ಸರ್ಕಾರದ ಕೆಫೆಕ್ ರೈತರು ಉತ್ಪಾದಿಸಿದ ವಸ್ತುಗಳನ್ನು ಬ್ರಾಂಡ್ ಮಾಡಿ ಮಾರಾಟ ಮಾಡುವ ಮಾರುಕಟ್ಟೆ ಸ್ಥಾಪಿಸುವ ರೈತ ಉತ್ಪಾದಕ ಕಂಪನಿಗಳಿಗೂ ಒಂದು ಕೋಟಿ ಅನುದಾನ, ಸಾಲ ಸೌಲಭ್ಯಗಳನ್ನು ನೀಡಲಿದೆ. ರೈತರು ಉತ್ಪಾದನೆ ಮಾಡಿದಂತ ಉತ್ಪನ್ನಗಳನ್ನು ಸಂಸ್ಕರಿಸಿ ಮೌಲ್ಯವರ್ಧನೆ ಮಾಡಿ ಅದಕ್ಕೆ ಗುಣಮಟ್ಟದ ಪ್ಯಾಕಿಂಗ್ ಮಾಡುವ ಮೂಲಕ ರಫ್ತು ಮಾಡಿದರೆ ಕೆಫೆ ಸಂಸ್ಥೆ ಸಹಾಯ ಮಾಡಲಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ರೈತರು ಉತ್ಪಾದಿಸುವ ವಸ್ತುಗಳನ್ನು ಬ್ರಾಂಡ್ ಮಾಡಿ ಮಾರಾಟ ಮಾಡುವ ರೈತ ಉತ್ಪಾದಕ ಕಂಪನಿಗಳಿಗೆ ಒಂದು ಕೋಟಿವರೆಗೆ ಸಹಾಯಧನ, ಸಾಲ ಸೌಲಭ್ಯ ನೀಡಲು ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ಕಾರ್ಪೊರೇಷನ್ ಲಿಮಿಟೆಡ್ (ಕೆಎಪಿಪಿಇಸಿ) ಮುಂದಾಗಿದೆ ಎಂದು ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶಿವಪ್ರಕಾಶ್ ತಿಳಿಸಿದರು.ನಗರದ ಜಿಪಂ ಕಾವೇರಿ ಸಭಾಂಗಣದಲ್ಲಿ ಫಸ್ಟ್ ಸರ್ಕಲ್ ಸಹಯೋಗದೊಂದಿಗೆ ಕೃಷಿ ಇಲಾಖೆ, ಬೆಲ್ಲದ ನಾಡು ರೈತ ಉತ್ಪಾದಕ ಕಂಪನಿಗಳ ಒಕ್ಕೂಟದಿಂದ ಮುನ್ನಡೆ ಮಂಡ್ಯ ವಿಷನ್-2035 ಕಾರ್ಯಕ್ರಮದಡಿ ನಡೆದ ಎರಡು ದಿನಗಳ ಕೃಷಿ ಉದ್ಯಮಶೀಲ ಅಧಿವೇಶನದಲ್ಲಿ ಮಂಡ್ಯವನ್ನು ದಕ್ಷಿಣ ಕರ್ನಾಟಕದ ಸಂಸ್ಕರಣಾ ಹಬ್ ಆಗಿಸುವ ಮಾರ್ಗ ಸೂಚಿ ವಿಷಯ ಕುರಿತು ಮಾತನಾಡಿದರು.
ಸರ್ಕಾರದ ಕೆಫೆಕ್ ರೈತರು ಉತ್ಪಾದಿಸಿದ ವಸ್ತುಗಳನ್ನು ಬ್ರಾಂಡ್ ಮಾಡಿ ಮಾರಾಟ ಮಾಡುವ ಮಾರುಕಟ್ಟೆ ಸ್ಥಾಪಿಸುವ ರೈತ ಉತ್ಪಾದಕ ಕಂಪನಿಗಳಿಗೂ ಒಂದು ಕೋಟಿ ಅನುದಾನ, ಸಾಲ ಸೌಲಭ್ಯಗಳನ್ನು ನೀಡಲಿದೆ. ರೈತರು ಉತ್ಪಾದನೆ ಮಾಡಿದಂತ ಉತ್ಪನ್ನಗಳನ್ನು ಸಂಸ್ಕರಿಸಿ ಮೌಲ್ಯವರ್ಧನೆ ಮಾಡಿ ಅದಕ್ಕೆ ಗುಣಮಟ್ಟದ ಪ್ಯಾಕಿಂಗ್ ಮಾಡುವ ಮೂಲಕ ರಫ್ತು ಮಾಡಿದರೆ ಕೆಫೆ ಸಂಸ್ಥೆ ಸಹಾಯ ಮಾಡಲಿದೆ ಎಂದರು.
ಮಂಡ್ಯ ಕೃಷಿ ಆಧಾರಿತ ಜಿಲ್ಲೆಯಾಗಿದೆ. ಕೃಷಿ ಉತ್ಪನ್ನಗಳ ಸಂಸ್ಕರಣೆ ಮೌಲ್ಯವರ್ಧನೆ ಹಾಗು ಮಾರುಕಟ್ಟೆಯ ವಿಚಾರದಲ್ಲಿ 11ನೇ ಸ್ಥಾನದಲ್ಲಿದೆ. ನಮ್ಮ ಸಂಸ್ಥೆ ಕಳೆದ ಐದು ವರ್ಷಗಳಲ್ಲಿ 320 ಫಲಾನುಭವಿಗಳಿಗೆ ಸಬ್ಸಿಡಿ ಸಹಿತ ಸೌಲಭ್ಯಗಳನ್ನು ನೀಡಿ ನೀಡಿದೆ ಎಂದರು.
