ಕನ್ನಡಪ್ರಭ ವಾರ್ತೆ ಭಾಲ್ಕಿ
ನಗರದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಲ್ಲಿ ಆಯೋಜಿಸಿದ್ದ 66ನೆಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಡಿಮೆ ಬಡ್ಡಿ ದರದಲ್ಲಿ ಕೃಷಿ ಸಾಲ ನೀಡಲಾಗುತ್ತಿದ್ದು, ಪಡೆದ ಸಾಲ ರೈತರು ಕೃಷಿ ಚಟುವಟಿಕೆಗಳಿಗೆ ಬಳಸಿಕೊಂಡು ಆರ್ಥಿಕವಾಗಿ ಪ್ರಗತಿ ಸಾಧಿಸಬೇಕೆಂದರು.
ಬ್ಯಾಂಕ್‌ನ ಉಪಾಧ್ಯಕ್ಷ ಸೋಮನಾಥಪ್ಪ ಅಷ್ಟೂರೆ, ನಿರ್ದೇಶಕರಾದ ಚಂದ್ರಶೇಖರ ವಂಕೆ, ವೈಜಿನಾಥ ವಡ್ಡೆ, ಪಾಶಾಮಿಯ್ಯ, ರಾಜೇಂದ್ರ ಪಾಟೀಲ್, ಶಿವಾಜಿರಾವ ನೆಲವಾಡ, ರಾಜೇಂದ್ರ ಘೋರ್ಪಡೆ, ಕಾಶಿನಾಥ ಲದ್ದೆ, ಶಿವರಾಜ ಜತ್ತರಗಿ ಸೇರಿದಂತೆ ಹಲವರು ಇದ್ದರು.