ಸಾಹಿತ್ಯ ಸಮಾಜದ ಕನ್ನಡಿ: ಎಸ್.ವಿ. ಸಂಕನೂರ

KannadaprabhaNewsNetwork |  
Published : Apr 12, 2026, 02:45 AM IST
ಕಾರ್ಯಕ್ರಮವನ್ನು ವಿಧಾನಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ಉದ್ಘಾಟಿಸಿದರು. | Kannada Prabha

ಸಾರಾಂಶ

ಗದಗ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತಿಪರ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ ಜಿಲ್ಲಾ ಘಟಕದ ಆಶ್ರಯದಲ್ಲಿ ಇತ್ತೀಚೆಗೆ ಜಿಲ್ಲಾ ಪ್ರಥಮ ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸಮಾವೇಶ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಗದಗ: ಸಾಹಿತ್ಯ, ಶಿಕ್ಷಣ ಮತ್ತು ಸಂಸ್ಕೃತಿ ಒಂದಕ್ಕೊಂದು ಬೆಸೆದುಕೊಂಡಿರುವ ಅವಿಭಾಜ್ಯ ಅಂಗಗಳಾಗಿವೆ. ಸಾಹಿತ್ಯ ಸಮಾಜದ ಕನ್ನಡಿಯಾಗಿದ್ದು, ಇತಿಹಾಸ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುತ್ತದೆ ಎಂದು ವಿಧಾನಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರ ತಿಳಿಸಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತಿಪರ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ ಜಿಲ್ಲಾ ಘಟಕದ ಆಶ್ರಯದಲ್ಲಿ ಇತ್ತೀಚೆಗೆ ಜಿಲ್ಲಾ ಪ್ರಥಮ ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸಮಾವೇಶ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂಘಟನಾ ಸಂಚಾಲಕ ಪಾಂಡು ಚವ್ಹಾಣ ಮಾತನಾಡಿ, ಬಾಬೂಜಿ ಎಂದೇ ಜನಪ್ರಿಯರಾಗಿದ್ದ ಬಾಬು ಜಗಜೀವನರಾಂ ಅವರ ಜಯಂತಿ ಹಾಗೂ ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳಿಗೆ ನುಡಿನಮನ ಅರ್ಪಿಸುವ ಪ್ರಯುಕ್ತ ಜಿಲ್ಲಾ ಪ್ರಥಮ ಸಾಹಿತ್ಯ ಸಾಂಸ್ಕೃತಿಕ ಶೈಕ್ಷಣಿಕ ಸಮ್ಮೇಳನ ಆಯೋಜಿಸಲಾಗಿದೆ ಎಂದರು.ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಆರ್.ಎಸ್. ಬುರಡಿ ಮಾತನಾಡಿ, ಹೆಣ್ಣು ಅಬಲೆಯಲ್ಲ, ಸಬಲೆ ಇತಿಹಾಸದುದ್ದಕ್ಕೂ ಮಹಿಳೆಯರು ತಮ್ಮ ದೃಢಸಂಕಲ್ಪ ಮತ್ತು ಶಕ್ತಿಯಿಂದ ಸಮಾಜವನ್ನು ರೂಪಿಸುತ್ತಾ ಬಂದಿದ್ದಾರೆ ಎಂದರು.

ಭಾವಬಿಂದು ಕಾವ್ಯ ಸಿಂಧು ಕವನ ಸಂಕಲನದ ಲೋಕಾರ್ಪಣೆಯನ್ನು ಪರಿಷತ್ ಗೌರವ ಮಾರ್ಗದರ್ಶಕ ಶಾಂತಕುಮಾರ ಭಜಂತ್ರಿ ನೆರವೇರಿಸಿದರು. ಉಪನ್ಯಾಸಕರಾಗಿ ಜಿ.ಎಫ್. ಕಾಯಕದ ಮಾತನಾಡಿದರು. ರಾಜ್ಯ ಮಟ್ಟದ ಮಹಿಳಾ ಸಾಧಕ ರತ್ನ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳಾ ಸಾಧಕಿಯರಿಗೆ ಪ್ರದಾನ ಮಾಡಲಾಯಿತು.

ಅಧ್ಯಕ್ಷತೆಯನ್ನು ಪರಿಷತ್ ಜಿಲ್ಲಾಧ್ಯಕ್ಷೆ ರತ್ನಾ ಬದಿ ವಹಿಸಿದ್ದರು. ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯ ಬಸವರಾಜ ಕಡೆಮನಿ, ಪ್ರೊ. ನೀಲು ರಾಠೋಡ, ಡಿ.ಎಂ. ಮ್ಯಾಗೇರಿ, ಸುಜಾತಾ ಪಾಟೀಲ, ಗೀತಾ ಸುಂಕದ, ಸುನೀಲ್ ಸಾತಿ, ಹೊನ್ನಪ್ಪ ಪೂಜಾರ, ಸುನೀಲ ಲಮಾಣಿ, ಡಾ. ರಶ್ಮಿ ಅಂಗಡಿ, ಕಲಾಶ್ರೀ ಹಾದಿಮನಿ, ನೀಲಮ್ಮ ಅಂಗಡಿ, ಮಂಗಳಗೌರಿ ಹಿರೇಮಠ, ಆನಂದಕುಮಾರ್ ಟಿ. ಮೇಗಡಿ, ಎಂ.ಎಂ. ನಿಂಬನಾಯ್ಕರ, ಜ್ಯೋತಿ ಜವಳಿ, ರೇಣುಕಾ ಜಗಂಡಭಾವಿ, ರತ್ನವ್ವ ಬಬಲಿ, ಯರಾದ ನಂದಾ ಹಣಬರಟ್ಟಿ, ಶರಣಮ್ಮ ಕವಲೂರು, ಹುಲಿಗೆಮ್ಮ ಜೋಗೇರ, ರಾಣಿ ಚೆಂದಾವರಿ, ಜಿ.ಎಫ್. ಕಾಯಕದ, ಜಯದೇವಿ ಕವಲೂರು, ಪಾರ್ವತಿ ಸಜ್ಜನ್, ಪುಷ್ಪಾ ಬಿಸನಳ್ಳಿ, ಬಸವರಾಜ ಪೂಜಾರ, ಎಚ್.ಎಂ. ದೇವಗಿರಿ, ಶಂಕರ ಲಮಾಣಿ, ಕೆ.ಸಿ. ನಬಾಪುರ, ವೆಂಕಟೇಶ್ ರಾಠೋಡ ಇದ್ದರು. ಎ.ವಿ. ಪ್ರಭು ಕಾರ್ಯಕ್ರಮ ನಿರೂಪಿಸಿದರು. ಪದ್ಮಾ ಕಬಾಡಿ ಪ್ರಾರ್ಥಿಸಿದರು. ವಿಶ್ವನಾಥ್ ಬೇಂದ್ರೆ ಸ್ವಾಗತಿಸಿದರು. ಮಂಗಳಗೌರಿ ಹಿರೇಮಠ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುಗಾದಿ ಹೊಸ ಚಿಂತನೆ, ಹೊಸ ಸಂಕಲ್ಪಗಳ ಆರಂಭ: ಡಾ. ಚಂದ್ರಕಾಂತ ಭಟ್
ಸಂಪಾಜೆ ಗ್ರಾಮ ಪಂಚಾಯಿತಿಗೆ 3ನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