ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ

KannadaprabhaNewsNetwork |  
Published : Oct 31, 2025, 02:15 AM ISTUpdated : Oct 31, 2025, 10:07 AM IST
Rajyotsava Award

ಸಾರಾಂಶ

ಪ್ರಸಕ್ತ 2025ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗುರುವಾರ ಪ್ರಕಟಿಸಿದ್ದು ಸಾಹಿತ್ಯ, ರಂಗಭೂಮಿ, ಸಂಗೀತ, ಕ್ರೀಡೆ, ಮಾಧ್ಯಮ ಸೇರಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ 70 ಮಂದಿ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

 ಬೆಂಗಳೂರು :  ಪ್ರಸಕ್ತ 2025ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗುರುವಾರ ಪ್ರಕಟಿಸಿದ್ದು ಸಾಹಿತ್ಯ, ರಂಗಭೂಮಿ, ಸಂಗೀತ, ಕ್ರೀಡೆ, ಮಾಧ್ಯಮ ಸೇರಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ 70 ಮಂದಿ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಸಾಹಿತ್ಯ ಕ್ಷೇತ್ರ 

: ಪ್ರೊ.ರಾಜೇಂದ್ರ ಚೆನ್ನಿ (ಶಿವಮೊಗ್ಗ), ತುಂಬಾಡಿ ರಾಮಯ್ಯ (ತುಮಕೂರು), ಪ್ರೊ.ಆರ್‌. ಸುನಂದಮ್ಮ (ಚಿಕ್ಕಬಳ್ಳಾಪುರ), ಡಾ.ಎಚ್.ಎಲ್. ಪುಷ್ಪ (ತುಮಕೂರು), ರಹಮತ್ ತರೀಕೆರೆ (ಚಿಕ್ಕಮಗಳೂರು) ಮತ್ತು ಹ.ಮ.ಪೂಜಾರ (ವಿಜಯಪುರ).

ಜಾನಪದ ಕ್ಷೇತ್ರ: 

 ಬಸಪ್ಪ ಭರಮಪ್ಪ ಚೌಡ್ಕಿ(ಕೊಪ್ಪಳ), ಬಿ.ಟಾಕಪ್ಪ ಕಣ್ಣೂರು (ಶಿವಮೊಗ್ಗ), ಸನ್ನಿಂಗಪ್ಪ ಸತ್ತೆಪ್ಪ ಮುಶೆನ್ನಗೋಳ (ಬೆಳಗಾವಿ), ಹನುಮಂತಪ್ಪ ಮಾರಪ್ಪ ಚೀಳಂಗಿ (ಚಿತ್ರದುರ್ಗ), ಎಂ.ತೋಪಣ್ಣ (ಕೋಲಾರ), ಸೋಮಣ್ಣ ದುಂಡಪ್ಪ ಧನಗೊಂಡ (ವಿಜಯಪುರ), ಸಿಂಧು ಗುಜರನ್‌ (ದಕ್ಷಿಣ ಕನ್ನಡ), ಎಲ್. ಮಹದೇವಪ್ಪ ಉಡಿಗಾಲ (ಮೈಸೂರು),

ಸಂಗೀತ: ದೇವೆಂದ್ರಕುಮಾರ ಪತ್ತಾರ್ (ಕೊಪ್ಪಳ), ಮಡಿವಾಳಯ್ಯ ಸಾಲಿ (ಬೀದರ್‌).

ನೃತ್ಯ : ಪ್ರೊ.ಕೆ.ರಾಮಮೂರ್ತಿ ರಾವ್‌ (ಮೈಸೂರು).

ಚಲನಚಿತ್ರ /ಕಿರುತೆರೆ: ಪ್ರಕಾಶ್ ರಾಜ್ (ದಕ್ಷಿಣ ಕನ್ನಡ), ವಿಜಯಲಕ್ಷ್ಮೀ ಸಿಂಗ್‌ (ಕೊಡಗು).

ಆಡಳಿತ : ಎಚ್.ಸಿದ್ದಯ್ಯ (ಬೆಂಗಳೂರು ದಕ್ಷಿಣ-ರಾಮನಗರ).

ವೈದ್ಯಕೀಯ: ಡಾ.ಆಲಮ್ಮ ಮಾರಣ್ಣ (ತುಮಕೂರು), ಡಾ. ಜಯರಂಗನಾಥ್ (ಬೆಂಗಳೂರು ಗ್ರಾಮಾಂತರ).

