ಕುಷ್ಟಗಿ:
ರೇಣುಕಾಚಾರ್ಯರ ಜಯಂತಿಯನ್ನು ಜಂಗಮ ಸಮಾಜದವರು ಆಚರಣೆ ಮಾಡಿದರೆ ಸಾಲದು. ಇಡೀ ವೀರಶೈವ ಸಮಾಜವೂ ಆಚರಿಸಬೇಕೆಂದು ಕರಿಬಸವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತದಿಂದ ನಡೆದ ಜಗದ್ಗುರು ರೇಣುಕಾಚಾರ್ಯರ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಅವರ ತತ್ವಗಳಂತೆ ಉತ್ತಮರಾಗಿ ಆಚಾರ-ವಿಚಾರವಂತರಾಗಿ ಬದುಕಿ ಬಾಳಬೇಕು. ಮಾರ್ಗದರ್ಶನದಲ್ಲಿ ನೀತಿವಂತರಾಗಿ ಬದುಕಬೇಕು ಎಂದರು.
ಗುರುಶಾಂತವೀರ ಶಿವಾಚಾರ್ಯರು ಮಾತನಾಡಿ, ವೀರಶೈವ ಧರ್ಮವೂ ಎಲ್ಲರನ್ನು ಒಪ್ಪಿಕೊಂಡು, ಅಪ್ಪಿಕೊಳ್ಳುವ ಧರ್ಮವಾಗಿದೆ ಎಂದು ಹೇಳಿದರು.ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಮಾತನಾಡಿ, ರೇಣುಕಾಚಾರ್ಯರು ಬಡವರು, ದೀನ-ದಲಿತರ ಉದ್ಧಾರ ಮಾಡಿದ್ದಾರೆ. ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ್ದಾರೆ ಎಂದರು.
ಜಂಗಮ ಸಮಾಜದ ಅಧ್ಯಕ್ಷ ಶಿವಕುಮಾರ ಗಂಧದಮಠ ಪ್ರಾಸ್ತಾವಿಕ ಮಾತನಾಡಿದರು, ಈ ವೇಳೆ ನಿವೃತ್ತ ತಹಸೀಲ್ದಾರ್ ಸಿ.ಎಂ. ಹಿರೇಮಠ, ಸದಾನಂದ ಹಿರೇಮಠ, ಮಹಾಂತಯ್ಯ ಹಿರೇಮಠ, ಎಚ್.ಎಚ್. ಹಿರೇಮಠ, ದೊಡ್ಡಯ್ಯ ಗದ್ದಡಕಿ, ವಕೀಲರ ಸಂಘದ ಅಧ್ಯಕ್ಷ ಸಂಗನಗೌಡ ಪಾಟೀಲ, ಮಹಾಂತೇಶ ಹಿರೇಮಠ, ಸರಸ್ವತಿ, ಅಮರಯ್ಯಸ್ವಾಮಿ, ಸಂಗಮೇಶ ಲೂತಿಮಠ, ಈಶ್ವರಯ್ಯ, ಸೋಮಶೇಖರಯ್ಯ, ರಾಮಲಿಂಗಯ್ಯ ಸೇರಿದಂತೆ ಅನೇಕರು ಇದ್ದರು.ವಿವಿಧೆಡೆ ಆಚರಣೆ:
ದೋಟಿಹಾಳ ಗ್ರಾಪಂನಲ್ಲಿ ರೇಣುಕಾಚಾರ್ಯರ ಜಯಂತಿ ಆಚರಿಸಲಾಯಿತು. ಚಂದ್ರಶೇಖರ ದೇವರು, ಗ್ರಾಪಂ ಅಧ್ಯಕ್ಷ ಮಹೇಶ ಕಾಳಗಿ, ಪಿಡಿಒ ದಸ್ತಗೀರಸಾಬ ಬಡಿಗೇರ, ಶಿವನಗೌಡ ಪಾಟೀಲ, ರುಕುಮುದ್ದಿನಸಾಬ್ ನೀಲಗಾರ, ಶರಣಪ್ಪ ಗೋತಗಿ, ಪ್ರಭುದೇವ ಕಲ್ಯಾಣಮಠ, ಸುರೇಶ ಹುನಗುಂದ, ರಾಘವೇಂದ್ರ ಕುಂಬಾರ, ಶಿವಾಜಿ ಸೋಂಪುರು, ಅಯ್ಯಪ್ಪ ಗೋತಗಿ, ಶ್ರೀನಿವಾಸ ಕಂಟ್ಲಿ, ಇದ್ದರು. ಕೇಸೂರು ಗ್ರಾಮ ಪಂಚಾಯಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ನಾಗೇಶ ಅರಳಿಗನೂರು, ವೀರಯ್ಯ ಮಳಿಮಠ, ಬಸವರಾಜ ಜಲಕಮಲದಿನ್ನಿ, ರಮೇಶ ಗೋಪಾಲನಾಯಕ, ಅಮರೇಶ ಗೋನಾಳ, ಕುಷ್ಟಗಿ ಪಟ್ಟಣದ ಬುತ್ತಿಬಸವೇಶ್ವರ ಶಾಲೆಯಲ್ಲಿ ನಡೆದ ಜಯಂತಿಯಲ್ಲಿ ಮುಖ್ಯಶಿಕ್ಷಕ ನಾಗರಾಜ ಪಟ್ಟಣಶೆಟ್ಟರ, ಗುರುಲಿಂಗಯ್ಯ ಹಿರೇಮಠ, ಉಮೇಶ ಹಿರೇಮಠ, ರವಿ ಕರಮುಡಿ, ಮಂಜುನಾಥ ಚಪ್ಪನವರಮಠ, ಸಂಗಮೇಶ ಇಲಚಿ, ಶಿವರಾಜ ಪೂಜಾರ ಸುರೇಶ ಇದ್ದರು.