ಸಂವಿಧಾನದ ಆಶಯದಲ್ಲಿ ಜೀವನ ಸಾಗಿಸಿ: ಬಸವರಾಜ ಸಜ್ಜನ್

KannadaprabhaNewsNetwork |  
Published : Feb 26, 2024, 01:36 AM IST
ಸುರಪುರ ನಗರದ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥಾ ಬೀಳ್ಕೊಡುಗೆ ಸಮಾರಂಭಕ್ಕೆ ಚಾಲನೆ ನೀಡಲಾಯಿತು. | Kannada Prabha

ಸಾರಾಂಶ

23 ಗ್ರಾಮ ಪಂಚಾಯಿತಿಯಲ್ಲಿ ಸಂಚರಿಸಿದ ಸಂವಿಧಾನ ಜಾಥಾಕ್ಕೆ ಅದ್ಧೂರಿ ಬೀಳ್ಕೊಡುಗೆ, ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು, ವಿದ್ಯಾರ್ಥಿನಿಯರ ಲಂಬಾಣಿ ನೃತ್ಯ ಸಾರ್ವಜನಿಕರ ಗಮನ ಸೆಳೆಯಿತು.

ಕನ್ನಡಪ್ರಭ ವಾರ್ತೆ ಸುರಪುರ

ಬೇರೆ ರಾಷ್ಟ್ರಗಳಲ್ಲಿ ಸಂವಿಧಾನ ನಿರಂತರವಾಗಿ ಬದಲಾಗುತ್ತಿದ್ದರೂ ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿರುವ ಪ್ರಪಂಚದ ಅತಿದೊಡ್ಡ ಸಂವಿಧಾನ 75 ವರ್ಷದಿಂದ ಅಚಲವಾಗಿದ್ದು, ಮುಂದೆಯೂ ಇರಲಿದೆ. ತಿದ್ದುಪಡಿಗಳಾದರೂ ಸಂವಿಧಾನ ಮೂಲ ತತ್ವವನ್ನು ಬದಲಿಸಲು ಸಾಧ್ಯವಿಲ್ಲ. ಆದ್ದರಿಂದ ಸಂವಿಧಾನದ ಪ್ರಸ್ತಾವನೆಯ ಆಶಯಂತೆ ಬದುಕು ಸಾಗಿಸಬೇಕು ಎಂದು ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ್ ಹೇಳಿದರು.

ನಗರದ ತಹಸೀಲ್ದಾರ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಜಾಥಾ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಫೆ.17ರಿಂದ 23ರ ವರೆಗೆ 23 ಗ್ರಾಪಂಗಳಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾರ್ಗದರ್ಶನದಲ್ಲಿ ಸುಸೂತ್ರವಾಗಿ ಜರುಗಿದೆ. ಜಿಲ್ಲಾಡಳಿತದಿಂದ ಜಾಥಾದ ಮಾರ್ಗ ರಚಿಸಲಾಗಿತ್ತು. ಅದು ಮಾಡಿದರೆ ಎಲ್ಲ ಗ್ರಾಮಗಳನ್ನು ತಲು ಸಾಧ್ಯವಿಲ್ಲ. ಹೊಸ ಮಾರ್ಗ ರಚಿಸಿಕೊಟ್ಟದ್ದನ್ನು ಸ್ಮರಿಸಿದರು.

ಉಪನ್ಯಾಸಕ ಬಿ.ಆರ್. ಅಂಚೆಸೂಗೂರು ಮಾತನಾಡಿ, ಸಂವಿಧಾನದ ಆಶಯಗಳು ಮೆರೆಯಬೇಕು. ಆದರೆ ಇಂದು ಮಸೀದಿ, ಮಂದಿರಗಳು ಮತ್ತಿತರೆ ಭಾವನೆಗಳು ಚರ್ಚೆಯಲ್ಲಿವೆ. ಸಂವಿಧಾನಕ್ಕೆ ಒಳಪಟ್ಟಿರುವ ಎಲ್ಲರನ್ನು ಎತ್ತಿಹಿಡಿದು ಚಿಂತನೆಗೆ ಹಚ್ಚಿದೆ. ಸಂವಿಧಾನ ಪೀಠಿಕೆಯು ರಾಜಕೀಯ ಜಾತಕ ಅಥವಾ ರಾಜಕೀಯ ಜನ್ಮ ಕುಂಡಲಿ, ಸಂವಿಧಾನದ ಆಭರಣ, ಸಂವಿಧಾನ ಪೀಠಿಕೆ ಗದ್ಯ ಸಾಹಿತ್ಯ ಎಂಬುದಾಗಿ ಚಿಂತಕರು ಅಭಿಪ್ರಾಯಪಟ್ಟಿದ್ದಾರೆ ಎಂದರು.

