ಕನಕ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆ । ಹೂವಿನ ವ್ಯಾಪಾರಿಗಳು ಸ್ಥಳಾಂತರ
ಕನ್ನಡಪ್ರಭ ವಾರ್ತೆ, ಕಡೂರುಬೆಳೆಯುತ್ತಿರುವ ಪಟ್ಟಣಕ್ಕೆ ಸ್ವಚ್ಛತೆಯೇ ಸವಾಲಾಗಿದ್ದು ರಸ್ತೆ ಮೇಲೆ ಮತ್ತು ಬದಿಯಲ್ಲಿ ಎಲ್ಲೆಂದರಲ್ಲಿ ತಲೆ ಎತ್ತಿರುವ ಗೂಡಂಗಡಿ, ಪಾನೀಪುರಿ, ಟೀ ಸ್ಟಾಲ್ ಗಳನ್ನು ತೆರವುಗೊಳಿಸಲು ಪುರಸಭೆ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಪುರಸಭೆ ಅಧ್ಯಕ್ಷ ಭಂಡಾರಿಶ್ರೀನಿವಾಸ್ ತಿಳಿಸಿದರು.
ಪುರಸಭೆ ಕನಕ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಪಟ್ಟಣದ ನ್ಯಾಯಾಲಯದ ಮುಂಭಾಗದ ರಸ್ತೆ, ಬಸ್ ನಿಲ್ದಾಣದಿಂದ ಪುರಸಭೆಗೆ ತೆರಳುವ ರಸ್ತೆ, ಕದಂಬ ವೃತ್ತ, ಗಣಪತಿ ಪೆಂಡಾಲ್ ಮುಂದೆ ಗೂಡಂಗಡಿ, ಪಾನೀಪುರಿ, ಟೀ ಸ್ಟಾಲ್ ಗಳು ರಸ್ತೆಯ ಮೇಲೆ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿರುವುದರಿಂದ ವಾಹನ ಸಂಚಾರ ಹಾಗೂ ಸ್ವಚ್ಛತೆಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪುರಸಭೆಗೆ ಅನೇಕ ದೂರುಗಳು ಬಂದ ಕಾರಣ ಆಯ್ದ ಭಾಗಗಳಲ್ಲಿ ಗೂಡಂಗಡಿಗಳನ್ನು ತೆರವುಗೊಳಿಸಲು ಅಧ್ಯಕ್ಷರು ಸದಸ್ಯರ ಒಪ್ಪಿಗೆ ಪಡೆದರು.ಸಂಚಾರ ವ್ಯವಸ್ಥೆಗೆ ಪುರಸಭೆ ಆಡಳಿತ ಕೈಜೋಡಿಸಬೇಕೆಂದು ಕಡೂರು ಪೊಲೀಸರು ಮನವಿ ಮಾಡಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಹ ಸಂಚಾರ ವ್ಯವಸ್ಥೆಗೆ ಅನುವು ಮಾಡಿಕೊಡಲು ಸೂಚಿಸಿರುವುದರಿಂದ ಗೂಡಂಗಡಿಗಳ ತೆರವು ಕಾರ್ಯ ಶೀಘ್ರ ನಡೆಯಲಿದೆ ಎಂದರು.ಪಟ್ಟಣದ ಕಲ್ಲೇಶ್ವರ ಟಿವಿ ಸೆಂಟರ್ ಮುಂಭಾಗ ಹೂವಿನ ವ್ಯಾಪಾರ ಮಾಡುವ ವ್ಯಾಪಾರಿಗಳು ರಸ್ತೆಯ ಮೇಲೆ ಬೆಳಗ್ಗೆ ಮತ್ತು ಸಂಜೆ 4 ಗಂಟೆ ನಂತರ ವ್ಯಾಪಾರದಲ್ಲಿ ತೊಡಗಿಕೊಳ್ಳುವುದರಿಂದ ಅತಿ ಹೆಚ್ಚಿನ ಸಂಚಾರ ಸಮಸ್ಯೆಯಾಗುತ್ತಿದೆ. ದ್ವಿಚಕ್ರ ವಾಹನ ಓಡಾಡಲು ಕಷ್ಟವಾಗುತ್ತಿದ್ದು ಪದೇ ಪದೇ ಸಂಚಾರ ಅಡಚಣೆಯಾಗುತ್ತಿದೆ. ಇಂದಿರಾ ಕ್ಯಾಂಟೀನ್ ಮುಂಭಾಗ ದಲ್ಲಿ ಹೂವಿನ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ರೈತರು ಮತ್ತು ಹೂವಿನ ವ್ಯಾಪಾರಿಗಳು ಇಂದಿರಾ ಕ್ಯಾಂಟಿನ್ ಮುಂಭಾಗ ನಿತ್ಯ ವ್ಯಾಪಾರ ಮಾಡಲು ಅವಕಾಶವನ್ನು ಪುರಸಭೆ ಮಾಡಲಿದೆ ಹೂವಿನ ವ್ಯಾಪಾರಿಗಳು ಸಹಕಾರ ನೀಡಬೇಕು ಎಂದರು.