ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಹನುಮಂತಪ್ಪ ವೃತ್ತದಲ್ಲಿರುವ ಚಿಕ್ಕಮಗಳೂರು ತಾಲೂಕು ಕಚೇರಿ ಆವರಣದಲ್ಲಿ ನೂರಾರು ಮಧ್ಯದ ಬಾಟಲಿಗಳು ಬಿದ್ದಿರುವುದು ಮಂಗಳವಾರ ಬೆಳಕಿಗೆ ಬಂದಿದೆ. ತಾಲೂಕು ಕಚೇರಿ ಆವರಣದಲ್ಲಿಯೇ ಮಹಿಳಾ ಪೊಲೀಸ್ ಠಾಣೆ ಇದೆ. ಆದರೂ ಸಂಜೆಯಾಗುತ್ತಿದಂತೆ ತಾಲೂಕು ಕಚೇರಿ ಆವರಣವು ಕುಡುಕರ ಅಡ್ಡೆ ಆಗುತ್ತಿರುವುದು ಅಚ್ಚರಿಯ ಸಂಗತಿಯಾಗಿದೆ.
ಮುಖ್ಯವಾಗಿ ತಾಲೂಕು ಕಚೇರಿಗೆ ಆವರಣದಲ್ಲಿ ಮಹಿಳಾ ಪೊಲೀಸ್ ಠಾಣೆ ಇರುವುದರಿಂದ ಎರಡು ಗೇಟ್‌ಗಳು ದಿನದ 24 ಗಂಟೆ ತೆರೆದಿರುತ್ತದೆ. ಇದನ್ನು ಬಂಡವಾಳ ಮಾಡಿಕೊಂಡ ಕುಡುಕರು, ಸಂಜೆಯಾಗುತ್ತಿದಂತೆ ತಾಲೂಕು ಕಚೇರಿ ಆವರಣದಲ್ಲಿ ಪಾರ್ಟಿ ಮಾಡುತ್ತಿದ್ದಾರೆ.ಇಷ್ಟೊಂದು ದೊಡ್ಡ ಪ್ರಮಾಣದ ಮದ್ಯದ ಬಾಟಲಿಗಳು ಬಿದ್ದಿದ್ದರೂ ಅಧಿಕಾರಿಗಳು ಈ ಬಗ್ಗೆ ಗಮನ ನೀಡದಿರುವುದು, ಚಿಕ್ಕಮಗಳೂರಿನ ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ತಾಲೂಕು ಕಚೇರಿ ಪಕ್ಕದಲ್ಲಿ ಸಂಜೆ ಆಗುತ್ತಿದಂತೆ ಪುಡ್ ಸ್ಟಾಲ್‌ಗಳು ಕಾರ್ಯಾರಂಭಗೊಳ್ಳುತ್ತವೆ. ಈ ಅವಕಾಶ ಬಳಕೆ ಮಾಡಿಕೊಂಡು ಮದ್ಯದೊಂದಿಗೆ ಬರುವ ಕುಡುಕರು ರುಚಿಕರ ತಿಂಡಿಯೊಂದಿಗೆ ತಾಲೂಕು ಕಚೇರಿಯ ಆವರಣವನ್ನು ಬಾರ್ ಅಂಡ್ ರೆಸ್ಟೋರೆಂಟ್ ಆಗಿ ಮಾಡಿಕೊಳ್ಳುತ್ತಿದ್ದಾರೆ.
ಜಿಲ್ಲಾ ಆಟದ ಮೈದಾನದಲ್ಲಿಯೂ ಆದೇ ಕಥೆ
ಕಸಕ್ಕೆ ಬೆಂಕಿ
ಚಿಕ್ಕಮಗಳೂರು ಜಿಲ್ಲೆ ಸುಸಂಸ್ಕೃತರಿಗೆ ಹೆಸರು ವಾಸಿಯಾದ ಜಿಲ್ಲೆಯಾಗಿದೆ. ಈ ರೀತಿ ಕೆಲವು ಕಿಡಿಗೇಡಿಗಳು ನಡೆದುಕೊಳ್ಳುವುದರಿಂದ ತಪ್ಪು ಭಾವನೆ ಮೂಡಲಿದೆ. ಸ್ವಚ್ಛಗೊಳಿಸಿ, ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಲಾಗುವುದು. ಜತೆಗೆ, ಸಿಸಿಟಿವಿಯಲ್ಲಿ ಪರಿಶೀಲನೆ ಮಾಡಿ ಕಿಡಿಗೇಡಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
ತಾಲೂಕು ಕಚೇರಿ ಆವರಣ ಹಾಗೂ ಮಹಿಳಾ ಪೊಲೀಸ್ ಠಾಣೆ ಪಕ್ಕದಲ್ಲಿ ಈ ರೀತಿ ಮಧ್ಯದ ಬಾಟಲಿಗಳು ಬಿದ್ದಿವೆ. ಇದು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.