ಕನ್ನಡಪ್ರಭ ವಾರ್ತೆ ಸಿರಿಗೆರೆ
ತಾಲೂಕಿನ ಭರಮಸಾಗರದಲ್ಲಿ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ಕನ್ನಡ ವಿಭಾಗ ಇವರ ಸಹಯೋಗದಲ್ಲಿ ಸೋಮವಾರ ನಡೆದ ‘ಮಕ್ಕಳ ಸಾಹಿತ್ಯದ ಮಜಲುಗಳು’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಲೆ ಮತ್ತು ಸಾಹಿತ್ಯ ಮನುಷ್ಯನ ಬದುಕಿನೊಂದಿಗೆ ಬೆರೆತು ಹೋಗಿರುವ ಕಾರಣದಿಂದಾಗಿ ವ್ಯಕ್ತಿಯ ಉಸಿರು ಇರುವವರೆಗೂ ಜೀವಂತವಾಗಿರುತ್ತವೆ. ಮಕ್ಕಳ ಸಾಹಿತ್ಯ, ಸಾಹಿತಿಗಳ ಕುಶಲತೆಗೆ ಹಿಡಿದ ಕೈಗನ್ನಡಿ. ಸಾಹಿತ್ಯಕ್ಕೆ ಸಾವಿಲ್ಲ ಮತ್ತು ಅದ್ಭುತವಾದ ಸಾಹಿತ್ಯ ರಚಿಸಿರುವ ಸಾಹಿತಿಗಳಿಗೂ ಸಾವಿಲ್ಲ ಎಂಬ ಮಾತು ಸಾರ್ವಕಾಲಿಕ ಸತ್ಯವಾಗಿದೆ. ತಂತ್ರಜ್ಞಾನದಲ್ಲಿ ಮನುಷ್ಯ ಎಷ್ಟೇ ಮುಂದುವರೆದರೂ ಪುಸ್ತಕಗಳು ನಮ್ಮಿಂದ ಕೊನೆಯಾಗಲು ಸಾಧ್ಯವಿಲ್ಲ ಎಂದು ಹಲವು ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳಿಗೆ ಅರ್ಥೈಸಿದರು.ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಯಶೋಧರ್ ಜಿ ಎನ್ ಅವರು, ಮಕ್ಕಳ ಸಂಸ್ಕಾರವನ್ನು ಶ್ರೇಷ್ಠವಾಗಿಸುವಲ್ಲಿ ಸಾಹಿತ್ಯ ಪ್ರಮುಖ ಪಾತ್ರ ವಹಿಸುತ್ತದೆ. ಮನೆಯೆ ಮೊದಲ ಪಾಠಶಾಲೆ ಜನನಿ ತಾನೆ ಮೊದಲ ಗುರುವು... ಹೀಗೆ ಪ್ರಾರಂಭವಾಗುವ ನಮ್ಮ ಸಂಸ್ಕೃತಿ ಒಳಗೊಂಡ ಸಾಹಿತ್ಯ ಹಿರಿಯರನ್ನು ಮಕ್ಕಳ ಸಾಹಿತ್ಯ ಸಾಹಿತ್ಯದ ಮೂಲ.
ಕನ್ನಡದ ಅನೇಕ ಕವಿಗಳು ಮಕ್ಕಳ ಪದ್ಯಗಳನ್ನು ರಚಿಸಿದ್ದಾರೆ. ಅವರಲ್ಲಿ ಪಂಜೆ ಮಂಗೇಶರಾಯರು, ರಾಷ್ಟ್ರಕವಿ ಗೋವಿಂದ ಪೈ, ಕುವೆಂಪು, ಶಿವರಾಮ ಕಾರಂತ, ಜಿ.ಪಿ.ರಾಜರತ್ನಂ, ನಾ ಡಿಸೋಜಾ, ನಾ ಕಸ್ತೂರಿ ಪ್ರಮುಖರಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಮಕ್ಕಳ ಸಾಹಿತ್ಯದ ಅನೇಕ ಕಥನಗಳು ಕಾರ್ಟೂನ್ ಪ್ರಪಂಚದಲ್ಲಿ ಮೊಬೈಲ್, ಕಂಪ್ಯೂಟರ್, ಟಿವಿ ಮಾಧ್ಯಮಗಳ ಮೂಲಕ ಮಕ್ಕಳ ಮನಸ್ಸನ್ನು ರಂಜಿಸುವುದರ ಜೊತೆಗೆ ಅನೇಕ ಆಸಕ್ತಿದಾಯಕ ವಿಷಯಗಳನ್ನು ಬಿತ್ತರಪಡಿಸುತ್ತಿವೆ ಆದರೆ ಮಕ್ಕಳ ಮುಗ್ಧ ಪ್ರಪಂಚವನ್ನು ಮತ್ತಷ್ಟು ವಿಶಾಲವಾಗಿಸುವಲ್ಲಿ ಅವು ಎಡವುತ್ತಿವೆ ಎಂದು ತಿಳಿಸಿದರು.
ಭರಮಸಾಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ.ಶಶಿಕಲಾ. ಎಸ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎನ್‌ಎಸ್ಎಸ್ ಕಾರ್ಯಕ್ರಮಾಧಿಕಾರಿ ಪ್ರೊ.ಲೋಕೇಶ ನಾಯ್ಕ ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮ.ಸಾ.ಪ ಉಪಾಧ್ಯಕ್ಷ ಬಿ ವಿಜಯಕುಮಾರ್, ಸಂಘಟಕಿ ನಿರ್ಮಲ ಮಂಜುನಾಥ್, ವಿದ್ಯಾರ್ಥಿಗಳಾದ ನರೇಶ್ ಪ್ರಾರ್ಥಿಸಿದರು. ಕವನ, ಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ವಿಭಾಗ ಸಹಾಯಕ ಪ್ರಾಧ್ಯಾಪಕ ಪ್ರೊ. ಮಸೂದ್ ಅಹಮದ್, ಅಧ್ಯಾಪಕರಾದ ಸಂಗಮೇಶ್ವರ, ಸತ್ಯನಾರಾಯಣ, ಮಮತಾ, ಜಿಲ್ಲಾ, ಮಸಾಪ ಪದಾಧಿಕಾರಿಗಳು ಹಾಗೂ ಅಧ್ಯಾಪಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಮಸಾಪ ಪದಾಧಿಕಾರಿಗಳು ಉಪಸ್ಥಿತರಿದ್ದರು.