ಗೌರವದಿಂದ ಬದುಕುವುದು ಎಲ್ಲರ ಹಕ್ಕು: ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ

KannadaprabhaNewsNetwork |  
Published : Sep 16, 2026, 01:30 AM IST
ಪೋಟೋ 3 : ನೆಲಮಂಗಲ ಸಮೀಪದ ಗೌಡನಹಳ್ಳಿಯಲ್ಲಿ ಮಾತೃಶ್ರೀ ಮನೋವಿಕಾಸ ಕೇಂದ್ರದ ನೂತನ ವೈದ್ಯಕೀಯ ಕೇಂದ್ರವನ್ನು ಮಾತೃಶ್ರೀ ಮನೋವಿಕಾಸ ಕೇಂದ್ರದ ಮಹಾ ಪೋಷಕರಾದ ಹರ್ಷ ಸಂಸ್ಥೆ ಅಧ್ಯಕ್ಷ ಎಸ್.ಶಿವಕುಮಾರ್ ಅವರನ್ನು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಗೌರವಿಸಿದರು. | Kannada Prabha

ಸಾರಾಂಶ

ದಾಬಸ್‍ಪೇಟೆ: ಅಂಗವಿಕಲರು ಸೇರಿದಂತೆ ಎಲ್ಲರಿಗೂ ಗೌರವದಿಂದ ಬದುಕುವ ಹಕ್ಕನ್ನು ಸಂವಿಧಾನ ಕಲ್ಪಿಸಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು

ದಾಬಸ್‍ಪೇಟೆ: ಅಂಗವಿಕಲರು ಸೇರಿದಂತೆ ಎಲ್ಲರಿಗೂ ಗೌರವದಿಂದ ಬದುಕುವ ಹಕ್ಕನ್ನು ಸಂವಿಧಾನ ಕಲ್ಪಿಸಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.

ನೆಲಮಂಗಲ ಸಮೀಪದ ಗೌಡನಹಳ್ಳಿಯಲ್ಲಿ ಮಾತೃಶ್ರೀ ಮನೋವಿಕಾಸ ಕೇಂದ್ರದ ನೂತನ ವೈದ್ಯಕೀಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ವಿಶೇಷ ಚೇತನ ಮಕ್ಕಳು ಜನಿಸದಂತೆ ಎಚ್ಚರಿಕೆ ವಹಿಸುವುದು ಪೋಷಕರ ಜವಾಬ್ದಾರಿ. ಮೊಬೈಲ್ ಪೋನ್ ಬಳಕೆ, ಟಿವಿ ವೀಕ್ಷಣೆಯ ಮೇಲೆ ಕಡಿವಾಣ ಹಾಕಬೇಕು. ವಿಶೇಷ ಚೇತನರನ್ನು ಬಲಗೊಳಿಸುವುದು ಇಂದಿನ ಅಗತ್ಯ. ಅಂಥವರ ಸೇವೆ ಮಾಡುವುದು ನಿಜವಾದ ಮಾನವೀಯತೆ. ಕೇಂದ್ರದ ಚಟುವಟಿಕೆಗಳು ನಿರಂತರವಾಗಿ ನಡೆಯಲಿ ಎಂದರು.

ಮಹಾಪೋಷಕ, ಐಪಿಎಸ್ ಎಂ.ಎನ್.ಅನುಚೇತ್ ಮಾತನಾಡಿ, ಮೂವರು ಮಕ್ಕಳ ಸೇವೆಯೊಂದಿಗೆ ಬಸವರಾಜ್ ಮತ್ತು ಸ್ವರ್ಣ ಅವರು ಸ್ಥಾಪಿಸಿರುವ ಸಂಸ್ಥೆ ಇಂದು 120 ಅಂಗವಿಕಲರನ್ನು ಪೋಷಿಸುತ್ತಿರುವುದು ದೊಡ್ಡ ಸಾಧನೆ. ರಾಜ್ಯದ ಐದು ಕಡೆಗಳಲ್ಲಿ ಕೇಂದ್ರ ಸ್ಥಾಪಿಸಿ ಸೇವೆ ವಿಸ್ತರಿಸುವ ಯೋಜನೆ ಹಮ್ಮಿಕೊಂಡಿದ್ದೇವೆ ಎಂದರು.

ಮತ್ತೊಬ್ಬ ಮಹಾಪೋಷಕ ಗೋಪಾಲ್ ಮಾತನಾಡಿ, ತೇಜಪಾಲ್ ಪಾಂಡ್ಯ, ಶಾಂತಿ ಪಾಂಡ್ಯ ದಾನವಾಗಿ ನೀಡಿರುವ ಜಮೀನಿನ ಆವರಣದಲ್ಲಿ ₹7 ಕೋಟಿ ವೆಚ್ಚದಲ್ಲಿ ಕೇಂದ್ರ ನಿರ್ಮಾಣವಾಗಿದೆ. ತಪಾಸಣಾ ಕೊಠಡಿಗಳು, ಪ್ರಯೋಗಾಲಯ, ಫಿಸಿಯೊಥೆರಪಿ, ಅಡುಗೆ ಮನೆ, ಊಟದ ಪ್ರಾಂಗಣವಿದೆ ಎಂದರು.

ಈ ಸಂದರ್ಭದಲ್ಲಿ ಹರ್ಷ ಸಂಸ್ಥೆ ಅಧ್ಯಕ್ಷ ಎಸ್.ಶಿವಕುಮಾರ್, ಸಂಸ್ಥೆ ಅಧ್ಯಕ್ಷ ಬೆಟ್ಟೇಗೌಡ, ಉಪಾಧ್ಯಕ್ಷ ಲೋಕೇಶ್ವರ್ ಲೋಕೇಶ್ವರ, ಕೆ.ಬಿ.ಬೆಟ್ಟೇಗೌಡ, ಮಹಾಪೋಷಕರಾದ ಎಸ್.ಜಿ.ಸುಶೀಲಮ್ಮ, ಸುರೇಶ್ ಹನಗವಾಡಿ, ಸುರೇಶ್ ಹನಗವಾಡಿ, ಎಸ್‍ಜಿ.ಸುಶೀಲಮ್ಮ ಉಪಸ್ಥಿತರಿದ್ದರು.

ಪೋಟೋ 3 :

ನೆಲಮಂಗಲ ಸಮೀಪದ ಗೌಡನಹಳ್ಳಿಯಲ್ಲಿ ಮಾತೃಶ್ರೀ ಮನೋವಿಕಾಸ ಕೇಂದ್ರದ ನೂತನ ವೈದ್ಯಕೀಯ ಕೇಂದ್ರದ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಅವರು ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಂದೇ ಮಾತರಂ 6 ಚರಣ ಹಾಡಲು ಬಿಜೆಪಿ ಆಗ್ರಹ
ಒಂದು ವಾರದ ಗಣೇಶೋತ್ಸವಕ್ಕೆ ಶಾಸಕ ಉದಯ್‌ ಚಾಲನೆ