ಸೌಲಭ್ಯ ಸಿಗಲು ವಿಶ್ವಕರ್ಮರು ಸಂಘಟಿತರಾಗಲಿ: ಶಿವಸುಜ್ಞಾನತೀರ್ಥ ಸ್ವಾಮೀಜಿ

KannadaprabhaNewsNetwork |  
Published : Sep 30, 2025, 12:00 AM IST
29ಎಚ್ಎಸ್ಎನ್5 : ಹೊಳೆನರಸೀಪುರದ ಗಣಪತಿ ಪೆಂಡಾಲಿನಲ್ಲಿ ತಾ. ವಿಶ್ವಕರ್ಮ ಸಮಾಜದ ವತಿಯಿಂದ ಆಯೋಜನೆ ಮಾಡಿದ್ದ ೯ನೇ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಸಂಸದ ಶ್ರೇಯಸ್ ಎಂ.ಪಟೇಲ್ ಉದ್ಘಾಟಿಸಿದರು. | Kannada Prabha

ಸಾರಾಂಶ

ವಿಶ್ವಕರ್ಮರನ್ನು ಒಗ್ಗೂಡಿಸುವ ಸಲುವಾಗಿ ಸಂಘಟನೆಗಳನ್ನು ರಚಿಸಿ, ಬೆಂಗಳೂರಿನಲ್ಲಿ ರಾಜ್ಯಾಧ್ಯಕ್ಷ ನಂಜುಂಡಿ ಅವರ ನೇತೃತ್ವದಲ್ಲಿ ಬೃಹತ್ ವಿಶ್ವಕರ್ಮರ ಸಮಾವೇಶ ನಡೆಸುವ ಮೂಲಕ ನಮ್ಮ ಒಗ್ಗಟ್ಟು ಪ್ರದರ್ಶಿಸಿದ ಫಲವಾಗಿ ಕಳೆದ ೯ ವರ್ಷಗಳ ಹಿಂದೆ ರಾಜ್ಯ ಸರ್ಕಾರ ವಿಶ್ವಕರ್ಮ ಜಯಂತಿ ಆಯೋಜಿಸಲು ಅವಕಾಶ ಕಲ್ಪಿಸಿತು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ವಿಶ್ವಕರ್ಮರು ಹಿಂದೂಗಳಿಗೆ ದೇವಾಲಯಗಳು ಹಾಗೂ ಅರಮನೆಗಳು, ಜೈನರಿಗೆ ಬಸದಿಗಳು, ವಿಗ್ರಹಗಳು ಹಾಗೂ ಬೌದ್ಧರಿಗೆ ಅಜಂತಾ ಎಲೋರ ಹಾಗೂ ಬೌದ್ಧರ ಪ್ರತಿಮೆ, ಮುಸ್ಲಿಮರಿಗೆ ದರ್ಗಾಗಳು ಮತ್ತು ಕ್ರೈಸ್ತರಿಗೆ ಚರ್ಚ್‌ಗಳನ್ನು ನಿರ್ಮಿಸಿದ್ದಾರೆ. ವಿಶ್ವವಿಖ್ಯಾತ ಬೇಲೂರು, ಹಳೇಬೀಡು. ಗೊಮ್ಮಟೇಶ್ವರ ಮೂರ್ತಿ, ಅಜಂತಾ ಎಲೋರ, ತಾಜ್ ಮಹಲ್, ಸೆಂಟ್ ಫಿಲೋಮೀನಾ ಚರ್ಚ್ ನಿರ್ಮಿಸಿಕೊಟ್ಟಿದ್ದಾರೆ, ವಿಶ್ವದಲ್ಲಿ ಎಲ್ಲಾ ಧರ್ಮಗಳ ಧಾರ್ಮಿಕ ಕೇಂದ್ರಗಳನ್ನು ನಿರ್ಮಿಸಿಕೊಟ್ಟ ಏಕೈಕ ಸಮುದಾಯ ಅದು ವಿಶ್ವಕರ್ಮ ಸಮುದಾಯವೆಂದು ಹೇಳಲು ಹೆಮ್ಮೆಪಡಬೇಕು ಎಂದು ಅರಕಲಗೂಡು ಅರೆಮಾದನಹಳ್ಳಿಯ ವಿಶ್ವಬ್ರಾಹ್ಮಣ ಮಠದ ಪೂಜ್ಯ ಶ್ರೀ ಶಿವಸುಜ್ಞಾನತೀರ್ಥಸ್ವಾಮೀಜಿ ತಿಳಿಸಿದರು.

