ಚನ್ನರಾಯಪಟ್ಟಣ: ಕಲಿಕೆಯೊಂದಿಗೆ ವಿದ್ಯಾರ್ಥಿಗಳು ಕೌಶಲ್ಯ ಬೆಳೆಸಿಕೊಂಡರೇ ಸಮಾಜದಲ್ಲಿ ಉನ್ನತಿ ಸಾಧಿಸಬಹುದು, ಈ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳಿಗೆ ಕೌಶಲ್ಯತೆ ರೂಪಿಸುವ ಕೆಲಸವನ್ನು ಮಾಡಬೇಕು ಎಂದು ಅಂತರಾಷ್ಟ್ರೀಯ ಶಿಕ್ಷಣ ತಜ್ಞ ಎ.ಎಚ್.ಸಾಗರ್ ಹೇಳಿದರು.
ಇಂದು ಮಕ್ಕಳು ಶಾಲೆಯಲ್ಲಿ ಕಲಿಯುವುದಕ್ಕಿಂತ ಹೆಚ್ಚಾಗಿ ಸಾಮಾಜಿಕ ಮಾಧ್ಯಮಾಗಳು, ದೃಶ್ಯ ಮಾಧ್ಯಮಗಳಲ್ಲೇ ಹೆಚ್ಚು ಕಲಿಯುತ್ತಿದ್ದಾರೆ. ಶಿಕ್ಷಕಕರಿಗೆ ಇಂದಿನ ಯುಗದ ಮಕ್ಕಳಿಗೆ ಕಲಿಸುವುದು ಸವಾಲಾಗಿದೆ. ಶಾಲೆಗಳಲ್ಲಿ ಗುಣಾತ್ಮಕ ಮತ್ತು ಪರಿಣಾಮಕಾರಿಯಾಗಿ ಬೋಧಿಸುವ ಕೆಲಸವಾಗಬೇಕು. ಇದರೊಂದಿಗೆ ಮಕ್ಕಳಿಗೆ ಚಟುವಟಿಕೆ ಆಧಾರಿತ ಕಲಿಕೆಯೊಂದಿಗೆ ಕ್ರೀಡೆಗೆ ಒತ್ತು ಕೊಟ್ಟು ನಡೆಯುವುದು ಮುಖ್ಯವೆಂದರು.
ಈ ವೇಳೆ ನಾಗಶ್ರೀ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಚ್.ಎಸ್.ವಿಜಯ್ ಕುಮಾರ್, ಟ್ರಸ್ಟಿ ಯಶ್ವಸಿನಿ ರಾಜೀವ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೈಲಿನಿ ಸೋನ್, ಆಡಳಿತ ಮಂಡಳಿ ಸದಸ್ಯ ಆಸ್ಟೀನ್ ಜೆ.ಎಸ್.ರಾಜ್, ಪ್ರಾಂಶುಪಾಲರಾದ ಎ.ಸಿ.ಪವಿತ್ರಾ, ಆಡ್ಮಿನ್ ಕರುಣ್ ಸೇರಿ ಇತರರು ಇದ್ದರು.