ಸಾಲಮರುಪಾವತಿಯಿಂದ ಹೆಚ್ಚಿನ ಸಾಲ ವಿತರಣೆ ಸಾಧ್ಯ-ರೇಣುಕಾ ಸಾತಣ್ಣವರ

KannadaprabhaNewsNetwork |  
Published : Sep 28, 2025, 02:00 AM IST
ಪೊಟೋ ಪೈಲ್ ನೇಮ್ ೨೭ಎಸ್‌ಜಿವಿ೧   ಪಟ್ಟಣದ ಪಿಎಲ್‌ಡಿ ಬ್ಯಾಂಕ್‌ನ ೨೦೨೪-೨೫ ನೇ ಸಾಲಿನ ವಾರ್ಷಿಕ ಮಹಾಸಭೆಯನ್ನ ಅದ್ಯಕ್ಷೆ ರೇಣುಕಾ ಸಾತಣ್ಣವರ ಉದ್ಘಾಟಿಸಿದರು.೨೭ಎಸ್‌ಜಿವಿ೧-೧ : ಶಿಗ್ಗಾವಿ ಪಟ್ಟಣದ ಪಿಎಲ್‌ಡಿ ಬ್ಯಾಂಕ್‌ನ ೨೦೨೪-೨೫ ನೇ ಸಾಲಿನ ವಾರ್ಷಿಕ ಮಹಾಸಭೆಯನ್ನ ಅದ್ಯಕ್ಷೆ ರೇಣುಕಾ ಸಾತಣ್ಣವರ ಉದ್ಘಾಟಿಸಿ ಮಾತನಾಡಿದರು. | Kannada Prabha

ಸಾರಾಂಶ

ಪಡೆದ ಸಾಲವನ್ನು ಷೇರುದಾರರು ವೇಳೆಗೆ ಸರಿಯಾಗಿ ಮರು ಪಾವತಿ ಮಾಡಿದರೆ ಹೆಚ್ಚಿನ ರೈತರಿಗೆ ಸಾಲವನ್ನು ವಿತರಿಸಲು ಸಾಧ್ಯವಾಗುವುದರ ಜೊತೆಗೆ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ರೈತ ಸದಸ್ಯರುಗಳು ಬ್ಯಾಂಕ್‌ನಲ್ಲಿ ಹೆಚ್ಚಿನ ಒತ್ತು ನೀಡಿ ಆರ್ಥಿಕಾಭಿವೃದ್ಧಿಗೆ ಸಹಾಯಕವಾಗಲಿದೆ ಎಂದು ಶಿಗ್ಗಾಂವಿ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷೆ ರೇಣುಕಾ ರಮೇಶ ಸಾತಣ್ಣವರ ಹೇಳಿದರು.

