ಲಿವರ್ ಕಾಯಿಲೆ: ಅಪರೂಪದ ಜೀವ ರಕ್ಷಕ ವ್ಯಾಸ್ಕುಲರ್ ಚಿಕಿತ್ಸೆ

KannadaprabhaNewsNetwork |  
Published : Aug 01, 2026, 03:45 AM IST
ದಸಸದ | Kannada Prabha

ಸಾರಾಂಶ

ಲಿವರ್‌ ಸಿರೋಸಿಸ್‌ ಮತ್ತು ಪೋರ್ಟಲ್‌ ವೆನ್‌ ಥ್ರಂಬೋಸಿಸ್‌ ಹಾಗೂ ಗ್ಯಾಸ್ಟ್ರೋ ಇಂಟೊಸ್ಟೈನಲ್‌ ರಕ್ತಸ್ರಾವದಿಂದ ತೀವ್ರವಾಗಿ ಬಳಲುತ್ತಿದ್ದ 50 ವರ್ಷದ ವ್ಯಕ್ತಿಗೆ ಹೆಚ್‌ಸಿಜಿ ಸುಚಿರಾಯು ಆಸ್ಪತ್ರೆಯ ವೈದ್ಯರು ಮಿನಿಮಲಿ ಇನ್ವೇಸಿವ್‌ ವ್ಯಾಸ್ಕುಲರ್‌ ಪ್ರೋಸೀಜರ್‌ ಮೂಲಕ ಯಶಸ್ವಿ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

ಹುಬ್ಬಳ್ಳಿ: ಲಿವರ್‌ ಸಿರೋಸಿಸ್‌ ಮತ್ತು ಪೋರ್ಟಲ್‌ ವೆನ್‌ ಥ್ರಂಬೋಸಿಸ್‌ ಹಾಗೂ ಗ್ಯಾಸ್ಟ್ರೋ ಇಂಟೊಸ್ಟೈನಲ್‌ ರಕ್ತಸ್ರಾವದಿಂದ ತೀವ್ರವಾಗಿ ಬಳಲುತ್ತಿದ್ದ 50 ವರ್ಷದ ವ್ಯಕ್ತಿಗೆ ಹೆಚ್‌ಸಿಜಿ ಸುಚಿರಾಯು ಆಸ್ಪತ್ರೆಯ ವೈದ್ಯರು ಮಿನಿಮಲಿ ಇನ್ವೇಸಿವ್‌ ವ್ಯಾಸ್ಕುಲರ್‌ ಪ್ರೋಸೀಜರ್‌ ಮೂಲಕ ಯಶಸ್ವಿ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಸುಚಿರಾಯು ಆಸ್ಪತ್ರೆಯ ವ್ಯಾಸ್ಕುಲರ್‌ ಮತ್ತು ಇಂಟರ್ವೆನ್ಷನಲ್‌ ರೇಡಿಯಾಲಜಿಸ್ಟ್‌ ಕನ್ಸಲ್ಟೆಂಟ್‌ ಡಾ. ವೆಂಕಟೇಶ ಎಚ್‌.ಎ. ಮಾಹಿತಿ ನೀಡಿದರು.

ರೋಗಿಯು ಕಳೆದ ಐದು ವರ್ಷಗಳಿಂದ ಲಿವರ್‌ ಸಿರೋಸಿಸ್‌ 4ನೇ ಹಂತದಲ್ಲಿದ್ದು, ಪದೇ ಪದೆ ರಕ್ತ ವಾಂತಿ ಮಾಡಿಕೊಳ್ಳುವುದು, ನೀರು ತುಂಬಿಕೊಳ್ಳುವುದು, ಹಳದಿ ಕಣ್ಣು, ಕಾಲು ಬಾವು ಮೊದಲಾದ ತೀವ್ರ ನೋವುಗಳಿಂದ ಚಿಂತಾಜನಕ ಸ್ಥಿತಿಯಿಂದ ಬಳಲುತ್ತಿದ್ದರು. ಲಿವರ್‌ ಮತ್ತು ಹಾರ್ಟ್‌ (ಪೋರ್ಟಲ್‌ ವೆನ್‌) ರಕ್ತನಾಳ ಬ್ಲಾಕ್‌ ಆಗಿದ್ದರಿಂದ ರಕ್ತ ಸಂಚಲನ ಬಹುತೇಕ ನಿಂತುಹೋಗಿತ್ತು. ಬದುಕುಳಿಯುವ ಅವಕಾಶ ತೀರಾ ಕಮ್ಮಿ ಇತ್ತು. ಈ ಹಂತದಲ್ಲಿ ಲಿವರ್‌- ಹಾರ್ಟ್‌ಗೆ ಸ್ಟಂಟ್‌ ಅಳವಡಿಸಿ ಪೋರ್ಟಲ್‌ವೆನ್‌ ಮುಕ್ತಗೊಳಿಸಲಾಯಿತು. ತದನಂತರದಲ್ಲಿ ಪಿವಿಆರ್‌-ಟಿಐಪಿಎಸ್‌ ನಂತಹ ಅತ್ಯಾಧುನಿಕ ಚಿಕಿತ್ಸೆ ಕೈಗೊಂಡು ರಕ್ತಸ್ರಾವವನ್ನು ನಿಯಂತ್ರಿಸಲಾಯಿತು ಎಂದು ತಿಳಿಸಿದರು..

