ಸಹಕಾರ ಸಂಘದ ಅಭಿವೃದ್ಧಿಗೆ ಸಾಲ ಮರುಪಾವತಿ ಅಗತ್ಯ: ಎಸ್.ಎಂ.ನಾಗರಾಜ್

KannadaprabhaNewsNetwork |  
Published : Sep 08, 2025, 01:00 AM IST
ಶ್ರೀ ಗುರು ಸಿದ್ದರಾಮೇಶ್ವರ ಪತ್ತಿನ ಸಹಕಾರ ಸಂಘ ತೃತೀಯ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆ | Kannada Prabha

ಸಾರಾಂಶ

ತರೀಕೆರೆ, ಸಾಲ ಮರುಪಾವತಿಯಾದರೆ ಸಹಕಾರ ಸಂಘಗಳು ಬೆಳೆಯಲು ಸಾಧ್ಯವಾಗುತ್ತದೆ ಎಂದು ಪಟ್ಟಣದ ಶ್ರೀ ಗುರು ಸಿದ್ದರಾಮೇಶ್ವರ ಪತ್ತಿನ ಸಹಕಾರ ಸಂಘ ಅಧ್ಯಕ್ಷರು, ಮಾಜಿ ಶಾಸಕ ಎಸ್.ಎಂ.ನಾಗರಾಜ್ ಹೇಳಿದ್ದಾರೆ.

- ಶ್ರೀ ಗುರು ಸಿದ್ದರಾಮೇಶ್ವರ ಪತ್ತಿನ ಸಹಕಾರ ಸಂಘ ತೃತೀಯ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಸಾಲ ಮರುಪಾವತಿಯಾದರೆ ಸಹಕಾರ ಸಂಘಗಳು ಬೆಳೆಯಲು ಸಾಧ್ಯವಾಗುತ್ತದೆ ಎಂದು ಪಟ್ಟಣದ ಶ್ರೀ ಗುರು ಸಿದ್ದರಾಮೇಶ್ವರ ಪತ್ತಿನ ಸಹಕಾರ ಸಂಘ ಅಧ್ಯಕ್ಷರು, ಮಾಜಿ ಶಾಸಕ ಎಸ್.ಎಂ.ನಾಗರಾಜ್ ಹೇಳಿದ್ದಾರೆ.

