಸಾಲಕ್ಕಿಂತ ಹಲವು ಪಟ್ಟು ಬಡ್ಡಿ ಹೆಚ್ಚಳ ಆಗಿದೆ. ರೈತರು ಸಂಕಷ್ಟದಲ್ಲಿದ್ದು, ಬಡ್ಡಿ ಸಂಪೂರ್ಣ ಕೈಬಿಡಬೇಕು. ಜೊತೆಗೆ ಸಾಲದ ಮೊತ್ತದಲ್ಲೂ ರಿಯಾಯಿತಿ ಮಾಡಿ ಸಾಲ ಪಾವತಿಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.ಈ ಬಗ್ಗೆ ಸಂಸದ ಪಿ.ಸಿ. ಗದ್ದಿಗೌಡರ ಅವರು ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ ಹಾಗೂ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ಕೆಲ ಬ್ಯಾಂಕ್ ಅಧಿಕಾರಿಗಳ ಜೊತೆಗೆ ಚರ್ಚಿಸಿ, ಮಾಹಿತಿ ಪಡೆದುಕೊಂಡರು.
ರೈತರು ಪಡೆದಿರುವ ಸಾಲ ಮರುಪಾವತಿ ಮತ್ತು ಒನ್ ಟೈಮ್ ಸೆಟಲ್ ಮೆಂಟ್ ಕುರಿತು ಚರ್ಚಿಸಲು ಬ್ಯಾಂಕ್ ಅಧಿಕಾರಿಗಳ ಜೊತೆಗೆ ಫೆ.24ರಂದು ಸಭೆ ನಡೆಸಲಾಗುವುದು. ಬ್ಯಾಂಕ್ ನಿಯಮಾವಳಿ ಏನಿದೆ ಹಾಗೂ ತಮ್ಮ ಬೇಡಿಕೆ ಬಗ್ಗೆ ಚರ್ಚಿಸೋಣ ಎಂದು ತಿಳಿಸಿದರು.