ಪಟ್ಟಣದ ಗಣಪತಿ ಪೆಂಡಾಲಿನಲ್ಲಿ ತಾಲೂಕು ವಿಶ್ವಕರ್ಮ ಸಮಾಜದ ವತಿಯಿಂದ ಆಯೋಜಿಸಿದ್ದ ೯ನೇ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ವಿಶ್ವಕರ್ಮರನ್ನು ಒಗ್ಗೂಡಿಸುವ ಸಲುವಾಗಿ ಸಂಘಟನೆಗಳನ್ನು ರಚಿಸಿ, ಬೆಂಗಳೂರಿನಲ್ಲಿ ರಾಜ್ಯಾಧ್ಯಕ್ಷ ನಂಜುಂಡಿ ಅವರ ನೇತೃತ್ವದಲ್ಲಿ ಬೃಹತ್ ವಿಶ್ವಕರ್ಮರ ಸಮಾವೇಶ ನಡೆಸುವ ಮೂಲಕ ನಮ್ಮ ಒಗ್ಗಟ್ಟು ಪ್ರದರ್ಶಿಸಿದ ಫಲವಾಗಿ ಕಳೆದ ೯ ವರ್ಷಗಳ ಹಿಂದೆ ರಾಜ್ಯ ಸರ್ಕಾರ ವಿಶ್ವಕರ್ಮ ಜಯಂತಿ ಆಯೋಜಿಸಲು ಅವಕಾಶ ಕಲ್ಪಿಸಿತು. ನಂತರದಲ್ಲಿ ಹಲವಾರು ಯೋಜನೆಗಳು ಜಾರಿಗೆ ತರಲು ಮುಖ್ಯ ಕಾರಣ ಅಂದು ನಡೆಸಿದ ಸಮಾವೇಶ. ಆದ್ದರಿಂದ ನಾವು ಸಂಘಟಿತರಾಗಿದ್ದಲ್ಲಿ ಸೌಲಭ್ಯಗಳು ನಮ್ಮಲ್ಲಿಗೇ ಬರುತ್ತವೆ, ವಿಶ್ವಕರ್ಮರು ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ದೈಹಿಕವಾಗಿ ಹಾಗೂ ಸಾಮಾಜಿಕವಾಗಿ ಸದೃಢರಾಗಬೇಕಾದರೆ ಜಾತಿಗಣತಿ ಸಂದರ್ಭದಲ್ಲಿ ವಿಶ್ವಕರ್ಮ ಎಂದೇ ನಮೂದಿಸಿ ಎಂದು ಕರೆಕೊಟ್ಟರು.

ಸಂಸದ ಶ್ರೇಯಸ್ ಎಂ.ಪಟೇಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಶ್ವಕರ್ಮರು ವಿಷ್ಣುವಿನ ಶ್ರೀಚಕ್ರ ಹಾಗೂ ಶಿವನಿಗೆ ತ್ರಿಶೂಲ ಹಾಗೂ ಪ್ರಸಿದ್ಧ ದೇವಾಲಯಗಳು ಮತ್ತು ಮಗು ಹುಟ್ಟಿದಾಗ ತೊಟ್ಟಿಲು ಮಾಡುವುದರಿಂದ ಎಲ್ಲಾ ವಿಷಯಗಳಲ್ಲೂ ನಮ್ಮ ಜೀವಿತಾವಧಿಯಲ್ಲಿ ಮನುಕುಲಕ್ಕೆ ಅಗತ್ಯವಿದ್ದಾರೆ. ವಿಶ್ವಕರ್ಮರ ಚರಿತ್ರೆ ಹಾಗೂ ಅವರು ತೋರಿದ ದಾರಿ ಜತೆಗೆ ಅವರಲ್ಲಿದ್ದ ನೈಪುಣ್ಯತೆಯನ್ನು ಇಂದಿನ ತಂತ್ರಜ್ಞಾನದ ಜತೆಗೆ ಅಳವಡಿಸಿಕೊಂಡು ಸಾಗಬೇಕಿದೆ. ಹಿರಿಯರು ಇಂದಿನ ಯುವ ಜನತೆಗೆ ವಿಶ್ವಕರ್ಮರ ಚರಿತ್ರೆ ಹಾಗೂ ಅವರು ನೀಡಿದ ಮಾರ್ಗದರ್ಶನವನ್ನು ಅರ್ಥೈಸುವ ಜತೆಗೆ ಪಾಲನೆ ಮಾಡುವ ನಿಟ್ಟಿನಲ್ಲಿ ಅಗತ್ಯ ಸಲಹೆ ನೀಡಬೇಕಿದೆ ಎಂದು ತಿಳಿಸಿ ಸುಧೀರ್ಘವಾಗಿ ಮಾತನಾಡಿದರು.

ಪುರಸಭಾಧ್ಯಕ್ಷ ಎಚ್.ಕೆ.ಪ್ರಸನ್ನ, ನಿ. ಪ್ರಾಂಶುಪಾಲ ಪ್ರಭುಶಂಕರ್, ತಾ. ವಿಶ್ವಕರ್ಮ ಸಮಾಜದ ಅಧ್ಯಕ್ಷ ಬಿ.ಎಚ್.ಗಂಗಾಧರಾಚಾರ್, ಹಿರಿಯರಾದ ಶಂಕರಾಚಾರ್ ಅವರು ಮಾತನಾಡಿದರು.

ವಿಶ್ವಕರ್ಮ ರಾಜ್ಯ ಸಮಿತಿ ಉಪಾಧ್ಯಕ್ಷ ಕುಮಾರ್, ಬಿಇಒ ಸೋಮಲಿಂಗೇಗೌಡ, ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಹರೀಶ್, ಉಪಾಧ್ಯಕ್ಷ ನಾರಾಯಣ, ತಾ. ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಬಿ.ವೆಂಕಟೇಶ್, ಮುಖಂಡರಾದ ಭಾಸ್ಕರಾಚಾರ್, ರುದ್ರಾಚಾರ್, ಶ್ರೀನಿವಾಸ, ಸಂತೋಷ, ರೇವಣ್ಣಾಚಾರ್, ಡಕ್ಕಣಾಚಾರ್, ಇತರರು ಇದ್ದರು.

PREV

Recommended Stories

ತಪ್ಪಿಸಬಹುದಿತ್ತೆ ಕರ್ನಾಟಕ ರಾಜ್ಯದ ಜನರ 'ಭೀಮಾ' ಕಣ್ಣೀರು!
ಊಟ ಆಮ್ಯಾಲೆ ಮಾಡ್ರಿ ಈಗ ಕುಂದ್ರರೋ..! - ದಿಂಗಾಲೇಶ್ವರ ಶ್ರೀ ಹರಸಾಹಸ