ಸಮಾಜ ಸೇವೆ: ಸೂಲಗಿತ್ತಿ ಈರಮ್ಮ (ವಿಜಯನಗರ), ಫಕ್ಕೀರಿ (ಬೆಂಗಳೂರು ಗ್ರಾಮಾಂತರ), ಕೋರಿನ್ ಆಂಟೊನಿಯಟ್ ರಸ್ಕೀನಾ (ದಕ್ಷಿಣ ಕನ್ನಡ), ಡಾ.ಎನ್.ಸೀತಾರಾಮ ಶೆಟ್ಟಿ (ಉಡುಪಿ ), ಕೋಣಂದೂರು ಲಿಂಗಪ್ಪ (ಶಿವಮೊಗ್ಗ),

ಸಂಕೀರ್ಣ: ಉಮೇಶ್ ಪಂಬದ (ದಕ್ಷಿಣ ಕನ್ನಡ), ಡಾ.ರವೀಂದ್ರ ಕೋರಿಶೆಟ್ಟರ್‌ (ಧಾರವಾಡ), ಕೆ.ದಿನೇಶ್ (ಬೆಂಗಳೂರು), ಶಾಂತರಾಜು (ತುಮಕೂರು ), ಜಾಫರ್ ಮೊಹಿಯುದ್ದೀನ್ (ರಾಯಚೂರು), ಪೆನ್ನ ಓಬಳಯ್ಯ (ಬೆಂಗಳೂರು ಗ್ರಾಮಾಂತರ), ಶಾಂತಿ ಬಾಯಿ (ಬಳ್ಳಾರಿ), ಪುಂಡಲೀಕ ಶಾಸ್ತ್ರಿ (ಬೆಳಗಾವಿ).

ಹೊರನಾಡು/ಹೊರದೇಶ: ಝಕರಿಯ ಬಜಪೆ (ಸೌದಿ). ಪಿ.ವಿ.ಶೆಟ್ಟಿ (ಮುಂಬೈ).

ಪರಿಸರ: ರಾಮೇಗೌಡ (ಚಾಮರಾಜನಗರ), ಮಲ್ಲಿಕಾರ್ಜುನ ನಿಂಗಪ್ಪ(ಯಾದಗಿರಿ).

ಕೃಷಿ: ಡಾ.ಎಸ್.ವಿ.ಹಿತ್ತಲಮನಿ (ಹಾವೇರಿ), ಎಂ.ಸಿ ರಂಗಸ್ವಾಮಿ (ಹಾಸನ).

ಮಾಧ್ಯಮ: ಕೆ.ಸುಬ್ರಮಣ್ಯ (ಬೆಂಗಳೂರು ), ಅಂಶಿ ಪ್ರಸನ್ನಕುಮಾರ್‌ (ಮೈಸೂರು), ಬಿ.ಎಂ.ಹನೀಫ್‌ (ದಕ್ಷಿಣ ಕನ್ನಡ), ಎಂ. ಸಿದ್ಧರಾಜು (ಮಂಡ್ಯ).

ವಿಜ್ಞಾನ ಮತ್ತು ತಂತ್ರಜ್ಞಾನ: ರಾಮಯ್ಯ (ಚಿಕ್ಕಬಳ್ಳಾಪುರ), ಏರ್ ಮಾರ್ಷಲ್ ಫಿಲಿಫ್ ರಾಜಕುಮಾರ್‌ (ದಾವಣಗೆರೆ), ಡಾ.ಆರ್.ವಿ. ನಾಡಗೌಡ (ಗದಗ)

ಸಹಕಾರ: ಶೇಖರಗೌಡ ವಿ.ಮಾಲಿಪಾಟೀಲ್ (ಕೊಪ್ಪಳ)

ಯಕ್ಷಗಾನ: ಕೋಟ ಸುರೇಶ ಬಂಗೇರ (ಉಡುಪಿ). ಐರಬೈಲ್‌ ಆನಂದ ಶೆಟ್ಟಿ (ಉಡುಪಿ), ಕೃಷ್ಣ ಪರಮೇಶ್ವರ ಹೆಗಡೆ-ಕೆ.ಪಿ ಹೆಗಡೆ (ಉತ್ತರ ಕನ್ನಡ).

ಬಯಲಾಟ: ಗುಂಡೂರಾಜ್ (ಹಾಸನ).

