ಬದುಕು ಬದಲಿಸುವ ಸಾಹಿತ್ಯಿಕ ಓದು- ಪ್ರಮೋದ ನಾಯ್ಕ

KannadaprabhaNewsNetwork |  
Published : Jun 08, 2025, 01:47 AM IST
ಫೋಟೋ: ೭ಕೆಎಂಟಿ_ಜೆಯುಎನ್_ಕೆಪಿ೨ : ಮಿರ್ಜಾನದಲ್ಲಿ ಶಿಕ್ಷಕ ರಾಜು ನಾಯ್ಕ ವಿರಚಿತ ಕೃತಿಗಳನ್ನು ಗಣ್ಯರು ಬಿಡುಗಡೆಗೊಳಿಸಿದರು. ರೋಹಿದಾಸ ನಾಯಕ, ಪ್ರಮೋದ ನಾಯ್ಕ, ಪಿ.ಆರ್.ನಾಯ್ಕ, ಕೃಷ್ಣ ಮಾಲಿಗದ್ದೆ, ಎನ್.ಆರ್.ಗಜು ಇತರರು ಇದ್ದರು.  | Kannada Prabha

ಸಾರಾಂಶ

ಹಲವು ಪ್ರತಿಭೆಗಳಿಂದ ತುಂಬಿದ ಕುಮಟಾ ತಾಲೂಕು ಸಾಹಿತ್ಯ ಕ್ಷೇತ್ರದಲ್ಲೂ ಶ್ರೀಮಂತವಾಗಿದೆ.

ಕುಮಟಾ: ಹಲವು ಪ್ರತಿಭೆಗಳಿಂದ ತುಂಬಿದ ಕುಮಟಾ ತಾಲೂಕು ಸಾಹಿತ್ಯ ಕ್ಷೇತ್ರದಲ್ಲೂ ಶ್ರೀಮಂತವಾಗಿದೆ. ವಿದ್ಯಾರ್ಥಿ ಜೀವನದಲ್ಲಿನ ಸಾಹಿತ್ಯಿಕ ಓದು ಅವರ ಬದುಕನ್ನೇ ಬದಲಾಯಿಸಲು ಸಾಧ್ಯ ಎಂದು ಕಸಾಪ ತಾಲೂಕಾಧ್ಯಕ್ಷ ಪ್ರಮೋದ ನಾಯ್ಕ ಹೇಳಿದರು.ಮಿರ್ಜಾನದ ಜನತಾ ವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಆಶ್ರಯದಲ್ಲಿ ಸ್ಥಳೀಯ ರಾಜು ನಾಯ್ಕ ವಿರಚಿತ ''''''''ಹೊಗೆ ಮತ್ತು ಇತರ ಕಥೆಗಳು'''''''', ''''''''ಚುಟುಕು ಮತ್ತು ಕವಿತೆಗಳು'''''''' ಎಂಬ ಎರಡು ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೃತಿ ಬಿಡುಗಡೆಗೊಳಿಸಿದ ಕಸಾಪ ಮಾಜಿ ಜಿಲ್ಲಾಧ್ಯಕ್ಷ ರೋಹಿದಾಸ ನಾಯಕ ಮಾತನಾಡಿ, ಶಿಕ್ಷಕ ರಾಜು ನಾಯ್ಕ ಕಥೆ, ಕವನ, ಚುಟುಕುಗಳನ್ನು ರಚಿಸುವ ಮೂಲಕ ಸಾಹಿತಿಯಾಗಿಯೂ ಹೊರ ಹೊಮ್ಮುತ್ತಿದ್ದಾರೆ. ಶಿಕ್ಷಕನಾಗಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿಯನ್ನು ಮೂಡಿಸುತ್ತಿದ್ದಾರೆ ಎಂದರು.

ಮುಖ್ಯ ಅತಿಥಿ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್.ನಾಯ್ಕ ಮಾತನಾಡಿ, ಸುತ್ತಲಿನ ಪರಿಸರದ ವಾಸ್ತವಿಕ ಚಿತ್ರಣಗಳನ್ನು ಕೊಟ್ಟಿಕೊಡುವಲ್ಲಿ ಕಥೆಯ ವಾಸ್ತವಿಕತೆ ಅಡಗಿದೆ. ರಾಜು ನಾಯ್ಕರವರ ಕ್ರಿಯಾಶೀಲತೆ ಹೊಸ ತಲೆಮಾರಿನ ಜನರಿಗೆ ಮಾದರಿಯಾಗಿದೆ. ಮತ್ತಷ್ಟು ಕೃತಿಗಳು ಅವರಿಂದ ಹೊರ ಬರಲಿ ಎಂದು ಹಾರೈಸಿದರು.

ಕಸಾಪ ಮಾಜಿ ತಾಲೂಕಾಧ್ಯಕ್ಷ ಎನ್.ಆರ್.ಗಜು, ಗೋಕರ್ಣ ಅರ್ಬನ್ ಬ್ಯಾಂಕ್ ನಿವೃತ್ತ ಸಹಾಯಕ ವ್ಯವಸ್ಥಾಪಕ ಕೃಷ್ಣ ಮಾಲಿಗದ್ದೆ, ಮುಖ್ಯಶಿಕ್ಷಕಿ ಉಮಾ ಹೆಗಡೆ, ಸ್ಕೌಟ್ ಗೈಡ್ಸ್ ಮಾರ್ಗದರ್ಶಕ ವಿಷ್ಣು ಹೆಬ್ಬಾರ, ಕೃತಿಕಾರ ರಾಜು ನಾಯ್ಕ ಮಾತನಾಡಿದರು.

ವೇದಿಕೆಯಲ್ಲಿ ಸಾಹಿತಿ ಸಾತು ಗೌಡ, ಎಸ್‌ಡಿಎಂಸಿ ಅಧ್ಯಕ್ಷ ವಿಶ್ವನಾಥ ಗುನಗ, ಜಿ.ಆರ್. ಮಡಿವಾಳ, ಸೌಮ್ಯ ಕೊಡಿಯಾ ಇನ್ನಿತರರು ಉಪಸ್ಥಿತರಿದ್ದರು.

ಶಿಕ್ಷಕಿ ಕಲ್ಪನಾ ನಾಯಕ ಹೊಗೆ ಮತ್ತು ಇತರ ಕಥೆಗಳು, ಶಿಕ್ಷಕ ವಿಜಯಕುಮಾರ ನಾಯ್ಕ ಚುಟುಕು ಮತ್ತು ಕವಿತೆಗಳು ಕೃತಿ ಪರಿಚಯಿಸಿದರು. ಶಿಕ್ಷಕರಾದ ವಿಲ್ಸನ್ ಡಿ. ಲಿಮಾ, ಗಜಾನನ ರಾಯ್ಕರ್, ಎನ್. ರಾಮು ನಿರ್ವಹಿಸಿದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