ಕನ್ನಡಪ್ರಭ ವಾರ್ತೆ ಮೈಸೂರು
ಕನ್ನಡಾಂಬೆ ರಕ್ಷಣಾ ವೇದಿಕೆಯು ಜೆಎಲ್‌ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿ,ಇಪ್ಪತ್ತನೇ ಶತಮಾನದಲ್ಲಿ ಎಲ್ಲ ಬರಹಗಳು ರಾಜಕಾರಣವನ್ನು ಹೊಂದೇ ಇರುತ್ತವೆ ಎಂಬ ಅಭಿಪ್ರಾಯ ಜನಜನಿತವಾದದ್ದು. ರಾಜಕಾರಣವನ್ನು ಒಳಗೊಳ್ಳದ ಬರಹವನ್ನು ನಾವು ಕಲ್ಪಿಸಿಕೊಳ್ಳಲು ವರ್ತಮಾನದಲ್ಲಿ ಸಾಧ್ಯವಾಗುವುದಿಲ್ಲ ಎಂದರು.
ಲೋಹಿಯಾ ಅವರು ಮೈಸೂರಿಗೆ ಬಂದಾಗ ಕುವೆಂಪು ಅವರನ್ನು ಭೇಟಿ ಮಾಡಿದ್ದರು. ಆಗ ನೀವು ರಾಜಕಾರಣದಲ್ಲಿ ಮಾಡುವುದನ್ನು ನಾನು ಸಾಹಿತ್ಯದ ಮೂಲಕ ಮಾಡುತ್ತಿದ್ದೇನೆ ಎಂದು ಹೇಳಿದ್ದರು ಎಂದು ಪ್ರೊ.ನಾಗಣ್ಣ ನೆನಪಿಸಿಕೊಂಡರು.ಒಂದು ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಾದರೆ ಭಾಷೆಯ ಉಳಿವಿಗೆ ಧಕ್ಕೆ ಬಂದಾಗಲೆಲ್ಲ ಅದನ್ನು ರಕ್ಷಿಸುವಂಥ ರಕ್ಷಣಾ ಪಡೆಯೂ ಬೇಕು. ಸಾಹಿತ್ಯ ರಚಿಸಿ, ಭಾಷೆಯ ಅಂತಶ್ಚೈತನ್ಯವನ್ನು ವೃದ್ಧಿಸುವಂಥ ಕವಿ- ಸಾಹಿತಿಗಳು ಬೇಕು. ಲೇಖಕರು ಹಾಗೂ ಹೋರಾಟಗಾರರು ಒಂದು ಬಾಷೆ ಮತ್ತು ಸಂಸ್ಕೃತಿಯ ಎರಡು ಕಣ್ಣುಗಳಿದ್ದಂತೆ. ಆದ್ದರಿಂದ ನಾವೆಲ್ಲರೂ ಕನ್ನಡದ ರಕ್ಷಣೆಗಾಗಿ ಧೀಕ್ಷೆ ತೊಡೋಣ ಹಾಗೂ ಹೋರಾಟಗಾರರ ಕೈಬಲಪಡಿಸೋಣ ಎಂದರು.
ಅಂಬೇಡ್ಕರ್ ಅವರಂಥ ವ್ಯಕ್ತಿಗಳು ತೀರಾ ಅಪರೂಪ. ನೊಂದವರ, ಬೆಂದವರ, ದಲಿತರ, ದಮನಿತರ ಆಶೋತ್ತರವಾಗಿ ಸಮಾನತೆ, ಪ್ರಜಾಪ್ರಭುತ್ವ, ಜಾತ್ಯತೀತತೆಯನ್ನು ಅವರು ಸಂವಿಧಾನದ ಮೂಲಕ ನೀಡಿದ್ದಾರೆ. ಹೀಗಾಗಿ ಅವರ ಸಮತೆ- ಮಮತೆಯ ತೇರನ್ನು ಮುಂದಕ್ಕೆ ಎಳೆಯಲು ಸಾದ್ಯವಾಗದಿದ್ದರೂ ಹಿಂದಕ್ಕೆ ಎಳೆಯುವ ಪ್ರಯತ್ನವನ್ನು ಯಾರೂ ಮಾಡಬಾರದು ಎಂದರು.
