ಸಹಕಾರ ಬ್ಯಾಂಕ್‌ಗಳ ಆರ್ಥಿಕ ದುಸ್ಥಿತಿಗೆ ಸಾಲಮನ್ನಾ ನೀತಿ ಪ್ರಮುಖ ಕಾರಣ: ತಿಮ್ಮರಾಯಿಗೌಡ

KannadaprabhaNewsNetwork | Published : Dec 6, 2024 8:59 AM

ಸಾರಾಂಶ

ರಾಜಕಾರಣಿಗಳು ಚುನಾವಣೆ ವೇಳೆ ರೈತರಿಗೆ ಸಾಲ ಮನ್ನಾ ಮತ್ತು ಬಡ್ಡಿ ಮನ್ನಾ ಘೋಷಣೆ ಮಾಡುತ್ತಾರೆ. ಇದರ ಆಸೆಗೆ ಬಿದ್ದ ರೈತರು ಬ್ಯಾಂಕ್‌ಗಳಲ್ಲಿ ಮಾಡಿದ ಸಾಲ ತೀರಿಸದ ಕಾರಣ ಸಹಕಾರ ಬ್ಯಾಂಕ್‌ಗಳು ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿವೆ. ಸಹಕಾರ ಬ್ಯಾಂಕ್‌ಗಳ ಇಂದಿನ ಆರ್ಥಿಕ ದುಸ್ಥಿತಿಗೆ ಸರ್ಕಾರದ ಸಾಲಮನ್ನಾ ನೀತಿ ಪ್ರಮುಖ ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಸಹಕಾರ ಬ್ಯಾಂಕ್‌ಗಳ ಇಂದಿನ ಆರ್ಥಿಕ ದುಸ್ಥಿತಿಗೆ ಸರ್ಕಾರದ ಸಾಲಮನ್ನಾ ನೀತಿ ಪ್ರಮುಖ ಕಾರಣವಾಗಿದೆ ಎಂದು ಸಹಕಾರ ಅಭಿವೃದ್ಧಿ ಬ್ಯಾಂಕ್‌ನ ಜಿಲ್ಲಾ ನಿರ್ದೇಶಕ, ರಾಜ್ಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ತಿಮ್ಮರಾಯಿಗೌಡ ಹೇಳಿದರು.ಪಟ್ಟಣದ ಪಿ.ಕಾರ್ಡ್ ಬ್ಯಾಂಕ್‌ನ ಕುವೆಂಪು ಸಭಾಂಗಣದಲ್ಲಿ ಬುಧವಾರ ಬ್ಯಾಂಕ್‌ನ ಆಡಳಿತ ಮಂಡಳಿಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ರಾಜಕಾರಣಿಗಳು ಚುನಾವಣೆ ವೇಳೆ ರೈತರಿಗೆ ಸಾಲ ಮನ್ನಾ ಮತ್ತು ಬಡ್ಡಿ ಮನ್ನಾ ಘೋಷಣೆ ಮಾಡುತ್ತಾರೆ. ಇದರ ಆಸೆಗೆ ಬಿದ್ದ ರೈತರು ಬ್ಯಾಂಕ್‌ಗಳಲ್ಲಿ ಮಾಡಿದ ಸಾಲ ತೀರಿಸದ ಕಾರಣ ಸಹಕಾರ ಬ್ಯಾಂಕ್‌ಗಳು ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿವೆ ಎಂದರು.

ಮಂಡ್ಯ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ಅಭಿವೃದ್ಧಿ ಸಾಧಿಸುವಲ್ಲಿ ಕೀರ್ತಿ ಶೇಷರಾದ ಕೆ.ವಿ.ಶಂಕರಗೌಡ, ಎಚ್.ಡಿ.ಚೌಡಯ್ಯ, ಜಿ ಮಾದೇಗೌಡ ಪ್ರಮುಖ ಕಾರಣ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ರಾಜ್ಯದಲ್ಲಿ ಐಟಿ, ಬಿಟಿ ಸ್ಥಾಪನೆ ಮಾಡಿ ರಾಜ್ಯ ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಲು ಕಾರಣಕರ್ತರಾಗಿದ್ದಾರೆ ಎಂದು ಸ್ಮರಿಸಿದರು.

ಮದ್ದೂರು ಪಿ.ಕಾರ್ಡ್ ಬ್ಯಾಂಕ್‌ನ ಅಭಿವೃದ್ಧಿಗಾಗಿ 1.30 ಲಕ್ಷ ರು. ಅನುದಾನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನು 50 ಲಕ್ಷ ರು. ಅನುದಾನ ನೀಡಲು ಚಿಂತನೆ ನಡೆಸಲಾಗಿದೆ ಎಂದರು.

