ಬದುಕಿನ ಅನುಭವವೇ ಸಾಹಿತ್ಯ: ಡಾ. ಶರಣಬಸಪ್ಪ ಕೋಲ್ಕಾರ

KannadaprabhaNewsNetwork |  
Published : Sep 29, 2024, 01:45 AM IST
28ುನೂ1 | Kannada Prabha

ಸಾರಾಂಶ

ಸುತ್ತಮುತ್ತಲಿನ ವಾತಾವರಣ ಮಾದರಿಯಾಗಿ ಕಾವ್ಯವಾಗುತ್ತದೆ. ಬುದ್ಧ, ಬಸವಣ್ಣ, ಅಂಬೇಡ್ಕರ್‌ ಅವರ ಸಹಬಾಳ್ವೆ, ಪ್ರೀತಿ, ಸಹಕಾರ ಆದರ್ಶವಾಗಬೇಕು.

ಬದುಕಿನ ಸಾಫಲ್ಯ ಬದುಕಿನ ಸಂದೇಶಗಳು ಕೃತಿ ಲೋಕಾರ್ಪಣೆ ಹಾಗೂ ಸಾಧಕರ ಸನ್ಮಾನ ಸಮಾರಂಭ

ಕನ್ನಡಪ್ರಭ ವಾರ್ತೆ ಗಂಗಾವತಿ

ಸಾಹಿತ್ಯ ರಚನೆಗೆ ಸಂಸ್ಕೃತಿ, ವಚನ ಸಾಹಿತ್ಯ, ದೊಡ್ಡ ಸಾಹಿತ್ಯ ಓದಬೇಕೆಂದಿಲ್ಲ. ಬದುಕಿನ ಅನುಭವವನ್ನು ಸಾಹಿತ್ಯವನ್ನಾಗಿಸಬಹುದು ಎಂದು ಸಾಹಿತಿ ಡಾ. ಶರಣಬಸಪ್ಪ ಕೋಲ್ಕಾರ ಹೇಳಿದರು.

ತಾಲೂಕಿನ ಢಣಾಪುರ ಗ್ರಾಮದ ಶ್ರೀ ಶರಣಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಬಸವ ಭಾರತಿ ಸಮುದಾಯ ಅಭಿವೃದ್ಧಿ ಸಮಿತಿ ಬೆಂಗಳೂರು ಆಯೋಜಿಸಿದ್ದ ಸಾಹಿತಿ ಬಿ. ವಿರುಪಣ್ಣ ಅವರ ಬದುಕಿನ ಸಾಫಲ್ಯ ಬದುಕಿನ ಸಂದೇಶಗಳು ಕೃತಿ ಲೋಕಾರ್ಪಣೆ ಹಾಗೂ ಸಾಧಕರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸುತ್ತಮುತ್ತಲಿನ ವಾತಾವರಣ ಮಾದರಿಯಾಗಿ ಕಾವ್ಯವಾಗುತ್ತದೆ. ಬುದ್ಧ, ಬಸವಣ್ಣ, ಅಂಬೇಡ್ಕರ್‌ ಅವರ ಸಹಬಾಳ್ವೆ, ಪ್ರೀತಿ, ಸಹಕಾರ ಆದರ್ಶವಾಗಬೇಕು. ವಿರುಪಣ್ಣನವರು ಪ್ರಾಮಾಣಿಕರು, ಬದುಕಿನ ಅನುಭವಗಳನ್ನು ಸಾಹಿತ್ಯವನ್ನಾಗಿಸಿ ಕೃತಿ ಮೂಲಕ ಕಟ್ಟಿಕೊಡುವ ಕೆಲಸ ಮಾಡಿದ್ದು, ಅವರ ಬದುಕು ಆದರ್ಶವಾಗಿದೆ ಎಂದರು.

ಹಿರಿಯ ಸಾಹಿತಿ ನಿಜಲಿಂಗಪ್ಪ ಮೆಣಸಗಿ ಕೃತಿ ಕುರಿತು ಮಾತನಾಡಿದರು.

ಅರಳಹಳ್ಳಿ ರೇವಣಸಿದ್ಧಯ್ಯ ತಾತ, ಢಣಾಪುರದ ವೇದಮೂರ್ತಿ ಗುಂಡಯ್ಯಸ್ವಾಮಿ ಸಾನಿಧ್ಯ ವಹಿಸಿದ್ದರು. ವಿವಿಧ ಕ್ಷೇತ್ರಗಳ ಸಾಧಕರಾದ ಕಾಳಾಚಾರಿ, ವಲಿಸಾಬ್, ಚಿದಾನಂದಪ್ಪ, ಬಾಬುಸಾಬ್, ಯಂಕಪ್ಪ ಮಾಸ್ತರ ಅವರನ್ನು ಸನ್ಮಾನಿಸಲಾಯಿತು.

ಗಂಗಾವತಿ ಪಶು ಸಂಗೋಪನಾ ಇಲಾಖೆ ನಿರ್ದೇಶಕ ವೈ. ಸೋಮಪ್ಪ, ನಾಟಕಕಾರ ಕೆ. ಪಂಪಣ್ಣ, ಕಾವ್ಯಲೋಕ ಅಧ್ಯಕ್ಷ ಎಂ.ಪರಶುರಾಮ, ತಾಪಂ ಮಾಜಿ ಸದಸ್ಯ ಬಿ. ಫಕೀರಪ್ಪ, ಗ್ರಾಮದ ಮುಖಂಡರಾದ ಟಿ. ವೀರಪ್ಪ, ಟಿ. ನಾಗಪ್ಪ, ಹೆ. ಅಮರೇಶಸ್ವಾಮಿ, ಸಾಹಿತಿ ಬಿ. ವಿರುಪಣ್ಣ ಪಾಲ್ಗೊಂಡಿದ್ದರು.

ಎಂ. ರಾಘವೇಂದ್ರ, ಎಸ್. ಬಸವರಾಜ್ ಹೇರೂರು, ಬಸವರಾಜ ಯತ್ನಟ್ಟಿ, ಭೀಮನಗೌಡ ಕೆಸರಟ್ಟಿ, ಸೋಮಶೇಖರ ಕಂಚಿ, ಮಹಮದ್‍ಮಿಯಾ ಮತ್ತಿತರರಿದ್ದರು. ಬಿ. ಅಮೃತ, ಬಿ. ಲಿಂಗರಾಜ, ಬಿ. ಪಲ್ಲವಿ ಸ್ವಾಗತಿಸಿ, ನಿರೂಪಿಸಿದರು.

PREV

Recommended Stories

ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ
ಮಾಧ್ಯಮ ಸಾಧಕರಿಗೆ ನ್ಯೂ ಇಂಡಿಯನ್‌ ಟೈಮ್ಸ್‌ ಪ್ರಶಸ್ತಿ