ಬಿಜೆಪಿ ಯುವ ಮುಖಂಡರಾದ ವಿ. ಕವೀಶ್ ಗೌಡ ಮಾತನಾಡಿ, ಎಲ್ಲರಿಗೂ ಸಮಾನ ಹಕ್ಕು ಮತ್ತು ಅವಕಾಶವನ್ನು ಕೊಟ್ಟವರು ಡಾ.ಬಿ.ಆರ್. ಅಂಬೇಡ್ಕರ್. ಸಂವಿಧಾನದಿಂದ ನಮಗೆ ಅನುಕೂಲವಾಗಿದ್ದರೂ ಅದರ ಆಶಯಗಳನ್ನು ಸಂಪೂರ್ಣವಾಗಿ ಜಾರಿ ಮಾಡುವಲ್ಲಿ ಸ್ವಲ್ಪ ಹಿಂದುಳಿದ್ದೇವೆ ಎಂದರು.
ಪ್ಯಾರಾ ಅಥ್ಲಿಟ್ ಭಾರತಿ ಅವರಿಗೆ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಿಗೆ ತೆರಳಲು, ತರಬೇತಿ ಹಾಗೂ ಶಿಕ್ಷಣ ಪಡೆಯಲು ತಮ್ಮ ವತಿಯಿಂದ ಎಲ್ಲ ರೀತಿಯ ಸಹಾಯ ಮಾಡುವುದಾಗಿ ಅವರು ಘೋಷಿಸಿದರು.
ಪ್ರಸ್ತುತ ಮಹಿಳೆಯರು ಭೂಮಿಯಿಂದ ಬಾಹ್ಯಾಕಾಶದವರೆಗೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಯಾವುದೇ ಪರೀಕ್ಷೆಯ ಫಲಿತಾಂಶ ಬಂದರೂ ಅವರದೇ ಮೇಲುಗೈ ಇರುತ್ತದೆ. ಇತ್ತೀಚೆಗೆ ಪ್ರಕಟವಾದ ಪಿಯುಸಿಯ ಮೂರು ವಿಭಾಗಗಳಲ್ಲೂ ಬಾಲಕಿಯರೇ ಮೊದಲ ಸ್ಥಾನ ಪಡೆದಿದ್ದಾರೆ ಎಂದರು.
ಅಂಬೇಡ್ಕರ್ ಗೀತೆಗಳನ್ನು ಉರುಗಲವಾಡಿ ರಾಮಣ್ಣ ಹಾಡಿದರು. ನಂದಿನಿ ಮಹೇಶ್ ನಿರೂಪಿಸಿದರು. ಕನ್ನಡಾಂಬೆ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಸಂತೋಷ್ ವಂದಿಸಿದರು. ಜಿಲ್ಲಾಧ್ಯಕ್ಷೆ ಆರ್. ಮಂಜುಳಾ, ಕನ್ನಡ ಅಭಿಮಾನಿ ಬಳಗದ ಕೃಷ್ಣಪ್ಪ, ಕರವೇ ಶ್ರೀನಿವಾಸ್, ರೈತ ಸಂಘದ ಕೃಷ್ಣೇಗೌಡ, ವಿವಿಧ ಸಂಘಟನೆಗಳ ಸೋಮೇಗೌಡ, ಮಹೇಶ್ ಕುಮಾರ್, ಶಿವಕುಮಾರ್, ಮುಖಂಡ ರಂಗಪ್ಪ ಮೊದಲಾದವರು ಇದ್ದರು. ಎಸ್. ಯಶಿಕಾ ಭರತನಾಟ್ಯ ಪ್ರದರ್ಶಿಸಿದರು.
ಸೆಸ್ಕ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೆ.ಕೆ. ಲಕ್ಷ್ಮೀಶ, ನೃತ್ಯ ಮತ್ತು ಸಂಗೀತ ವಿದುಷಿ ಡಾ.ಚೈತ್ರಾ ಬಿಳಿಗಿರಿ, ರಾಜ್ಯ ಮಟ್ಟದ ಪ್ಯಾರಾ ಅಥ್ಲೀಟ್ ಬಿ ಭಾರತಿ ಹಾಗೂ ಹಿನ್ಕಲ್ ಗ್ರಾಪಂ ಸದಸ್ಯೆ ನೇಹಾ ಅವರನ್ನು ಸನ್ಮಾನಿಸಲಾಯಿತು.
ಫೋಟೋ