ಕನ್ನಡ ಪ್ರಭವಾರ್ತೆ, ಮಾಲೂರು
ಅವರು ಕಸಾಪ, ಚೈತನ್ಯ ಕಲಾ ನಿಕೇತನ ಹಾಗೂ ಚುಟುಕು ಸಾಹಿತ್ಯ ಪರಿಷತ್ ಸಂಯೋಗದಲ್ಲಿ ನಗರದ ಕಸಾಪ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕಾವ್ಯ ದಿನಾಚರಣೆ ಹಾಗೂ ಭಾವೈಕ್ಯತಾ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಓದು ಬರಹದಿಂದ ವಿಮುಖಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಕಾವ್ಯ ಹಾಗೂ ಸಾಹಿತ್ಯ ರಚನೆಯನ್ನು ಪ್ರೇರೇಸುವಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯತ್ತಿರಬೇಕು. ಈ ನಿಟ್ಟಿನಲ್ಲಿ ಚೈತನ್ಯ ಕಲಾನಿಕೇತನ ಸೇರಿದಂತೆ ಮಾಲೂರಿನ ಸಾಹಿತ್ಯ ಸಂಘಗಳು ನಿರಂತರ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಸಾಹಿತ್ಯ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು.ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕವಿ ಸಿ.ಲಕ್ಷ್ಮಿನಾರಾಯಣ್ ಮಾತನಾಡಿ, ವಿಶ್ವ ಕಾವ್ಯ ಪರಂಪರೆಗೆ ಬೃಹತ್ತಾದ ಇತಿಹಾಸ ಇದೆ. ಪಾಶ್ಚಾತ್ಯ ಬರಹಗಾರರ, ಭಾರತೀಯ ಸಾಹಿತಿಗಳ ಸಾಹಿತ್ಯ ಕೊಡುಗೆ ಅಪಾರವಾದದ್ದು. ಕಾವ್ಯ ವರ್ತಮಾನ ಸನ್ನಿವೇಶಗಳ ಕನ್ನಡಿಯಾಗಿದ್ದು, ಭವಿಷ್ಯದ ಸಾಮಾಜಿಕ ಬದಲಾವಣೆಯ ಸ್ಥಿತಿಯ ರೂಪಕಗಳಾಗಿವೆ ಎಂದು ಹೇಳಿದರು.
ಕಸಾಪದ ಮಾಜಿ ಗೌರವ ಕಾರ್ಯದರ್ಶಿ ಎ.ಅಶ್ವಥ ರೆಡ್ಡಿ ಮಾತನಾಡಿದರು. ಚೈತನ್ಯ ಕಲಾನಿಕೇತನ ಸಂಸ್ಥೆ ಅಧ್ಯಕ್ಷ ಜಯಮಂಗಲ ಚಂದ್ರಶೇಖರ್ ಪ್ರಸ್ತಾವಿಕ ಮಾತುಗಳನ್ನಾಡಿದರು.ಇದೇ ಸಂದರ್ಭದಲ್ಲಿ ಬಾಪೂಜಿ ಬಿ.ಎಡ್.ಕಾಲೇಜಿನ ಪ್ರಾಂಶುಪಾಲ ಡಾ.ಮುನಿನಾರಾಯಣಪ್ಪ ಅವರನ್ನು ಸನ್ಮಾನಿಸಲಾಯಿತು. ಭಾವೈಕ್ಯತಾ ಕವಿಗೋಷ್ಠಿಯಲ್ಲಿ ಕವಿಗಳಾದ ಮಾಸ್ತಿ ಕೃಷ್ಣಪ್ಪ, ಡಾ.ನಾ.ಮುನಿರಾಜು, ಮಾ.ಚಿ. ನಾಗರಾಜು, ರೋಣೋರು ವೆಂಕಟೇಶ್, ನೋ.ಮು.ಕೃಷ್ಣಪ್ಪ, ದೊಡ್ಡಿ ಪ್ರವೀಣ್, ವೀಣಾ, ಪಿ.ಎಂ. ಕೃಷ್ಣಪ್ಪ, ಗುಲ್ಜಾರ್ ಇನ್ನಿತರ ಕವಿಗಳು ಭಾಗವಹಿಸಿದ್ದರು.