ಲಯನ್ಸ್ ಕ್ಲಬ್ ಮಂಗಳೂರು ವತಿಯಿಂದ ದಸರಾ ಆಚರಣೆ

KannadaprabhaNewsNetwork |  
Published : Nov 14, 2026, 02:45 AM IST
ಲಯನ್ಸ್ ಕ್ಲಬ್ ಮಂಗಳೂರು ವತಿಯಿಂದ ದಸರಾ ಆಚರಿಸಲಾಯಿತು  | Kannada Prabha

ಸಾರಾಂಶ

ಲಯನ್ಸ್ ಮಂಗಳೂರು ವತಿಯಿಂದ ವಲಯಾಧ್ಯಕ್ಷ ರಾಜೇಶ್ ಕಾಮತ್ ಅಧಿಕೃತ ಭೇಟಿ ಹಾಗೂ ದಸರಾ ಆಚರಣೆ ನಡೆಯಿತು.

ಮಂಗಳೂರು: ಲಯನ್ಸ್ ಮಂಗಳೂರು ವತಿಯಿಂದ ವಲಯಾಧ್ಯಕ್ಷ ರಾಜೇಶ್ ಕಾಮತ್ ಅಧಿಕೃತ ಭೇಟಿ ಹಾಗೂ ದಸರಾ ಆಚರಣೆ ನಡೆಯಿತು.

ರಾಜೇಶ್ ಕಾಮತ್ ಮಾತನಾಡಿ, ಲಯನ್ಸ್ ಸಂಸ್ಥೆ ಎಂಬುದು ಕೇವಲ ಸಾಮಾಜಿಕ ಕಾರ್ಯ ಮಾಡುವ ಸಂಸ್ಥೆ ಅಲ್ಲ. ಅದು ನಮ್ಮ ಮಾನವೀಯ ಮೌಲ್ಯದ ವ್ಯಯಕ್ತಿಕ ಬೆಳವಣಿಗೆಯ ಸಂಸ್ಥೆಯೂ ಹೌದು. ಪರಸ್ಪರ ಹೊಂದಾಣಿಕೆ ಮತ್ತು ಜೀವನದ ದಾರಿಯನ್ನು ನಾವು ಇಲ್ಲಿ ಕಲಿಯುತ್ತೇವೆ ಎಂದರು.

ಜೋನ್ ಎನ್ವಾಯ್ ಲ್ಯಾನ್ಸ್ ಲಾಟ್ ಡಿ ಕೋಸ್ಟಾ, ವಲಯದ ಪ್ರಥಮ ಮಹಿಳೆ ರಚನಾ ಕಾಮತ್, ಲಯನ್ಸ್ ಕ್ಲಬ್ ಕಾವೂರು ಅಧ್ಯಕ್ಷ ಮೋಹನದಾಸ್ ಶೆಟ್ಟಿ, ಲಯನ್ಸ್ ಕ್ಲಬ್ ಮಂಗಳೂರು ಲೇಡಿಹಿಲ್ ಅಧ್ಯಕ್ಷ ವಿಕ್ಟರ್ ಮೊರಾಸ್, ಖಜಾಂಜಿ ಸೀಮಾ ಮಯ್ಯ, ದಸರಾ ಹಬ್ಬ ಆಚರಣೆಯ ಸಂಯೋಜಕಿ ಅಪೂರ್ವ ನಾಯಕ್, ಲಿಯೊ ಕ್ಲಬ್ ಅಧ್ಯಕ್ಷ ಘನಷ್ಯಾಮ್, ಜಿಲ್ಲೆ 317 ಡಿ ಪ್ರಥಮ ಉಪರಾಜ್ಯಪಾಲ ಗೋವರ್ಧನ್ ಶೆಟ್ಟಿ, ಪ್ರಾಂತ್ಯ 10ರ ಪ್ರಾಂತ್ಯಾಧ್ಯಕ್ಷ ಜಯರಾಜ್ ಪ್ರಕಾಶ್, ಪ್ರಾಂತ್ಯ ರಾಯಭಾರಿ ಸತೀಶ್ ರೈ, ಪ್ರಥಮ ಉಪಾಧ್ಯಕ್ಷ ಗಣೇಶ ಶೆಣೈ, ತೃತೀಯ ಉಪಾಧ್ಯಕ್ಷ ರವಿಶಂಕರ್ ರೈ ಇದ್ದರು.

ದಯಾವತಿ ಮೆಂಡನ್ ಅತಿಥಿಗಳ ಪರಿಚಯಿಸಿದರು

ಲಯನ್ಸ್ ಹೇಮಾ ರಾವ್ ಸ್ವಾಗತಿಸಿದರು.

ಕಾರ್ಯದರ್ಶಿ ನ್ಯಾನ್ಸಿ ಮಸ್ಕರೇನ್ಹಸ್ ವಂದಿಸಿದರು.

ಬಳಿಕ ಸದಸ್ಯರಿಂದ ದಸರಾ ಹಬ್ಬದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ದಾಂಡಿಯಾ ನೃತ್ಯ ನಡೆಯಿತು.

---

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಸರ್ವತೋಮುಖ ಪ್ರಗತಿಗೆ ಶ್ರಮಿಸಿ
ಎಸಿಯಾಗಿ ಪದೋನ್ನತಿ ಹೊಂದಿದ ತಹಸೀಲ್ದಾರ್‌ ಬೋಸಗಿ