ರಂಗಭೂಮಿ: ಎಚ್.ಎಂ.ಪರಮಶಿವಯ್ಯ (ಬೆಂಗಳೂರು ದಕ್ಷಿಣ- ರಾಮನಗರ), ಎಲ್.ಬಿ.ಶೇಖ್ -ಮಾಸ್ತರ್(ವಿಜಯಪುರ), ಬಂಗಾರಪ್ಪ ಖುದಾನ್‌ಪುರ (ಬೆಂಗಳೂರು), ಮೈಮ್ ರಮೇಶ್‌ (ದಕ್ಷಿಣ ಕನ್ನಡ), ಡಿ.ರತ್ನಮ್ಮ ದೇಸಾಯಿ (ರಾಯಚೂರು).

ಶಿಕ್ಷಣ: ಡಾ.ಎಂ.ಆರ್.ಜಯರಾಮ್‌ (ಬೆಂಗಳೂರು), ಡಾ.ಎನ್.ಎಸ್. ರಾಮೇಗೌಡ(ಮೈಸೂರು ), ಎಸ್.ಬಿ.ಹೊಸಮನಿ (ಕಲಬುರಗಿ), ರಾಜಶ್ರೀ ನಾಗರಾಜು (ಬೆಳಗಾವಿ).

ಕ್ರೀಡಾ: ಆಶೀಶ್ ಕುಮಾರ್ ಬಲ್ಲಾಳ್‌ (ಬೆಂಗಳೂರು ), ಎಂ.ಯೋಗೇಂದ್ರ(ಮೈಸೂರು), ಡಾ.ಎನ್‌.ಎಂ.ಬಬಿನಾ (ಕೊಡಗು).

ನ್ಯಾಯಾಂಗ: ನ್ಯಾ. ಪಿ.ಬಿ. ಭಜಂತ್ರಿ (ಬಾಗಲಕೋಟೆ).

ಶಿಲ್ಪಕಲೆ: ಬಸಣ್ಣ ಮೋನಪ್ಪ ಬಡಿಗೇರ (ಯಾದಗಿರಿ), ನಾಗಲಿಂಗಪ್ಪ ಜಿ.ಗಂಗೂರ (ಬಾಗಲಕೋಟೆ).

ಚಿತ್ರಕಲೆ: ಬಿ. ಮಾರುತಿ(ವಿಜಯನಗರ).

ಕರಕುಶಲ: ಎಲ್. ಹೇಮಾಶೇಖರ್‌ (ಮೈಸೂರು)ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪರಿಚಯ:

ಸೂಲಗಿತ್ತಿ ಈರಮ್ಮ : ಸಮಾಜ ಸೇವೆ ಕ್ಷೇತ್ರದಲ್ಲಿ ಆಯ್ಕೆಯಾಗಿರುವ ವಿಜಯನಗರ ಜಿಲ್ಲೆಯ ಕೂಡ್ಲಗಿ ತಾಲೂಕಿನ ಓಬಳಶೆಟ್ಟಿ ಹಳ್ಳಿಯ ಸೂಲಗಿತ್ತಿ ಈರಮ್ಮ ಅವರಿಗೆ 103 ವರ್ಷ ವಯಸ್ಸು. ಕಳೆದ 70 ವರ್ಷದಲ್ಲಿ ಸೂಲಗಿತ್ತಿಯಾಗಿ ಮನೆಮನೆಗೆ ತೆರಳಿ ಸುಮಾರು 14 ಸಾವಿರಕ್ಕೂ ಹೆಚ್ಚು ಸಹಜ ಹಾಗೂ ಸುರಕ್ಷಿತ ಹೆರಿಗೆ ಮಾಡಿಸಿದ ಹೆಗ್ಗಳಿಗೆ ಅವರದ್ದು. ಗ್ರಾಮೀಣ ಭಾಗದಲ್ಲಿ ಎದುರಾಗುವ ವೈದ್ಯರ ಕೊರತೆಯನ್ನು ನಿಭಾಯಿಸುವಲ್ಲಿ ಇವರ ಪಾತ್ರ ಅನನ್ಯ.

ಫಕೀರಿ:

ಸಮಾಜಸೇವೆಗಾಗಿ ಪ್ರಶಸ್ತಿಗೆ ಭಾಜನರಾಗಿರುವ ಫಕೀರಿ (72) ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ. ಪೌರ ಕಾರ್ಮಿಕ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಸುಮಾರು ವರ್ಷಗಳಿಂದ ರಸ್ತೆಗಳನ್ನು ಗುಡಿಸುವುದು, ಒಳಚರಂಡಿಗಳನ್ನು ಸ್ವಚ್ಛ ಮಾಡುತ್ತಿದ್ದಾರೆ. ಹಗಲು ರಾತ್ರಿಯೆನ್ನದೆ ತಮ್ಮ ಜೀವನವನ್ನು ಪೌರಕಾರ್ಮಿಕ ವೃತ್ತಿಯಲ್ಲಿಯೇ ತೊಡಗಿಸಿಕೊಂಡಿದ್ದಾರೆ.