ಸದಸ್ಯೆ ಸುಧಾ ಉಮೇಶ್ ಮಾತನಾಡಿ, ಪ್ರೇಮಜ್ಯೋತಿ ಶಾಲೆ ಪಕ್ಕದಲ್ಲಿ ಚರಂಡಿ ನೀರು ಹರಿದು ಸಮಸ್ಯೆಯಾಗುತ್ತಿದೆ ರಾಜ ಕಾಲುವೆ ಮುಚ್ಚಿ ನೀರುಹರಿಯದಂತೆ ಮಾಡಿದ್ದಾರೆ ಎಷ್ಟು ಬಾರಿ ತಿಳಿಸಿದರು ಪ್ರಯೋಜನವಾಗುತ್ತಿಲ್ಲ ಎಂದು ದೂರಿದರು. ಆರೋಗ್ಯ ನಿರೀಕ್ಷಕ ಶ್ರೀನಿವಾಸ್, ಯಾವುದೇ ರಾಜಕಾಲುವೆಗೆ ಚರಂಡಿ ನೀರು ಹರಿಸುವಂತಿಲ್ಲ ಅದು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುತ್ತದೆ ಎಂದರು. ಅಧ್ಯಕ್ಷರು ಮಧ್ಯೆ ಪ್ರವೇಶಿಸಿ ಈ ಸಮಸ್ಯೆ ಬಗೆಹರಿಸಲು ಬದಲಾವಣೆ ಏನು ಮಾಡ ಬಹುದು ಎಂಬ ಪ್ರಶ್ನೆಗೆ ಶ್ರೀನಿವಾಸ್ ಉತ್ತರಿಸಿ ಹೊಸ ಚರಂಡಿ ನಿರ್ಮಿಸಿ ಕೊಳಚೆ ನೀರು ಹರಿಯಲು ಬಿಡಬೇಕು ಎಂದರು ಕೂಡಲೆ ಎಸ್ಟಿಮೇಟ್ ತಯಾರಿಸಿ ಚರಂಡಿ ಮಾಡಿ ಎಂದರು.ಸದಸ್ಯೆ ಹಾಲಮ್ಮ ವೀರಭದ್ರೇಶ್ವರ ದೇವಾಲಯದಿಂದ ಸಿದ್ದನಾಯ್ಕಣ್ಣ ಅವರ ಮನೆವರೆವಿನ ರಸ್ತೆಗೆ ಕನಿಷ್ಠ ಮಣ್ಣನ್ನಾದರು ಹಾಕಿಸಿ ಎಂದು ಮನವಿ ಮಾಡಿದರು.ಉಪಾಧ್ಯಕ್ಷೆ ಮಂಜುಳಾ ಚಂದ್ರು, ಸದಸ್ಯರಾದ ಸೋಮಣ್ಣ, ಮರುಗುದ್ದಿ ಮನು,ಯತೀಶ್, ವಿಜಯ ಚಿನ್ನರಾಜ್, ಗೋವಿಂದ ರಾಜ್, ಲತಾ,ಜ್ಯೋತಿ, ಹಾಲಮ್ಮ, ಪದ್ಮ, ಸುಧಾ, ವಿಜಯಲಕ್ಷ್ಮಿ, ಪುಷ್ಪಾಲತಾ, ಕಮಲ, ಶ್ರೀಕಾಂತ್, ಇಕ್ಬಾಲ್, ಯಾಸೀನ್, ಮೋಹನ್ಕುಮಾರ್, ಈರಳ್ಳಿ ರಮೇಶ್ ಮತ್ತು ಮುಖ್ಯಾಧಿಕಾರಿ ಕೆ.ಎಸ್. ಮಂಜುನಾಥ್,ಇಂಜಿನಿಯರ್ ಶ್ರೇಯಸ್, ತಿಮ್ಮಯ್ಯ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.9ಕೆಡಿಆರ್1ಕಡೂರು ಪುರಸಭೆ ಕನಕ ಸಭಾಂಗಣದಲ್ಲಿ ಗುರುವಾರ ಅಧ್ಯಕ್ಷ ಭಂಡಾರಿಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಉಪಾಧ್ಯಕ್ಷ ಮಂಜುಳಾಚಂದ್ರು,ಮುಖ್ಯಾಧಿಕಾರಿ ಕೆ.ಎಸ್.ಮಂಜುನಾಥ್ ಇದ್ದರು.