ಗಜೇಂದ್ರಗಡ: ಗ್ರಾಮೀಣ ಪ್ರದೇಶದ ರೈತರಿಗೆ ಮತ್ತು ಸ್ವ- ಸಹಾಯ ಗುಂಪುಗಳಿಗೆ ಕೃಷಿ ಸಲಕರಣೆಗಳು, ತರಬೇತಿ ಹಾಗೂ ಮಾರುಕಟ್ಟೆ ಸಂಪರ್ಕ ಕಲ್ಪಿಸಲು ಸೇವಾ ಕೇಂದ್ರವು ಉತ್ತಮ ವೇದಿಕೆಯಾಗಿದೆ ಎಂದು ಜಿಲ್ಲಾ ವ್ಯವಸ್ಥಾಪಕ ಬಸವರಾಜ ಮೂಲಿಮನಿ ಹೇಳಿದರು.
ಕರ್ನಾಟಕದಲ್ಲಿ ಸಂಜೀವಿನಿ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಅಡಿಯಲ್ಲಿ ರೈತರು ಮತ್ತು ಸ್ವ- ಸಹಾಯ ಗುಂಪುಗಳಿಗೆ ಕೃಷಿ ತಂತ್ರಜ್ಞಾನ, ಕೃಷಿ ಯಂತ್ರೋಪಕರಣ ಬಾಡಿಗೆ, ತರಬೇತಿ ಹಾಗೂ ಮಾರುಕಟ್ಟೆ ಸಂಪರ್ಕ ಕಲ್ಪಿಸಲು ಜೀವನೋಪಾಯ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಉಡುಪಿಯ ಅಲೆಲೂರಿನಲ್ಲಿ ರಾಜ್ಯದ ಮೊದಲ ಕೇಂದ್ರವು ಆರಂಭವಾಗಿದೆ. ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗಲೆಂದು ಸಂಜೀವಿನಿ ಒಕ್ಕೂಟದ ಮೂಲಕ ಜೀವನೋಪಾಯಕ್ಕಾಗಿ ಸೇವಾ ಕೇಂದ್ರ ಆರಂಭಿಸಿದೆ ಎಂದರು.
ತಾಪಂ ಯೋಜನಾಧಿಕಾರಿ ಅರವಿಂದ ಬಂಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಜನರಿಗೆ ಸಂಜೀವಿನಿ ಒಕ್ಕೂಟ ವರದಾನವಾಗಿದೆ. ಸರ್ಕಾರ ಸಂಜೀವಿನಿ ಒಕ್ಕೂಟದ ಮೂಲಕ ಮಹಿಳೆಯರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದು ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುತ್ತಿದೆ. ಗ್ರಾಮೀಣ ಭಾಗದ ಜನರು ಯೋಜನೆ ಲಾಭ ಪಡೆದುಕೊಳ್ಳಬೇಕು ಎಂದರು.ಮುಖ್ಯ ಅತಿಥಿ ಮಡ್ಡೇಶ ಮಳ್ಳಿಮಾರ ಅವರು, ಕೃಷಿ ಯಂತ್ರೋಪಕರಣಗಳ ಬಾಡಿಗೆ ಕೌಶಲ್ಯ ಮತ್ತು ತರಬೇತಿ ಕಾರ್ಯಕ್ರಮಗಳು, ಮಾರುಕಟ್ಟೆ ಜೋಡಣೆ ಮತ್ತು ಬೆಂಬಲ ಸ್ವ- ಸಹಾಯ ಗುಂಪುಗಳಿಗೆ ಆರ್ಥಿಕ ಹಾಗೂ ತಾಂತ್ರಿಕ ನೆರವು ಸೇರಿ ಇತರೆ ಸೌಲಭ್ಯಗಳ ಕುರಿತು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜುಬೆದಾ ಬೇಗಂ, ವಾಣಿಶ್ರೀ ಕುಲಕರ್ಣಿ ವಹಿಸಿದ್ದರು. ತಾಲೂಕು ಸಂಜೀವಿನಿ ಘಟಕದಿಂದ ವೀರೇಶ ಬಳಿಗಾರ, ಶಿದ್ಲಿಂಗಯ್ಯ ಶಿರೋಳ, ಅನಿಲಕುಮಾರ, ಮಧುಮತಿ ಹಾಗೂ ಒಕ್ಕೂಟದ ಎಲ್ಲಾ ಎಂಬಿಕೆ, ಎಲ್‌ಸಿಆರ್‌ಪಿ, ಕೃಷಿ ಸಖಿ, ಪಶು ಸಖಿ, ಪಿಎಸ್ ಸೇರಿ ಶ್ರೀದೆವಿ ಹಳ್ಳದ, ಕಾವ್ಯ ಕೋರಿ ಇದ್ದರು.