ಸಂಸದರು ಮಾಲೂರಿಗೆ ಎಷ್ಟು ಹಣ ತಂದಿದ್ದಾರೆ ಎಂದು ಪಟ್ಟಿ ಕೊಡಿ

KannadaprabhaNewsNetwork |  
Published : May 26, 2025, 01:01 AM ISTUpdated : May 26, 2025, 12:46 PM IST
ರ್ಷಿಕೆ-೨೪ ಕೆ.ಎಂ.ಎಲ್‌.ಆರ್.೧-ಮಾಲೂರು ಪಟ್ಟಣದ ಮಾರುತಿ ಬಡಾವಣೆಯ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಕೆಜಿ ಹಳ್ಳಿ ಗ್ರಾಮ ಮಾಜಿ ಅಧ್ಯಕ್ಷ ಸತೀಶ್ ರಾಜಣ್ಣ ಮಾತನಾಡಿದರು | Kannada Prabha

ಸಾರಾಂಶ

ಲೋಕಾಸಭಾ ಚುನಾವಣೆಯಲ್ಲಿ ಟೊಂಕ ಕಟ್ಟಿಕೊಂಡು ಬೆಂಬಲಿಸಿ ಗೆಲ್ಲಿಸಿದ ನಿಮ್ಮ ಸಂಸದರು ಮಾಲೂರಿಗೆ ಎಷ್ಟು ಹಣ ತಂದಿದ್ದಾರೆ ಎಂದು ಪಟ್ಟಿ ಕೊಡಿ ಎಂದು ಕೆಜಿ ಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಸತೀಶ್ ರಾಜಣ್ಣ ಹೂಡಿ ವಿಜಯ್ ಕುಮಾರ್‌ಗೆ ಸವಾಲ್ ಹಾಕಿದ್ದಾರೆ.

 ಮಾಲೂರು : ಲೋಕಾಸಭಾ ಚುನಾವಣೆಯಲ್ಲಿ ಟೊಂಕ ಕಟ್ಟಿಕೊಂಡು ಬೆಂಬಲಿಸಿ ಗೆಲ್ಲಿಸಿದ ನಿಮ್ಮ ಸಂಸದರು ಮಾಲೂರಿಗೆ ಎಷ್ಟು ಹಣ ತಂದಿದ್ದಾರೆ ಎಂದು ಪಟ್ಟಿ ಕೊಡಿ, ಸರ್ಕಾರದಿಂದ ಶಾಸಕರ ಅನುದಾನ ಮಾಲೂರಿಗೆ ಎಷ್ಟು ತಂದಿದಾರೆ ಎಂದು ನಾನು ಪಟ್ಟಿ ಕೊಡ್ತಿನಿ ಈ ಬಗ್ಗೆ ಬೇಕಾದರೆ ಬಹಿರಂಗ ಚರ್ಚೆಗೆ ಸಿದ್ದ, ನೀವು ಬನ್ನಿ ಎಂದು ಕೆಜಿ ಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಸತೀಶ್ ರಾಜಣ್ಣ ಹೂಡಿ ವಿಜಯ್ ಕುಮಾರ್‌ಗೆ ಸವಾಲ್ ಹಾಕಿದ್ದಾರೆ.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ದಮ್ಮು, ತಾಕತ್ತು ಬಗ್ಗೆ ಮಾತೊಡೋ ಹೂಡಿ ವಿಜಯಕುಮಾರ್ ಅವರು ದಾಖಲೆಗಳ ಸಮೇತ ಬಹಿರಂಗ ಚರ್ಚೆಗೆ ಬರಲಿ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿರುದ್ಧ ಬಿಜೆಪಿ, ಜೆಡಿಎಸ್, ಸ್ವಾಭಿಮಾನಿ ಪಕ್ಷದವರು ಬೆಂಬಲಿಸಿ ಮತ ನೀಡಿ ಗೆಲ್ಲಿಸಿದ ನಿಮ್ಮ ಅಭ್ಯರ್ಥಿಯ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿ ಇದೆ. ಆದರೆ ಇದುವರೆಗೂ ಸಂಸದರು ಮಾಲೂರಿನ ಅಭಿವೃದ್ಧಿಗೆ ನಯ ಪೈಸಾ ಸಹ ತಂದಿಲ್ಲ ಎಂದ ಸತೀಶ್‌ ಅವರು ಆಕಸ್ಮತ್‌ ತಂದಿದ್ದಲ್ಲಿ ದಾಖಲೆ ಸಹಿತ ನೀಡಿ. ಕೋಲಾರ ಜಿಲ್ಲಾ ಸಂಸದರು ಮಾಲೂರು ತಾಲೂಕಿನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಜನತೆಗೆ ಸಂಸದರು ಯಾರು ಎಂದು ಮುಖಪರಿಚಯವಿಲ್ಲದಂತಾಗಿದೆ. 

