ಸಾಹಿತ್ಯ ಸಮ್ಮೇಳನಗಳು ಕನ್ನಡದ ನುಡಿ ಜಾತ್ರೆಗಳಾಗಬೇಕು: ಡಾ.ಪಿ.ಎಚ್. ವಿಜಯಲಕ್ಷ್ಮಿ

KannadaprabhaNewsNetwork |  
Published : Oct 10, 2025, 01:00 AM IST
9 ಕೆಡಿಆರ್ 5ಕಡೂರು ತಾಲ್ಲೂಕಿನ ದೊಡ್ಡ ಪಟ್ಟಣಗೆರೆಯ ಕಟ್ಟೆ ಹೊಳೆಯಮ್ಮ ಜಾತ್ರ ಮೈದಾನದಲ್ಲಿ ಅ.12ರಂದು ನಡೆಯುವ 7ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಮ್ಮೇಳನ ಅಧ್ಯಕ್ಷೆ ವಿದ್ವಾಂಸರಾದ ಡಾ.ಪಿ.ಹೆಚ್ .ವಿಜಯಲಕ್ಷ್ಮಿ  ಯವರನ್ನು ಗುರುವಾರ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಸ್ವಗೃಹಕ್ಕೆ ಭೇಟಿ ನೀಡಿ ಆಹ್ವಾನಿಸಿದರು. ಕಸಾಪ ತಾಲ್ಲೂಕು ಅಧ್ಯಕ್ಷ ಚಿಕ್ಕನಲ್ಲೂರು ಪರಮೇಶ್ ಮತ್ತಿತರಿದ್ದರು. | Kannada Prabha

ಸಾರಾಂಶ

ಕಡೂರು, ಸಾಹಿತ್ಯ ಸಮ್ಮೇಳನಗಳು ಕನ್ನಡದ ನುಡಿ ಜಾತ್ರೆಗಳಾಗಬೇಕು. ಆಗ ಮಾತ್ರ ಅವುಗಳ ಮೇಲೆ ಒಲವು ಬೆಳೆಯಲು ಸಾಧ್ಯ ಎಂದು 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ವಿದುಷಿ ಡಾ. ಪಿ.ಎಚ್ ವಿಜಯಲಕ್ಷ್ಮಿ ತಿಳಿಸಿದರು

ಸಮ್ಮೇಳನದ ಆಹ್ವಾನ ಸ್ವೀಕರಿಸಿ ಅಭಿಮತ । ಜಿ ಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್

