ಕನ್ನಡಪ್ರಭ ವಾರ್ತೆ ಇಂಡಿ
ಸಮಾಜಮುಖಿ ಕಾರ್ಯಗಳಿಂದ ವಿಶ್ವಮಾನವರಾಗಿ ಬದುಕಬೇಕು. ಎರಡು ವರ್ಷದಲ್ಲಿಯೇ ಈ ಶಿಕ್ಷಣ ಸಂಸ್ಥೆ ಮೂಲಭೂತ ಸೌಕರ್ಯಗಳನ್ನು ಒಳಗೊಂಡು ನೂತನ ಕೋಣೆಗಳನ್ನು ನಿರ್ಮಿಸಿ ಗ್ರಾಮೀಣ ಪ್ರದೇಶದಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದರು.
ಸಂತರು, ಶರಣರು, ಸೂಫಿಗಳು ಜನರ ಕಲ್ಯಾಣಕ್ಕಾಗಿ ಬದುಕಿದವರು. ಶೈಕ್ಷಣಿಕ ಬೆಳವಣಿಗೆಯಲ್ಲಿ ಮಠಮಾನ್ಯಗಳ ಕೊಡುಗೆ ಅಪಾರವಾಗಿದೆ. ಗಡಿಭಾಗದ ಗ್ರಾಮೀಣ ಪ್ರದೇಶದಲ್ಲಿ ದರ್ಗಾದ ಜೊತೆ ಶಿಕ್ಷಣ ಸಂಸ್ಥೆಯನ್ನು ಹುಟ್ಟುಹಾಕಿ ಗ್ರಾಮೀಣ ಮಕ್ಕಳಿಗೆ ಆಂಗ್ಲ ಮಾಧ್ಯಮ ಶಿಕ್ಷಣ ನೀಡುತ್ತಿರುವುದು ಮಾದರಿ ಕೆಲಸ. ಇದು ಪರಿವರ್ತನೆಯ ಅಭಿವೃದ್ದಿ ಕಾರ್ಯ ಎಂದು ಅಭಿಪ್ರಾಯಪಟ್ಟರು.
ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿ, ಸರ್ಕಾರಗಳು ಮಾಡದ ಕೆಲಸಗಳನ್ನು ಮಠ, ಮಾನ್ಯಗಳು ಮಾಡುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವುದು ಸಂತಸದ ಸಂಗತಿ. ಸರ್ಕಾರದ ಅನುದಾನ ಪಡೆದುಕೊಳ್ಳದೆ, ಯಾರಿಂದಲೂ ದೇಣಿಗೆ ಪಡೆಯದೇ ಶಾಲಾ ಕೋಣೆಗಳನ್ನು ನಿರ್ಮಿಸಿದ್ದು ಇತರರಿಗೆ ಮಾದರಿ ಕಾರ್ಯ ಎಂದು ಶ್ಲಾಘಿಸಿದರು.ಡಾ.ವೃಷಭಲಿಂಗ ಮಹಾಶಿವಯೋಗಿಗಳು ಆಶೀರ್ವಚನ ನೀಡಿ, ಬಂಥನಾಳದ ಸಂಗನ ಬಸವಮಹಾಶಿವಯೋಗಿಗಳು ಜೋಳಿಗೆ ಹಿಡಿದು ಶಿಕ್ಷಣ ಸಂಸ್ಥೆಗಳು ಕಟ್ಟಿದ್ದರಿಂದ ಇಂದು ವಿಜಯಪುರ ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿ ಉಂಟಾಗಿದೆ. ಸಂಗನ ಬಸವಮಹಾಶಿವಯೋಗಿಗಳ ಜೀವನ ಚರಿತ್ರೆ, ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದ ಇತಿಹಾಸ ಮುಂದಿನ ಪೀಳಿಗೆಗೆ ತಿಳಿಯಬೇಕಾದರೆ ಸಂಗನ ಬಸವ ಮಹಾಶಿವಯೋಗಿಗಳ ಜೀವನ ಚರಿತ್ರೆ ಪಠ್ಯದಲ್ಲಿ ಅಳವಡಿಸುವ ಕಾರ್ಯವನ್ನು ಸರ್ಕಾರ ಮಾಡಬೇಕು. ಗ್ರಾಮೀಣ ಭಾಗದಲ್ಲಿ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಿದ ಕಾರ್ಯ ಉತ್ತಮವಾಗಿದೆ ಎಂದು ಹೇಳಿದರು.
ಸಂಸ್ಥೆಯ ಉಪಾಧ್ಯಕ್ಷ ವೆಂಕಟೇಶ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶ ಪ್ಯಾಟಿ, ಹಸನ ಶೇಖ್, ಇಲಿಯಾಸ್ ಬೊರಾಮಣಿ, ಕಲ್ಲನಗೌಡ ಬಿರಾದಾರ, ಜಾವೀದ ಮೋಮಿನ, ಡಾ.ಮಂಜುನಾಥ ಕೊಟೆಣ್ಣವರ, ಈರಣ್ಣಾ ಆಶಾಪೂರ, ಟಿ.ಎಸ್.ಆಲಗೂರ, ಅಬ್ದುಲ್‌ರಹೀಮ ಮುಜಾವರ, ಜಯಪ್ರಕಾಶ ಸೊಡ್ಡಗಿ, ಹುಸೇನಸಾಬ ಪಟೇಲ, ಧನರಾಜ ಮುಜಗೊಂಡ ಮೊದಲಾದವರು ವೇದಿಕೆ ಮೇಲೆ ಇದ್ದರು.
ಸಂಗನ ಬಸವ ಮಹಾಶಿವಯೋಗಿಗಳ ಜೀವನ ಚರಿತ್ರೆ ಸರ್ಕಾರ ಪಠ್ಯದಲ್ಲಿ ಅಳವಡಿಸಬೇಕು. ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ತರಬೇಕು. ಸಂಗನ ಬಸವ ಮಹಾಶಿವಯೋಗಿಗಳು ಎಂದೂ ಬತ್ತದ, ಆರದ ಜ್ಞಾನದ ಬೆಳಕನ್ನು ಹಚ್ಚಿ ಹೋಗಿದ್ದಾರೆ. ದಕ್ಷಣ ಕರ್ನಾಟಕದ ಮಠಮಾನ್ಯಗಳಿಗೆ ಇರುವಷ್ಟು ಗೌರವ ಉತ್ತರ ಕರ್ನಾಟಕದ ಮಠಮಾನ್ಯಗಳಿಗೆ ದೊರೆಯದಿರುವುದು ನೋವಿನ ಸಂಗತಿ.ಡಾ.ವೃಷಭಲಿಂಗ ಮಹಾಶಿವಯೋಗಿಗಳು, ಬಂಥನಾಳ