ಭಾನುವಾರ ಶ್ರೀ ಗುರು ಸಿದ್ದರಾಮೇಶ್ವರ ಪತ್ತಿನ ಸಹಕಾರ ಸಂಘದಿಂದ ಪಟ್ಟಣದ ಆರಮನೆ ಹೋಟೆಲ್ ಸಭಾಂಗಣದಲ್ಲಿ ನಡೆದ ತೃತೀಯ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಹಕಾರ ಸಂಘವನ್ನು 2022ರಲ್ಲಿ ಪ್ರಾರಂಭಿಸಲಾಯಿತು. ಕೆಲವು ಸ್ನೇಹಿತರು ಎರಡೇ ತಿಂಗಳಲ್ಲಿ ಶೇರು ಸಂಗ್ರಹಿಸಿ ತಂದರು, ಕಷ್ಟಪಟ್ಟು ಸಹಕಾರ ಸಂಘ ಬೆಳೆಸಲಾಗಿದೆ. ಸಂಘ ಲಾಭಾಂಶ ಪಡೆಯುತ್ತಿದೆ. ಶೇರುದಾರರ ಹಣಕ್ಕೆ ಗ್ಯಾರಂಟಿ ಇರಬೇಕು ಎನ್ನುವ ಹಿನ್ನಲೆಯಲ್ಲಿ ಸಾಲಕ್ಕೆ ಅರ್ಜಿ ಹಾಕಿದರೆ ಸಹಕಾರ ಸಂಘದ ನಿರ್ದೇಶಕರ ಗ್ಯಾರಂಟಿ ಪಡದೇ ಸಾಲ ಕೊಡ ಲಾಗುತ್ತಿದೆ. ಸಾಲ ಮರು ಪಾವತಿಯಾಗುತ್ತಿದೆ. ಎರಡು ವರ್ಷದಲ್ಲಿ ಸಹಕಾರ ಸಂಘ ಈ ಸಾಲಿನಲ್ಲಿ 8 ಲಕ್ಷ 16 ಸಾವಿರ ರು. ನಿವ್ವಳ ಲಾಭ ಪಡೆದಿದೆ. ಮುಂದೆ ಇದು ಇನ್ನೂ ಹೆಚ್ಚು ಲಾಭ ಬರುತ್ತದೆ ಎಂದು ಹೇಳಿದರು.ಸಹಕಾರ ಸಂಘದಲ್ಲಿ 989 ಶೇರುದಾರರು ಈಗ ಇದ್ದಾರೆ. ಸಹಕಾರ ಸಂಘದಲ್ಲಿ ಡಿಪಾಸಿಟ್ ಮೇಲೆ ಶೇ.8 ರಷ್ಟು ಮತ್ತು ಹಿರಿಯ ನಾಗರಿಕರಿಗೆ ಶೇ.8.5ರಷ್ಟು ಬಡ್ಡಿ ನೀಡಲಾಗುತ್ತಿದೆ. ಪಿಗ್ಮಿ ಹಣ ಕೂಡ ಸಂಗ್ರಹಿಸಲಾಗುತ್ತಿದೆ. ಬ್ಯಾಂಕ್ ಇನ್ಸುರೆನ್ಸ್ ಪಡೆದಿದ್ದು, ಡಿಪಾಸಿಟ್ ಗಳಿಗೆ ಗ್ಯಾರಂಟಿಯಾಗಿ ಇನ್ಸುರೆನ್ಸ್ ಕೂಡ ಇರುತ್ತದೆ. ಹೆಚ್ಚಿನ ರೀತಿಯಲ್ಲಿ ಸಹಕಾರ ಸಂಘ ಬೆಳೆದು ಅಭಿವೃದ್ದಿಯಾಗಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.ಮುಖಂಡರಾದ ಸಮೀವುಲ್ಲಾ ಷರೀಫ್ ಮಾತನಾಡಿ ಶ್ರೀ ಗುರು ಸಿದ್ದರಾಮೇಶ್ವರ ಪತ್ತಿನ ಸಹಕಾರ ಸಂಘ ವ್ಯವಸ್ಥಿತವಾಗಿ ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿದೆ. ಎಲ್ಲ ವರ್ಗದವರಿಗೂ ಸಮಪಾಲಿನಲ್ಲಿ ಬ್ಯಾಂಕಿನ ಸೌಲಭ್ಯ ಒದಗಿಸುತ್ತಿದೆ. ಸಹಕಾರ ಬ್ಯಾಂಕ್ ಇನ್ನು ಹೆಚ್ಚಿನ ಅಭಿವೃದ್ಧಿ ಸಾಧಿಸಲಿ ಎಂದು ಶುಭ ಕೋರಿದರು. ಶ್ರೀ ಗುರು ಸಿದ್ದರಾಮೇಶ್ವರ ಪತ್ತಿನ ಸಹಕಾರ ಸಂಘ ಉಪಾಧ್ಯಕ್ಷ ಎಲ್.ಎಸ್. ಬಸಪ್ಪ, ನಿರ್ದೇಶಕರಾದ ವೈ.ಸಿ. ಮಹೇಶ್ವರಪ್ಪ, ಜೆ.ಬಿ.ಈಶ್ವರಪ್ಪ, ಬಿ.ಎಸ್.ಮಲ್ಲಿಕಾರ್ಜುನ್, ಶೇಖರಪ್ಪ ಮತ್ತಿತರರು ಮಾತನಾಡಿದರು. ಕಾರ್ಯದರ್ಶಿ ಕೆ.ಎನ್.ಅರುಣ್ ಕುಮಾರ್ ವಾರ್ಷಿಕ ವರದಿ ನೀಡಿದರು. ಸಹಕಾರ ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.

--

7ಕೆಟಿಆರ್.ಕೆ.6ಃ

ತರೀಕೆರೆಯಲ್ಲಿ ಶ್ರೀ ಗುರು ಸಿದ್ದರಾಮೇಶ್ವರ ಪತ್ತಿನ ಸಹಕಾರ ಸಂಘದಿಂದ ನಡೆದ ಸಹಕಾರ ಸಂಘದ ತೃತೀಯ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ಸಹಕಾರ ಸಂಘದ ಅಧ್ಯಕ್ಷ, ಮಾಜಿ ಶಾಸಕ ಎಸ್.ಎಂ.ನಾಗರಾಜ್ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