ಅವರ ಪರಿಚಯ ತಾಲೂಕು ಮತದಾರರಿಗೆ ಮಾಡಿಸುವ ಕೆಲಸ ಮಾಡಿಸಿ ಎಂದರು.ತಾಲೂಕಿನ ಶಾಸಕರ ದಮ್ಮು ತಾಖತ್ ಬಗ್ಗೆ ಮತೋಡೋ ನೀವು ದಮ್ಮು ತಾಖತ್ ಇರೋದಕ್ಕೆ ಮಾಲೂರು ಇತಿಹಾಸದಲ್ಲಿ ಉಳಿಯುವಂತ ಅಭಿವೃದ್ಧಿ ಕೆಲಸಗಳು ಮಾಡಿದ್ದಾರೆ. ಹಿಂದೆ ೨ ಬಾರಿ ಶಾಸಕರಾದ ಎ ನಾಗರಾಜ್, ೨ ಬಾರಿ ಶಾಸಕರಾದ ಎಸ್.ಎನ್.ಕೃಷಯ್ಯಶೆಟ್ಟಿ ತಾಲೂಕಿನವರೆ ಆಗಿದ್ದು, ಯಾವುದೇ ಜಾತಿಯನ್ನು ಓಲೈಸಿಕೊಂಡು ರಾಜಕೀಯ ಮಾಡಿಲ್ಲ, ನೀವು ಹೂಡಿಯಿಂದ ಬಂದು ಒಂದು ಜಾತಿ ಸಮುದಾಯದವರನ್ನು ಓಲೈಸಿಕೋಂಡು ಮಾಲೂರಿನಲ್ಲಿ ಜಾತಿ ಬೀಜ ಭಿತ್ತಿ ರಾಜಕೀಯ ಪ್ರಚಾರಕ್ಕಾಗಿ ಗಿಟ್ಟಿಸಿಕೊಳುತ್ತಿರುವುದು ಎಷ್ಟು ಸರಿ ಎಂದರು.

ಸರ್ಕಾರದಿಂದ ಮಾಲೂರು ತಾಲೂಕಿಗೆ ಕೊಟ್ಯಾಂತರ ರುಪಾಯಿ ಆನುದಾನ ತರುವ ಶಾಸಕರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲಸಲ್ಲದ ಆರೋಪಗಳು ಮಾಡಿದರೆ ಸುಮ್ಮನಿರಲು ಸಾಧ್ಯ ಇಲ್ಲ. ಕಾಂಗ್ರೆಸ್ ಪಕ್ಷವೆಂದರೆ ಕೆ.ವೈ.ನಂಜೇಗೌಡ ಒಬ್ಬರೆ ಅಲ್ಲ್ಲ ಅವರ ಹಿಂದೆ ಜೇನು ಗೂಡು ಇದ್ದಂತೆ ಕಾರ‍್ಯಕರ್ತ ರು ನಾವಿದ್ದೀವಿ. ಜೇನು ಗೂಡಿಗೆ ಕೈ ಹಾಕಿದರೆ ಅದರ ಪರಿಣಾಮ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಹಳ್ಳಿ ಹಳ್ಳಿಗಳಲ್ಲಿ ನಿಮ್ಮ ವಿರುದ್ಧ ನಮ್ಮ ಕಾರ್ಯಕರ್ತರು ನಡೆಸುವ ಹೋರಾಟಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು

.ಶಾಸಕರ ಸ್ಥಾನಕ್ಕೆ ರಾಜೀನಾಮ ಕೊಟ್ಟು ಚುಣಾವಣೆಗೆ ಬನ್ನಿ ಎಂದು ಹೇಳಿರುವುದಕ್ಕೆ ಹೂಡಿಯಿಂದ ಜನ ಬಂದು ಇಲ್ಲಿ ಮತ ನೀಡಿ ನಂಜೇಗೌಡರನ್ನು ಗೆಲ್ಲಿಸಲಿಲ್ಲ, ನೀವು ಕೇಳಿದ್ದೇರಿ ಎಂದಾಗ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಚುನಾವಣೆಗೆ ಬರಲು ಇದೇನು ಜೂಜಾಟವಲ್ಲ. ತಾಲೂಕಿನ ಜನ ಸಂವಿದಾನ ಬದ್ದವಾಗಿ ನಂಜೇಗೌಡರನ್ನು ಆಯ್ಕೆ ಮಾಡಿದ್ದಾರೆ. ನಿಮಗೆ ಬೇಕೆಂದಾಗ ಚುನಾವಣೆ ಮಾಡಿಕೊಳ್ಳುವುದಕ್ಕೆ ನಿಮಗೆ ಕಾನೂನು ಬಗೆ ಅರಿವಿದ್ದೀಯ ಎಂದು ಪ್ರಶ್ನಿಸಿದರು.

ಇತ್ತೀಚೆಗೆ ಮಳೆಯಿಂದ ರಸ್ತೆ ಹಳ್ಳಗಳು ಬಿದ್ದಿದೆ ಅದನ್ನು ಸಂಬಧಪಟ್ಟ ಇಲಾಖೆಯ ಅಧಿಕಾರಿಗಳು ಸರಿಪಡಸಲು ಇದ್ದಾರೆ. ಅದು ಬಿಟ್ಟು ಟಿಪ್ಪರ್‌ನಲ್ಲಿ ಜಲ್ಲಿ ತಂದು ರಸ್ತೆಗೆ ಹಾಕಿ ಶೋ ಕೊಡೋಕೆ ಪುಕ್ಕಟೆ ಪ್ರಚಾರ ಗಿಟ್ಟಿಸುತಿದ್ದೀಯ, ರಾಜಕೀಯ ಮಾಡಲು ಇನ್ನು ಸಮಯವಿದೆ, ನೀನು ಸೇವೆ, ದಾನ, ಧರ್ಮ, ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳಿ ಅದು ಬಿಟ್ಟು ಇಂತಹ ಬೂಟಾಟಿಕೆ ಪ್ರಚಾರಕ್ಕಾಗಿ ಶೋ ಕೊಡುವುದನ್ನು ಬಿಡಿ ಎಂದರು.

ಹಲವಾರು ವರ್ಷಗಳ ಮಾಲೂರು ಜನತೆ ಕನಸು ನನಸಾಗಿಸಲು ಪುರಸಭೆಯನ್ನು ನಗರಸಭೆಯಾಗಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನದಿಂದ ನಗರ ಸಂಪೂರ್ಣ ಚಿತ್ರಣ ಬದಲಾವಣೆ ಕಾಣಲಿದೆ, ಶಾಸಕರ ದಮ್ಮು ತಾಕತ್ ಬಗ್ಗೆ ಮಾತನಾಡುವ ನೀವು ಬಸ್ ಸ್ಟಾಂಡ್, ಕೆರೆ ಅಭಿವೃದ್ದಿ, ಪ್ಲೇಓವರ್, ದೇವನಹಳ್ಳಿ ಯಿಂದ ತಮಿಳುನಾಡು ಗಡಿವರೆಗೆ ರಸ್ತೆ ಅಭಿವೃಧ್ಧಿ, ಇಂದಿರಾಕ್ಯಾಂಟಿನ್, ಕಸವಿಲೇವಾರಿ ಘಟಕ ಸೇರಿದಂತೆ ತಾಲೂಕಿನಲ್ಲಿ ಆನೇಕ ಅಭಿವೃದ್ಧಿ ಕಾಮಗಾರಿಗಳು ಸಾಗುತ್ತಿರುವ ವಿಷಯಗಳನ್ನು ತಿಳಿದುಕೊಂಡು ಮಾತನಾಡಬೇಕೆಂದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಧುಸೂಧನ್‌,ಡಿಸಿಸಿ ಬ್ಯಾಂಕ್‌ ನಿರ್ದೇಶಕ ದಿನ್ನಹಳ್ಳಿ ರಮೇಶ್‌ ಇದ್ದರು.

PREV
Read more Articles on

Recommended Stories

ಜಲಜೀವನ್‌ ಮಿಷನ್‌ ಯೋಜನೆ ಕಾಮಗಾರಿ ಪರಿಶೀಲನೆ
ಕೇಂದ್ರದಿಂದ ಬಂದ ಯೂರಿಯಾ ಗೊಬ್ಬರ ಎಲ್ಲಿಗೆ ಹೋಯ್ತು: ಎ.ಎಸ್.ಪಾಟೀಲನಡಹಳ್ಳಿ