ಥಾಯ್ಲೆಂಡ್‌ ಸಮ್ಮೇಳನಕ್ಕೆ ಮಣಿಪಾಲದಿಂದ ಲೈವ್‌ಕೇಸ್ ಟ್ರಾನ್ಸ್‌ಮಿಷನ್

KannadaprabhaNewsNetwork |  
Published : Nov 14, 2026, 02:30 AM IST
ಮೋದಿ ಕಾರ್ಯಕ್ರಮ | Kannada Prabha

ಸಾರಾಂಶ

ಥಾಯ್ಲೆಂಡ್‌ನಲ್ಲಿ ನಡೆದ 17ನೇ ಸಿಐಎಟಿ ವಾರ್ಷಿಕ ವೈಜ್ಞಾನಿಕ ಸಮ್ಮೇಳನದಲ್ಲಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಿಂದ ಲೇಸರ್ ಆಂಜಿಯೋಪ್ಲಾಸ್ಟಿಯ ಲೈವ್‌ ಕೇಸ್ ಟ್ರಾನ್ಸ್‌ಮಿಷನ್ (ಶಸ್ತ್ರಚಿಕಿತ್ಸೆಯ ನೇರ ಪ್ರಸಾರ) ನಡೆಸಲಾಯಿತು.

ಮಣಿಪಾಲ : ಥಾಯ್ಲೆಂಡ್‌ನಲ್ಲಿ ನಡೆದ 17ನೇ ಸಿಐಎಟಿ ವಾರ್ಷಿಕ ವೈಜ್ಞಾನಿಕ ಸಮ್ಮೇಳನದಲ್ಲಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಿಂದ ಲೇಸರ್ ಆಂಜಿಯೋಪ್ಲಾಸ್ಟಿಯ ಲೈವ್‌ ಕೇಸ್ ಟ್ರಾನ್ಸ್‌ಮಿಷನ್ (ಶಸ್ತ್ರಚಿಕಿತ್ಸೆಯ ನೇರ ಪ್ರಸಾರ) ನಡೆಸಲಾಯಿತು.ಹೃದ್ರೋಗ ತಜ್ಞರಿಗಾಗಿ ಆಯೋಜಿಸಲಾಗಿದ್ದ ಈ ಸಮ್ಮೇಳನದಲ್ಲಿ ಆಗ್ನೇಯ ಏಷ್ಯಾದ ವಿವಿಧ ದೇಶಗಳ ವೈದ್ಯರು, ಕಸ್ತೂರ್ಬಾ ಆಸ್ಪತ್ರೆಯ ಹೃದ್ರೋಗ ಕ್ಯಾಥ್ ಲ್ಯಾಬ್‌ನಲ್ಲಿ ಹೃದಯದ ರಕ್ತನಾಳಕ್ಕೆ ಸಂಬಂಧಿಸಿದ ಈ ಶಸ್ತ್ರಚಿಕಿತ್ಸಾ ವಿಧಾನವನ್ನು ಅದು ನಡೆಯುತ್ತಿರುವಾಗಲೇ ವೀಕ್ಷಿಸಿ, ಚಿಕಿತ್ಸಾ ತಂಡದ ಯೋಜನೆ ಮತ್ತು ತಂತ್ರವನ್ನು ವೀಕ್ಷಿಸಿದರು.

ಹೃದಯದ ಒಂದಕ್ಕಿಂತ ಹೆಚ್ಚು ರಕ್ತನಾಳಗಳಲ್ಲಿ ಅಡಚಣೆ (ಬ್ಲಾಕ್)ಗಳಿದ್ದ ರೋಗಿಯೊಬ್ಬರಿಗೆ ಈ ಲೇಸರ್ ಆಂಜಿಯೋಪ್ಲಾಸ್ಟಿಯನ್ನು ಹೃದ್ರೋಗ ವಿಭಾಗದ ಘಟಕ ಮುಖ್ಯಸ್ಥ ಪ್ರೊ. ಟಾಮ್ ದೇವಾಸಿಯಾ ಅವರು ಡಾ. ಮೋನಿಕಾ ಜೆ. ಮತ್ತು ಡಾ. ಶಾರ್ದೂಲ್ ದೇಶಮುಖ್ ಅವರೊಂದಿಗೆ ನಡೆಸಿದರು. ಚಿಕಿತ್ಸೆಯ ಪ್ರತಿ ಹಂತದಲ್ಲಿ ಲೇಸರ್ ತಂತ್ರಜ್ಞಾನ ಮತ್ತು ಇಂಟ್ರಾಕೊರೊನರಿ ಇಮೇಜಿಂಗ್ ಬಳಕೆಯನ್ನು ಅವರು ಸಮ್ಮೇಳನದ ಪ್ರತಿನಿಧಿಗಳಿಗೆ ವಿವರಿಸಿದರು.

ಹೃದ್ರೋಗ ಶಿಕ್ಷಣ ಕ್ಷೇತ್ರದಲ್ಲಿ ಹಾಗೂ ಇಂಟರ್ವೆನ್ಷನಲ್ ಚಿಕಿತ್ಸಾ ತಂತ್ರಗಳನ್ನು ಈ ಪ್ರದೇಶದ ಹೃದ್ರೋಗ ತಜ್ಞರೊಂದಿಗೆ ಹಂಚಿಕೊಳ್ಳುವಲ್ಲಿ ಆಸ್ಪತ್ರೆ ನಿರಂತರವಾಗಿ ತೊಡಗಿಸಿಕೊಂಡಿದ್ದು, ಈ ಕಾರ್ಯಕ್ರಮ ಅದರ ಭಾಗವಾಗಿತ್ತು ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಸರ್ವತೋಮುಖ ಪ್ರಗತಿಗೆ ಶ್ರಮಿಸಿ
ಎಸಿಯಾಗಿ ಪದೋನ್ನತಿ ಹೊಂದಿದ ತಹಸೀಲ್ದಾರ್‌ ಬೋಸಗಿ