ಉಪಖಜಾನಾಧಿಕಾರಿ ಸಣಕೆಪ್ಪ ಕೊಂಡಿಕಾರ ಮಾತನಾಡಿ, 75ನೇ ವರ್ಷದ ನಿಮಿತ್ತ ಸಂವಿಧಾನದ ಮಹತ್ವವನ್ನು ರಾಜ್ಯ ಸರಕಾರ ಪ್ರತಿಯೊಬ್ಬರಿಗೂ ತಿಳಿಸುವ ಕೆಲಸ ಮಾಡುತ್ತಿದೆ. 390 ವಿಧೇಯಕಗಳಿರುವ ಸಂವಿಧಾನವನ್ನು ಇಲ್ಲಿಯವರೆಗೆ 106 ಬಾರಿ ತಿದ್ದುಪಡಿ ಮಾಡಿದರೂ ಮೂಲ ತತ್ವ ಮತ್ತು ಆಶಯಗಳನ್ನು ಯಾರಿಂದಲೂ ತಿದ್ದುಪಡಿ ಮಾಡಲು ಸಾಧ್ಯವಿಲ್ಲ. ವಿವಿಧೆತೆಯಲ್ಲಿ ಏಕತೆಯನ್ನು ಒಗ್ಗೂಡಿಸುವ ಕೆಲಸ ಸಂವಿಧಾನ ಮಾಡುತ್ತಿದೆ ಎಂದು ತಿಳಿಸಿದರು.

ಗಮನ ಸೆಳೆದ ಜಾಥಾ: ನಗರದ ಅಂಬೇಡ್ಕರ್ ಮತ್ತು ಗಾಂಧಿ ವೃತ್ತ ಮಾರ್ಗವಾಗಿ ಜಾಥಾ ತಹಸೀಲ್ದಾರ್ ಕಚೇರಿ ತಲುಪಿತು. ಜಾಥಾದಲ್ಲಿ ಕುಂಬಕಳಸ, ಡೊಳ್ಳು ಕುಣಿತ, ಹಲಗೆ ಬಡಿತ ವಿಜೃಂಭಿಸಿತು. ವಿವಿಧ ಕಾಲೇಜು ಮತ್ತು ಪ್ರೌಢಶಾಲೆಯ ವಿದ್ಯಾರ್ಥಿ ಮತ್ತು ವಿದ್ಯಾರ್ಥಿಗಳಿಂದ ಹಾಗೂ ಕಲಾವಿದರಿಂದ, ತೃತೀಯ ಲಿಂಗದವರಿಂದ ಸಂವಿಧಾನ ಜಾಗೃತಿ ಜಾಥಾ ಕುರಿತು ಸಾಂಸ್ಕೃತಿಕ ಚಟುವಟಿಕೆಗಳು ಕಣ್ಮನಸೆಳೆದವು.

ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪಂಡಿತ ನಿಂಬೂರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಆರ್‌ಪಿ ನಿಂಗಣ್ಣ ದೇವರಗೋನಾಲ ಸ್ವಾಗತಿಸಿದರು. ಮಹಾಂತೇಶ ಮತ್ತು ಸಂಗಡಿಗರು ಕ್ರಾಂತಿಗೀತೆ ಹಾಡಿದರು. ರಾಜಶೇಖರ ದೇಸಾಯಿ ನಿರೂಪಿಸಿ, ವಂದಿಸಿದರು. ತಹಸೀಲ್ದಾರ್ ವಿಜಯಕುಮಾರ, ಪೌರಾಯುಕ್ತ ಜೀವನ ಕಟ್ಟಿಮನಿ, ಸಮಾಜ ಕಲ್ಯಾಣ ಅಧಿಕಾರಿಗಳಾದ ಡಾ. ಶ್ರುತಿ, ಮಹ್ಮದ್ ಸಲೀಮ್, ಮುಖಂಡರಾದ ಮಾನಪ್ಪ ಕಟ್ಟಿಮನಿ, ಭೀಮರಾಮ ಸಿಂಧಗೇರಿ, ಮಾನಪ್ಪ ಬಿಜಾಸ್ಪುರ, ಹಣಮಂತ ಭದ್ರಾವತಿ, ಮೂರ್ತಿ ಬೊಮ್ಮನಹಳ್ಳಿ, ಧರ್ಮಣ್ಣ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!