ಅಂಶಿ ಪ್ರಸನ್ನ ಕುಮಾರ್‌:

ಮಾಧ್ಯಮ ಕ್ಷೇತ್ರದ ಸಾಧನೆಗಾಗಿ ಪ್ರಶಸ್ತಿಗೆ ಭಾಜನರಾಗಿರುವ ಅಂಶಿ ಪ್ರಸನ್ನ ಕುಮಾರ್‌ ಅವರು, ಕನ್ನಡಪ್ರಭದ ಕಾರ್ಯನಿರ್ವಾಹಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು. 1964ರಲ್ಲಿ ಮೈಸೂರಿನಲ್ಲಿ ಜನಿಸಿದರು. ಮೈಸೂರು ವಿವಿಯಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಶಿಕ್ಷಣ ಪಡೆದಿರುವ ಅ‍ವರು, 1983ರಿಂದ ಪತ್ರಿಕೋದ್ಯಮದಲ್ಲಿದ್ದಾರೆ. ಪತ್ರಿಕೋದ್ಯಮ ಸೇವೆಗಾಗಿ ಅನೇಕ ಪ್ರಶಸ್ತಿಗಳು ಬಂದಿವೆ.

ವಿಜಯಲಕ್ಷ್ಮಿ ಸಿಂಗ್‌:

ಬೆಂಗಳೂರಿನವರಾದ ವಿಜಯಲಕ್ಷ್ಮೀ ಸಿಂಗ್‌ 48 ವರ್ಷಗಳಿಂದ ನಟಿಯಾಗಿ ಸೇವೆ ಸಲ್ಲಿಸುತ್ತಿದ್ದು, ಸುಮಾರು 60 ಚಿತ್ರಗಳಲ್ಲಿ ನಟಿಸಿದ್ದಾರೆ. ಧರಣಿಮಂಡಲ ಮಧ್ಯದೊಳಗೆ, ಪಿತಾಮಹ, ವೀರ ಪರಂಪರೆ, ರಾಜಕುಮಾರ, ಬೆಂಕಿಯಲ್ಲಿ ಅರಳಿದ ಹೂವು ಸೇರಿ ಹಲವು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸುಮಾರು 25 ಚಿತ್ರಗಳಲ್ಲಿ ನಿರ್ಮಿಸಿದ್ದಾರೆ. ಅಲ್ಲದೆ ಈ ಬಂಧನ, ಮಳೆ ಬರಲಿ ಮಂಜೂ ಇರಲಿ, ವಾರೆವ್ಹಾ ಇತ್ಯಾದಿ ಚಿತ್ರಗಳಿಗೆ ನಿರ್ದೇಶನ ಮಾಡಿದ್ದಾರೆ. ಮುಂಗಾರಿನ ಮಿಂಚು ಚಲನಚಿತ್ರಕ್ಕೆ ರಾಷ್ಟ್ರಪ್ರಶಸ್ತಿ, ಕುರಿಗಳು ಸಾರ್‌ ಕುರಿಗಳು ಚಲನಚಿತ್ರಕ್ಕೆ ರಾಜ್ಯಪ್ರಶಸ್ತಿ, ಕೋತಿಗಳು ಸಾರ್‌ ಕೋತಿಗಳು ಚಲನಚಿತ್ರಕ್ಕೆ ರಾಜ್ಯಪ್ರಶಸ್ತಿ ಹಾಗೂ ಫಿಲಂ ಫೇರ್‌ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ.

PREV
Read more Articles on

Recommended Stories

ಕಸ ಸುರಿಯುವ ಹಬ್ಬದಿಂದ ಜನರಲ್ಲಿ ಜಾಗೃತಿ - ಕಂಡಲ್ಲಿ ಕಸ ಹಾಕುವವರ ಮನೆ ಮುಂದೆ ತ್ಯಾಜ್ಯ
ಟನಲ್ ರಸ್ತೆ, ಎ ಖಾತೆ ಯೋಜನೆಗಳಿಗೆ ಕೇಂದ್ರ ಸಚಿವರ ಮೆಚ್ಚುಗೆ: ಡಿಕೆಶಿ