ಲಯನ್ಸ್ ನಿಂದ ದೇಶಾದ್ಯಂತ ಬಡವರಿಗೆ ಸೇವಾ ಕಾರ್ಯ: ಶಿವಣ್ಣ

KannadaprabhaNewsNetwork |  
Published : Sep 30, 2025, 12:00 AM IST
29ಎಚ್ಎಸ್ಎನ್9 :  | Kannada Prabha

ಸಾರಾಂಶ

ಉಳ್ಳವರು ಬಡವರಿಗೆ ಸಹಾಯ ಹಸ್ತ ಚಾಚಬೇಕು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಮುಂದುವರಿದ ನಾಗರಿಕ ಸಮಾಜದಲ್ಲಿ ಇನ್ನೂ ಬಡತನ ತಾಂಡವಾಡುತ್ತಿದೆ ಎಂಬ ಆತಂಕವನ್ನು ತಾಲೂಕು ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಲಯನ್ಸ್ ಸೇವಾ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಬಿ.ಎಚ್. ಶಿವಣ್ಣ ವ್ಯಕ್ತಪಡಿಸಿದ್ದಾರೆ.

ಅವರು ಬಾಗೂರು ಗ್ರಾಮದಲ್ಲಿ ವಲಸೆ ಕಾರ್ಮಿಕರಿಗೆ ಲಯನ್ಸ್ ಸೇವಾ ಸಂಸ್ಥೆ ವತಿಯಿಂದ ಆಹಾರದ ಕಿಟ್ ಗಳನ್ನು ವಿತರಿಸಿ ಮಾತನಾಡಿ, ಸಮಾಜದಲ್ಲಿ ಇಂದು ಅನೇಕರು ಬಡತನದಿಂದ ನರಳುತ್ತಿದ್ದಾರೆ. ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಬಡವರಿಗಾಗಿ ವಸತಿ ಕಲ್ಪಿಸುವ ವಿಶೇಷ, ಸೌಲಭ್ಯಗಳನ್ನು ಹಾಗೂ ಆಹಾರದ ಪರಿಕರಗಳನ್ನು ಒದಗಿಸಲಾಗುವುದು ಎಂದರು.

ಲಯನ್ಸ್ ಸೇವಾ ಸಂಸ್ಥೆಯ ವಲಯ ವಿಭಾಗದ ಅಧ್ಯಕ್ಷ ಡಾ. ವಿ. ಮಹೇಶ್ ಮಾತನಾಡಿ, ಬಡತನವನ್ನು ನಿವಾರಣೆ ಮಾಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಈ ಧ್ಯೇಯದೊಂದಿಗೆ ಲಯನ್ಸ್ ಸೇವಾ ಸಂಸ್ಥೆ ದೇಶಾದ್ಯಂತ ಆಹಾರದ ಕಿಟ್ ಗಳನ್ನು ಬಡವರಿಗೆ ನೀಡುತ್ತಿದೆ. ನಿತ್ಯ ಬಳಕೆಯ ೧೯ ಪದಾರ್ಥಗಳನ್ನು ಒಂದು ತಿಂಗಳಿಗೆ ಆಗುವಷ್ಟು ಪರಿಕರವನ್ನು, ಸಾಂಕೇತಿಕವಾಗಿ ಬಡವರಿಗೆ ನೀಡಲಾಗುತ್ತಿದೆ. ಈ ಕಾರ್ಯಗಳಿಂದ ನಮ್ಮ ಆತ್ಮ ತೃಪ್ತಿ ಆಗಬೇಕು, ಮುಂದಿನ ದಿನಗಳಲ್ಲಿ ಬಡವರಿಗಾಗಿ ಆರೋಗ್ಯ ಶಿಬಿರವನ್ನು ಬಾಗೂರು ಹಾಗೂ ಚನ್ನರಾಯಪಟ್ಟಣದಲ್ಲಿ ಆಯೋಜನೆ ಮಾಡಲಾಗುವುದು ಎಂದು ಹೇಳಿದರು.

ನಿವೃತ್ತ ಬ್ಯಾಂಕ್ ಅಧಿಕಾರಿ, ಬಾಗೂರು ಲಯನ್ಸ್ ಸೇವಾ ಸಂಸ್ಥೆ ಅಧ್ಯಕ್ಷ ಬಿ.ಟಿ ಮಂಜೇಗೌಡರು ಮಾತನಾಡಿ, ಉಳ್ಳವರು ಬಡವರಿಗೆ ಸಹಾಯ ಹಸ್ತ ಚಾಚಬೇಕು ಎಂದು ಮನವಿ ಮಾಡಿದರು.

ಮುಖಂಡರಾದ ಓಬಳಾಪುರ ಬಸವರಾಜು, ಪ್ರಖ್ಯಾತ ಕೀಲು ಮತ್ತು ಮೂಳೆ ತಜ್ಞ ವೈದ್ಯ ಡಾ. ವಿ. ಮಹೇಶ್ ಹಾಗೂ ಗಣ್ಯರನ್ನು ಅಭಿನಂದಿಸಲಾಯಿತು.

ವಲಸೆ ಕಾರ್ಮಿಕರಿಗೆ ಆಹಾರಕಿಟ್ ಗಳನ್ನು ವಿತರಣೆ ಮಾಡಲಾಯಿತು.

ಲಯನ್ಸ್ ಸೇವಾ ಸಂಸ್ಥೆ ಮಾಜಿ ಅಧ್ಯಕ್ಷ ಬಿ.ಟಿ ಮಂಜೇಗೌಡರು, ಕೃಷ್ಣೇಗೌಡರು, ಲಯನ್ಸ್ ಪದಾಧಿಕಾರಿಗಳಾದ ತಾಲೂಕು ಅಧ್ಯಕ್ಷ ಗಿರೀಶ್, ಅಶೋಕ್, ಗೋವಿಂದರಾಜ್, ಮಂಜಣ್ಣ, ಸುರೇಶ್, ನಾಗರಾಜ್, ಲೋಕೇಶ್ ಮುಂತಾದವರಿದ್ದರು.

PREV

Recommended Stories

ತಪ್ಪಿಸಬಹುದಿತ್ತೆ ಕರ್ನಾಟಕ ರಾಜ್ಯದ ಜನರ 'ಭೀಮಾ' ಕಣ್ಣೀರು!
ಊಟ ಆಮ್ಯಾಲೆ ಮಾಡ್ರಿ ಈಗ ಕುಂದ್ರರೋ..! - ದಿಂಗಾಲೇಶ್ವರ ಶ್ರೀ ಹರಸಾಹಸ