ಮಂಡ್ಯದ ಬೆಲ್ಲದ ಆಲೆಮನೆಗಳಿಗೆ ಕೃಷಿ ಇಲಾಖೆ ಸಚಿವರಾಗಿದ್ದ ಎನ್.ಚಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಈ ವರ್ಷ 6 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಆಹಾರ ಸಂಸ್ಕರಣ ಯೋಜನೆಯಲ್ಲಿ ಸಾಲ ಸೌಲಭ್ಯವನ್ನು ನೀಡಿ ಒಂದೊಂದು ಉದ್ಯಮ ಮಾಡುವ ಹತ್ತಕ್ಕೂ ಹೆಚ್ಚು ಜನರಿಗೆ ಸಂಸ್ಥೆ ಉದ್ಯೋಗವನ್ನು ನೀಡುವಂತಹ ಜವಾಬ್ದಾರಿ ಕೆಲಸ ಮಾಡಿದೆ ಹೇಳಿದರು.
ಮಂಡ್ಯ ಜಿಲ್ಲೆಗೆ ಪೂರಕವಾಗಿ ಕಬ್ಬು ಕ್ಲಸ್ಟರ್, ರೈಸ್ ಪಾರ್ಕ್, ಬೆಲ್ಲದ ಕ್ಲಸ್ಟರ್, ತೆಂಗಿನ ಉತ್ಪನ್ನಗಳ ಕ್ಲಸ್ಟರ್ ಹಾಗೂ ತರಕಾರಿ ಸಂಸ್ಕರಣ ಕ್ಲಸ್ಟರ್ ಗಳನ್ನು ತೆರೆಯಬಹುದು. ಕೇಂದ್ರ , ರಾಜ್ಯ ಸರ್ಕಾರಗಳ ಎಂ ಎಸ್ ಎಂ ಯೋಜನೆಯಡಿ ಈ ಕ್ಲಸ್ಟರ್ ಗಳನ್ನು ತೆರೆಯುವ ಉತ್ಪಾದಕ ಕಂಪನಿಗಳು ಒಂದು ಕೋಟಿಯಿಂದ 27 ಕೋಟಿ ಅವರಿಗೆ ಸಬ್ಸಿಡಿ ಪಡೆಯಬಹುದು ಎಂದು ಮಾಹಿತಿ ನೀಡಿದರು.
ಮಂಡ್ಯ ಜಿಲ್ಲೆಯಲ್ಲಿ ಬೆಳೆದ ಕಚ್ಚಾ ಆಹಾರೋತ್ಪನ್ನಗಳನ್ನು ಸಂಸ್ಕರಿಸಿ ಬ್ರಾಂಡ್ ರೂಪ ನೀಡದೇ ನೇರವಾಗಿ ಮಾರಾಟ ಮಾಡುತ್ತಿವುದರಿಂದ ರೈತರಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಇದಕ್ಕಾಗಿ ಸಣ್ಣ ಸಣ್ಣ ಫುಡ್ ಇಂಡಸ್ಟ್ರಿಗಳು ಸ್ಥಾಪನೆಯಾಗಬೇಕು. ಕೃಷಿ ಭೂಮಿಯನ್ನು ಕೈಗಾರಿಕಾ ಕೇಂದ್ರವಾಗಿ ಪರಿವರ್ತನೆ ಮಾಡಲು ಸರ್ಕಾರ, ಕೆಫೆಕ್ ಸಂಸ್ಥೆಯಿಂದ ಸಿಗುವ ಸಾಲ ಸೌಲಭ್ಯಗಳಿಂದ ಮಾಡಬಹುದು ಎಂದರು.
ಕಬ್ಬು ಮತ್ತು ಭತ್ತ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಇದರ ಜೊತೆಗೆ ಔಷಧೀಯ ಸಸ್ಯಗಳು ಸೇರಿದಂತೆ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಸಾಧ್ಯವಿದೆ. ಮಾರುಕಟ್ಟೆ ಸ್ಥಾಪನೆಗಾಗಿ ರೈತರು ಮತ್ತು ಉತ್ಪಾದಕರ ನಡುವೆ ಒಡಂಬಡಿಕೆ ಮೂಡುವಂತೆ ಮಾಡಬೇಕು. ಸಂಸ್ಥೆಯಿಂದ ದೊರಕುವ ಯೋಜನೆಗಳನ್ನು ಬಳಸಿಕೊಂಡು ಎಲ್ಲಾ ಕೃಷಿ ಉದ್ಯಮಿಗಳು ಜಿಲ್ಲೆಯ ಜಿಡಿಪಿಯನ್ನು ಹೆಚ್ಚು ಮಾಡುವಲ್ಲಿ ಮನಸ್ಸು ಮಾಡಬೇಕಾಗಿದೆ ಎಂದು ಕರೆ ನೀಡಿದರು.
ಜಿಲ್ಲೆಯ ಅಭಿವೃದ್ಧಿಗಾಗಿ ಫಸ್ಟ್ ಸರ್ಕಲ್, ಮಂಡ್ಯ ವೃತ್ತ , ಕೃಷಿ ಇಲಾಖೆ ಬೆಲ್ಲದನಾಡು ರೈತ ಉತ್ಪಾದ ಕಂಪನೆಗಳ ಒಕ್ಕೂಟ ಸಹಯೋಗದಲ್ಲಿ ನಡೆಯುತ್ತಿರುವ ಮುನ್ನಡೆ ಮಂಡ್ಯ ವಿಷನ್ 20035 ರ ಕಾರ್ಯಕ್ರಮ ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಶ್ಲಾಘಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.