ಪೋರ್ಟಲ್‌ ವೇನ್‌ ರಿಕ್ಯಾನಲೈಸೇಶನ್‌ ವಿತ್‌ ಟ್ರಾನ್ಸ್‌ ಜುಗುಲಾರ್‌ ಇಂಟ್ರಾಹೆಪಾಟಿಲ್‌ ಪೋರ್ಟೋಸಿಸ್ಟಮಿಕ್ಶಂಟ್‌ (ಪಿವಿಆರ್‌-ಟಿಐಪಿಎಸ್‌ )ಎಂಬುದು ಅತ್ಯಾಧುನಿಕ ಮತ್ತು ಅತ್ಯಂತ ಸಂಕೀರ್ಣ ಚಿಕಿತ್ಸೆ. ಇಂತಹ ಚಿಕಿತ್ಸೆ ಉತ್ತರ ಕರ್ನಾಟಕದ ಸುಚಿರಾಯು ಆಸ್ಪತ್ರೆಯಲ್ಲಿ ತಜ್ಞ ವೈದ್ಯರು ನಿಭಾಯಿಸುತ್ತಾರೆ. ಇಂತಹ 35 ಪ್ರಕರಣಗಳನ್ನು ಯಶಸ್ವಿಯಾಗಿ ನಡೆಸಿದ್ದೇವೆ ಎಂದು ವಿವರಿಸಿದರು.

ಭವಿಷ್ಯದಲ್ಲಿ ರೋಗಿ ಇನ್ನೂ ಅತ್ಯುತ್ತಮ ಬದುಕು ಮುಂದುವರಿಸಲು ಲಿವರ್‌ ಟ್ರಾನ್ಸಪ್ಲಾಂಟ್‌ ಮಾಡಿಸಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದ್ದೇವೆ ಎಂದು ಗ್ಯಾಸ್ಟ್ರೋಎಂಟ್ರಾಲಜಿಸ್ಟ್‌ ಕನ್ಸಲ್ಟೆಂಟ್‌ ಡಾ. ಸಂಜೀವ ಚಟ್ನಿ ಮತ್ತು ಡಾ. ಸಂದೀಪ ಕುಂಬಾರ್‌ ಹೇಳಿದರು. ಈಗಾಗಲೇ ಲಿವರ್‌ ಟ್ರಾನ್ಸಪ್ಲಾಂಟ್‌ ಪ್ರಕ್ರಿಯೆಯನ್ನು ಆಸ್ಪತ್ರೆಯಲ್ಲಿ ನಿಭಾಯಿಸಿದ್ದೇವೆ ಎಂದರು. ಆಸ್ಪತ್ರೆ ಸಿಒಒ ಡಾ.ಮಂಜುನಾಥ ಸುದ್ದಿಗೋಷ್ಠಿಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದುಷಿ ಡಾ. ಉಷಾ ಹೆಬ್ಬಾರ್ ಗೆ ಗುರುವಂದನೆ
ಮಾನವ ಹಸ್ತಕ್ಷೇಪದಿಂದ ಪ್ರಕೃತಿ ವಿಕೋಪ: ದಿನೇಶ್ ಹೊಳ್ಳ