ಕನ್ನಡಪ್ರಭ ವಾರ್ತೆ,ಕಡೂರು

ಸಾಹಿತ್ಯ ಸಮ್ಮೇಳನಗಳು ಕನ್ನಡದ ನುಡಿ ಜಾತ್ರೆಗಳಾಗಬೇಕು. ಆಗ ಮಾತ್ರ ಅವುಗಳ ಮೇಲೆ ಒಲವು ಬೆಳೆಯಲು ಸಾಧ್ಯ ಎಂದು 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ವಿದುಷಿ ಡಾ. ಪಿ.ಎಚ್ ವಿಜಯಲಕ್ಷ್ಮಿ ತಿಳಿಸಿದರು.ಪಟ್ಟಣದ ಸ್ವಗೃಹದಲ್ಲಿ ಸಮ್ಮೇಳನದ ಆಹ್ವಾನ ಸ್ವೀಕರಿಸಿ ಮಾತನಾಡಿ, ನನಗೆ ಬೇರೆ ಕಡೆ ಇತರ ಪ್ರಶಸ್ತಿಗಳು ಲಭಿಸಿದರೂ ಇದು ನನ್ನ ತವರು ಮನೆ ಉಡುಗೊರೆ ಹಾಗಾಗಿ ಇದನ್ನು ಅತ್ಯಂತ ಪ್ರೀತಿಯಿಂದ ಆಸ್ತೆಯಿಂದ ಸ್ವೀಕರಿಸಿದ್ದೇನೆ. ತಾವೆಲ್ಲರೂ ಕೂಡಿ ಈ ಸಮ್ಮೇಳನವನ್ನು ಯಶಸ್ವಿಗೊಳಿಸಿ ಗೊಳಿಸಬೇಕಾಗಿ ಕೋರುತ್ತೇನೆ ಎಂದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದೊಡ್ಡ ಪಟ್ಟಣಗೆರೆಯ ಕಟ್ಟೆ ಹೊಳೆಯಮ್ಮ ಜಾತ್ರ ಮೈದಾನದಲ್ಲಿ ಅ.12ರಂದು ಏರ್ಪಡಿಸಿದ್ದು ಈ ಸಮ್ಮೇಳನಕ್ಕೆ ವಿದ್ವಾಂಸರಾದ ಡಾ.ವಿಜಯಲಕ್ಷ್ಮಿ ಅವರ ಆಯ್ಕೆ ಹೆಚ್ಚು ಮಹತ್ವ ತಂದು ಕೊಟ್ಟಿದೆ ಎಂದರು.ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಬಿ.ಹನುಮಂತಪ್ಪ ಮಾತನಾಡಿ, ನಮ್ಮ ಭಾಗದಲ್ಲಿ ಇದೇ ಪ್ರಥಮ ಬಾರಿಗೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಇದನ್ನು ಅತ್ಯಂತ ಯಶಸ್ವಿಯಾಗಿ ನಮ್ಮ ಭಾಗದ ಎಲ್ಲಾ ಗ್ರಾಮಸ್ಥರು ಕೂಡಿ ಯಶಸ್ವಿ ಗೊಳಿಸುತ್ತೇವೆ ಎಂದರು.ತಾಲೂಕು ಕಸಾಪ ಅಧ್ಯಕ್ಷ ಚಿಕ್ಕನಲ್ಲೂರು ಪರಮೇಶ್ ಮಾತನಾಡಿ, ನಮ್ಮೇಳನವನ್ನು ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ಹಾಗೂ ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಲಿದ್ದಾರೆ. ಸಮ್ಮೇಳನದಲ್ಲಿ ಎರಡು ಗೋಷ್ಠಿಗಳನ್ನು ಆಯೋಜಿಸಿದ್ದು ಅದರಲ್ಲಿ ಪ್ರಮುಖವಾಗಿ ಅನ್ನದಾತರ ಅಳಲು , ಕೃಷಿ ಗೋಷ್ಠಿಯಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ನಾರಾಯಣಪುರ ಮಾತನಾಡಲಿದ್ದಾರೆ.ವರ್ತಮಾನದಲ್ಲಿ ಮಹಿಳೆ ಸ್ತ್ರೀ ಅಂದು-ಇಂದು , ಮುಂದು ವಿಷಯ ಕುರಿತಂತೆ ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಅಜ್ಜಂಪುರ ಎಸ್.ಶೃತಿ ಪ್ರಬಂಧ ಮಂಡಿಸಲಿದ್ದಾರೆ. ಜಾನಪದ ಗೋಷ್ಠಿ ಉದ್ಘಾಟನೆಯನ್ನು ರಾಜ್ಯ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಜಾನಪದ ಬಾಲಾಜಿ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.ಇದೇ ಸಂದರ್ಭದಲ್ಲಿ ಸಾಹಿತ್ಯ ಸಿರಿ ಪ್ರಶಸ್ತಿ ಮತ್ತು ತಾಲೂಕಿನ ವಿವಿಧ ಗಣ್ಯರ ಸಾಧನೆಯನ್ನು ಗುರತಿಸಿ ಕನ್ನಡ ಸಿರಿ ಪ್ರಶಸ್ತಿ ನೀಡಲಾಗುವುದು ಎಂದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕೋಶಾಧ್ಯಕ್ಷ ಬಿ.ಪ್ರಕಾಶ್, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಲತಾ ರಾಜಶೇಖರ್, ಯುವ ಘಟಕದ ಅಧ್ಯಕ್ಷ ಚೇತನ್ ಕುಮಾರ್, ಪುರಸಭಾ ಸದಸ್ಯ ಮರುಗುದ್ದಿ ಮನು, ವಕೀಲರ ಸಂಘದ ಅಧ್ಯಕ್ಷ ಟಿ.ಜಿ. ಗೋವಿಂದಸ್ವಾಮಿ, ಮಧು, ಪ್ರಿಯಾಂಕ, ರವಿಚಂದ್ರ, ಮಂಜುನಾಥ್, ವಸಂತಕುಮಾರ್, ಕಲ್ಲೇಶಪ್ಪ, ಸರಸ್ವತಿ ಪುರ ಮಂಜುನಾಥ್, ಕಲ್ಲೇಶಪ್ಪ, ಸಿಂಗಟಗೆರೆ ಸಿದ್ದಪ್ಪ, ಆರ್.ಜಿ.ಕೃಷ್ಣಸ್ವಾಮಿ ಸೇರಿದಂತೆ ಮತ್ತಿತರಿದ್ದರು.9 ಕೆಡಿಆರ್ 5ಕಡೂರು ತಾಲ್ಲೂಕಿನ ದೊಡ್ಡ ಪಟ್ಟಣಗೆರೆ ಕಟ್ಟೆ ಹೊಳೆಯಮ್ಮ ಜಾತ್ರ ಮೈದಾನದಲ್ಲಿ ಅ.12ರಂದು ನಡೆಯುವ 7ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಮ್ಮೇಳನ ಅಧ್ಯಕ್ಷೆ ಡಾ.ಪಿ.ಎಚ್ .ವಿಜಯಲಕ್ಷ್ಮಿ ಅವರನ್ನು ಗುರುವಾರ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಸ್ವಗೃಹಕ್ಕೆ ಭೇಟಿ ನೀಡಿ ಆಹ್ವಾನಿಸಿದರು. ಕಸಾಪ ತಾಲೂಕು ಅಧ್ಯಕ್ಷ ಚಿಕ್ಕನಲ್ಲೂರು ಪರಮೇಶ್ ಮತ್ತಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಳಸಾ-ಬಂಡೂರಿ: ಪಕ್ಷಭೇದ ಮರೆತು ಒಗ್ಗಟ್ಟು ಪ್ರದರ್ಶಿಸಲಿ: ಸಿ.ಸಿ. ಪಾಟೀಲ
ಉತ್ತಮ ಪ್ರತಿಭೆ ಗುರುತಿಸಲು ಕಲಾ ಪ್ರತಿಭೋತ್ಸವ ಕಾರ್ಯಕ್ರಮ ಸಹಕಾರಿ