ಕನ್ನಡಪ್ರಭ ವಾರ್ತೆ ಕೊಲ್ಹಾರ
ಎನ್‌ಟಿಪಿಸಿ ಕೂಡಗಿ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ವಿಶ್ವ ಪರಿಸರ ದಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಎನ್‌ಟಿಪಿಸಿ ಕಾರ್ಯನಿರ್ವಾಹಕ ನಿರ್ದೇಶಕ ಬಿದ್ಯಾನಂದ ಝಾ ಹಾಗೂ ಮಿಥಾಲಿ ಮಹಿಳಾ ಸಮಿತಿ ಅಧ್ಯಕ್ಷೆ ಅಂಜು ಝಾರವರು ಸಸಿ ನೆಟ್ಟು ಹಸಿರು ನಡಿಗೆಗೆ ಚಾಲನೆ ನೀಡಿದರು.
ನಂತರ ಬಿದ್ಯಾನಂದ ಝಾ ಮಾತನಾಡಿ, ಜಾಗತಿಕ ವಿಷಯದೊಂದಿಗೆ ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವುದು, ಪರಿಸರ ಜವಾಬ್ದಾರಿಯನ್ನು ಉತ್ತೇಜಿಸುವ ಮತ್ತು ನಿವಾಸಿಗಳು ಮತ್ತು ಮಧ್ಯಸ್ಥಗಾರರಲ್ಲಿ ಸುಸ್ಥಿರ ಅಭ್ಯಾಸಗಳನ್ನು ಪ್ರೋತ್ಸಾಹಿಸುವ ಗುರಿಯನ್ನು ವಿಶ್ವ ಪರಿಸರ ದಿನ ಹೊಂದಿದೆ. ಜಿಇಎಂ -2025 ಬಾಲಕಿಯರು ಸಕ್ರಿಯವಾಗಿ ಭಾಗವಹಿಸಿ ಘೋಷಣೆಗಳನ್ನು ಹೇಳುವ ಮೂಲಕ ವಿಶೇಷ ಮಹತ್ವವನ್ನು ಸಾರಿದ್ದಾರೆ. ಇದರಿಂದ ಪರಿಸರ ಸಂರಕ್ಷಣೆಯ ಬಗೆಗಿನ ಅವರ ಅರಿವು ಮತ್ತು ಬದ್ಧತೆಯನ್ನು ಎತ್ತಿ ತೋರಿಸುತ್ತದೆ ಎಂದರು.ಕಾರ್ಯಾಚರಣೆ ಮತ್ತು ನಿರ್ವಹಣೆ ಜಿಎಂ ಸಂತೋಷ ತಿವಾರಿ ಮಾತನಾಡಿ, ಪರಿಸರ ಪ್ರತಿಜ್ಞೆಯ ಸಂದೇಶವನ್ನು ಇಂಗ್ಲಿಷ್‌ನಲ್ಲಿ ಪುನರುಚ್ಚರಿಸಿ, ಸುಸ್ಥಿರ ಭವಿಷ್ಯಕ್ಕಾಗಿ ಸಾಮೂಹಿಕ ಪರಿಸರದ ಜವಾಬ್ದಾರಿಯ ಮಹತ್ವವನ್ನು ತಿಳಿಸಿದರು.
ಈ ವೇಳೆ ಎನ್‌ಟಿಪಿಸಿ ಜಿ.ಎಂ.ಅಲೋಕೇಶ್ ಬ್ಯಾನರ್ಜಿ, ಸಿಐಎಸ್ಎಫ್ ಸಿಬ್ಬಂದಿ, ಬಿಬಿಪಿಎಸ್‌ನ ಸಿಬ್ಬಂದಿ, 240 ಕ್ಕೂ ಹೆಚ್ಚು ಜಿಇಎಂ ಬಾಲಕಿಯರು ಸೇರಿದಂತೆ ನೌಕರರು ಹಾಗೂ ಕುಟುಂಬಸ್ಥರು ಭಾಗವಹಿಸಿದ್ದರು.