ಸಹಕಾರ ಅಭಿವೃದ್ಧಿ ಬ್ಯಾಂಕ್‌ನ ವ್ಯವಸ್ಥಾಪಕ ಪವನ್ ಮಾತನಾಡಿ, ಯಾವುದೇ ಸಹಕಾರ ಬ್ಯಾಂಕು ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಬೇಕಾದರೆ ಆಡಳಿತ ಮಂಡಳಿಸಾಲ ಮತ್ತು ಬಡ್ಡಿ ವಸೂಲಾತಿಗೆ ಆದ್ಯತೆ ನೀಡಬೇಕು ಎಂದರು.

ಈ ವೇಳೆ ಬ್ಯಾಂಕ್‌ನ ಅಧ್ಯಕ್ಷ ಕೆ.ಬಿ.ಸಿದ್ದೇಗೌಡ, ಉಪಾಧ್ಯಕ್ಷ ಕೃಷ್ಣಪ್ಪ, ನಿರ್ದೇಶಕರಾದ ಕೆಂಪೇಗೌಡ, ಸಿದ್ದ ಮರಿಗೌಡ, ಮಧು, ಸಿದ್ದರಾಮಯ್ಯ, ಗೌರಮ್ಮ, ಸವಿತಾ, ನಲಿಕೃಷ್ಣ, ಈರೇಗೌಡ, ಮಾರಸಿಂಗನಹಳ್ಳಿ ಕೃಷ್ಣೇಗೌಡ, ಮಹದೇವಯ್ಯ, ಸಣ್ಣ ಮರಿ ನಾಯಕ, ಸಿಇಒ ಭಾಗ್ಯಮ್ಮ ಹಾಗೂ ಬ್ಯಾಂಕ್‌ನ ಸಿಬ್ಬಂದಿ ಇದ್ದರು.

ಡಿ.7 ರಿಂದ 13ರವರೆಗೆ ವಾರ್ಷಿಕ ಎನ್ ಎಸ್ ಎಸ್ ಶಿಬಿರ

ಮಳವಳ್ಳಿ: ತಾಲೂಕಿನ ದೊಡ್ಡೇಗೌಡನಕೊಪ್ಪಲು ಗ್ರಾಮದಲ್ಲಿ ಡಿ.7ರಿಂದ 13ರವರೆಗೆ ಶಾಂತಿ ಪದವಿಪೂರ್ವ ಕಾಲೇಜಿನ 19ನೇ ವರ್ಷದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ನಡೆಯಲಿದೆ. ಶಿಬಿರವನ್ನು ಶಾಸಕ ಪಿ.ಎಂ. ನರೇಂದ್ರಸ್ವಾಮಿ ಉದ್ಘಾಟಿಸುವರು. ಶಾಂತಿ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ನಾಗಮಣಿ ನಾಗೇಗೌಡ ಅಧ್ಯಕ್ಷತೆ ವಹಿಸುವರು. ರಾಷ್ಟ್ರೀಯ ಸೇವಾ ಯೋಜನೆ ವಿಭಾಗೀಯ ಅಧಿಕಾರಿ ಡಾ.ಟಿ.ಕೆ.ರವಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ವಸ್ತು ಪ್ರದರ್ಶನವನ್ನು ಗ್ರಾಪಂ ಅಧ್ಯಕ್ಷೆ ಭಾರತೀ ಉದ್ಘಾಟಿಸುವರು. ಮಾಹಿತಿ ಪುಸ್ತಕವನ್ನು ಜಿಲ್ಲಾ ಉಪ ನಿರ್ದೇಶಕ ಸಿ.ಚಲುವಯ್ಯ ಬಿಡುಗಡೆಗೊಳಿಸಲಿದ್ದಾರೆ. ಅತಿಥಿಗಳಾಗಿ ಶಾಂತಿ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಎಚ್.ಎಂ.ಮಹದೇವಸ್ವಾಮಿ, ಕಾರ್ಯದರ್ಶಿ ಎಂ.ಎಚ್. ಕೆಂಪಯ್ಯ, ಖಜಾಂಚಿ ಪುಟ್ಟೀರೇಗೌಡ, ಕಾರ್ಯದರ್ಶಿ ಪುಟ್ಟರಾಜು, ಪ್ರಾಂಶುಪಾಲರಾದ ಅನಿತಾ, ಪ್ರೋ.ವೇದಮೂರ್ತಿ ಸೇರಿದಂತೆ ಇತರೆ ಗಣ್ಯರು ಭಾಗವಹಿಸಲಿದ್ದಾರೆ.

Share this article