ಶಿಗ್ಗಾಂವಿ: ಪಡೆದ ಸಾಲವನ್ನು ಷೇರುದಾರರು ವೇಳೆಗೆ ಸರಿಯಾಗಿ ಮರು ಪಾವತಿ ಮಾಡಿದರೆ ಹೆಚ್ಚಿನ ರೈತರಿಗೆ ಸಾಲವನ್ನು ವಿತರಿಸಲು ಸಾಧ್ಯವಾಗುವುದರ ಜೊತೆಗೆ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ರೈತ ಸದಸ್ಯರುಗಳು ಬ್ಯಾಂಕ್‌ನಲ್ಲಿ ಹೆಚ್ಚಿನ ಒತ್ತು ನೀಡಿ ಆರ್ಥಿಕಾಭಿವೃದ್ಧಿಗೆ ಸಹಾಯಕವಾಗಲಿದೆ ಎಂದು ಶಿಗ್ಗಾಂವಿ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷೆ ರೇಣುಕಾ ರಮೇಶ ಸಾತಣ್ಣವರ ಹೇಳಿದರು. ಪಟ್ಟಣದ ಪಿಎಲ್‌ಡಿ ಬ್ಯಾಂಕ್‌ನ ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಬ್ಯಾಂಕ್‌ನಲ್ಲಿ ಸಾಲ ಮರುಪಾವತಿಸುವ ಹಣವನ್ನು ಮೊದಲಿಗೆ ಸುಸ್ತಿ, ಬಡ್ಡಿ, ಮುಂದುವರಿದ ಬಡ್ಡಿಗೆ ಪಡೆದುಕೊಂಡು ಉಳಿಕೆ ಮೊತ್ತ ಹಣವನ್ನು ಅಸಲಿಗೆ ಹೊಂದಾಣಿಕೆ ಮಾಡಿಕೊಳ್ಳುವ ನಿಯಮವಿದೆ. ರೈತರು ಇದರ ಪ್ರಯೋಜನ ಪಡೆಯಬೇಕು, ರೈತರಿಗೆ ಅನುಕೂಲ ಕಲ್ಪಿಸಲು ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಕಡಿಮೆ ಬಡ್ಡಿ ದರದಲ್ಲಿ ಪಿಎಲ್‌ಡಿ ಬ್ಯಾಂಕ್ ಸಾಲ ಸೌಲಭ್ಯ ನೀಡುತ್ತಿದ್ದರೂ ರೈತರು ಮರು ಪಾವತಿ ಮಾಡದ ಕಾರಣ ಬ್ಯಾಂಕ್ ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ರೈತರು ಸಕಾಲಕ್ಕೆ ಮರು ಪಾವತಿಸಿದರೆ ಮಾತ್ರ ಬ್ಯಾಂಕ್‌ನ ಅಸ್ತಿತ್ವ ಉಳಿಯುತ್ತದೆ ಎಂದರು. ಬ್ಯಾಂಕ್‌ ವ್ಯವಸ್ಥಾಪಕ ಜಗದೀಶ ಹೊಸಮನಿ ಬ್ಯಾಂಕಿನ ವಾರ್ಷಿಕ ಕಾರ್ಯಚಟುವಟಿಕೆಗಳ ಕುರಿತು ಮಾತನಾಡಿ, ಬ್ಯಾಂಕ್‌ನಿಂದ ರೈತರಿಗೆ ಸಾಲ ವಿತರಣೆ ಮಾಡಲಾಗಿದೆ. ಇದನ್ನು ಕಾಲಮಿತಿಯೊಳಗೆ ಪಾವತಿ ಮಾಡಿದರೆ ಸರಕಾರದ ರಿಯಾಯಿತಿ ದೊರೆಯುತ್ತದೆ. ರೈತರಿಗೆ ಕೃಷಿ ಸಾಲದ ಜತೆಗೆ ವಾಣಿಜ್ಯ ಸಾಲ, ಮಹಿಳಾ ಸ್ವಸಹಾಯ ಸಂಘಗಳಿಗೆ ಸ್ವಂತ ಉದ್ಯಮವನ್ನು ಹೊಂದಿ ಆರ್ಥಿಕ ಅಭಿವೃದ್ದಿ ಹೊಂದಲು ಸಾಲ, ಕೃಷಿಯಲ್ಲಿ ಆಧುನಿಕ ಯಂತ್ರೋಪಕರಣಗಳನ್ನು ಅಳವಡಿಸಿಕೊಂಡು ವೈಜ್ಞಾನಿಕವಾಗಿ ಬೇಸಾಯ ಮಾಡಲು ಟ್ರ‍್ಯಾಕ್ಟರ್ ಸಾಲ ಸಹ ನೀಡಲಾಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ನಿರ್ದೇಶಕರನ್ನು ಹಾಗೂ ವಿವಿಧ ರೈತರನ್ನ ಸನ್ಮಾನಿಸಲಾಯಿತು. ಬ್ಯಾಂಕಿನ ಉಪಾಧ್ಯಕ್ಷ ಮಹಾವೀರ ಧಾರವಾಡ, ಮುಖಂಡರಾದ ಬಸನಗೌಡ್ರ ದುಂಡಿಗೌಡ್ರ, ಗಂಗಣ್ಣ ಸಾತಣ್ಣವರ, ಎಫ್.ಸಿ. ಪಾಟೀಲ, ರಮೇಶ ಸಾತಣ್ಣವರ, ವೀರೇಶ ಆಜೂರ, ಶಿವಪ್ರಸಾದ ಸುರಗಿಮಠ, ನಿರ್ದೇಶಕರಾದ ಶೇಖಣ್ಣ ಹಾದಿಮನಿ, ಅಣ್ಣಪ್ಪ ಸವಣೂರ, ಪ್ರದೀಪಕುಮಾರ ಗಿರಡ್ಡಿ, ಮಲ್ಲಪ್ಪ ದೊಡ್ಡಮನಿ, ಹನುಮಂತಗೌಡ ಲಿಂಗನಗೌಡ್ರ, ಯಶವಂತಗೌಡ ಪಾಟೀಲ, ಕರಬಸಪ್ಪ ಈಟಿ, ಶೇಖಪ್ಪ ಅತ್ತಿಗೇರಿ, ಸತೀಶ ಬೈಲವಾಳ, ರಾಮಪ್ಪ ಪೂಜಾರ, ಸುಮಾ ಅತ್ತೀಗೇರಿ, ಬಸವರಾಜ ಮೊಸಳಿ, ಶಂಕ್ರಪ್ಪ ಮಡಿವಾಳರ, ಸಿಬ್ಬಂದಿಗಳಾದ ಸಿದ್ದು ಚಿನ್ನಪ್ಪನವರ, ಸುರೇಶ ತಳವಾರ ಸೇರಿದಂತೆ ಮುಖಂಡರು ಬ್ಯಾಂಕಿನ ಸಿಬ್ಬಂದಿಗಳು ಇದ್ದರು. ಕಲಾವಿದ ಬಸವರಾಜ ಶಿಗ್ಗಾವಿ ಪ್ರಾರ್ಥಿಸಿದರು. ಶಂಭುಲಿಂಗ ಮೆಳ್ಳಳ್ಳಿ ನಿರೂಪಿಸಿ, ವಂದಿಸಿದರು.

PREV

Recommended Stories

ಅ.4ರಿಂದ ಅಂತಾರಾಜ್ಯ ವಿವಿ ಕಬಡ್ಡಿ ಕ್ರೀಡಾಕೂಟ
ಜಾನಪದ ಕಲೆ ಉಳಿಸಲು ಸಂಘಟನೆಗಳ ಪಾತ್ರ ಪ್ರಮುಖ: ಎಂ.ಎಂ. ವಿರಕ್ತಮಠ