ಕನ್ನಡಪ್ರಭ ವಾರ್ತೆ ಹಲಗೂರು
ಗ್ರಾಮದ ವೆಂಕಟೇಶ್ ಅವರಿಗೆ ಸೇರಿದ ನಾಟಿ ಹಸುವಿನ ಬಾಲವನ್ನು ದಂತದಿಂದ ತಿವಿದಿದೆ. ತೀವ್ರವಾಗಿ ಗಾಯಗೊಂಡ ಹಸು ಮೃತಪಟ್ಟಿದೆ. ಕಾಡಾನೆಯನ್ನು ಕಂಡ ರೈತರು ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಆರ್ ಎಫ್ ಪ್ರಮೋದ್ ದೇವ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿ ಹೊಲಗದ್ದೆಗಳಿಗೆ ಹೋಗದಂತೆ ತಿಳಿವಳಿಕೆ ನೀಡಿದ್ದಾರೆ.
ಹಲಗೂರು ಸಮೀಪದ ಕೊನ್ನಾಪುರ, ಗುಡ್ಡದ ಹತ್ತಿರ ಅರಣ್ಯ ಇಲಾಖೆ ಕಚೇರಿಯ ಸಮೀಪ ಹಾಗೂ ವಡ್ಡರ ದೊಡ್ಡಿ ಗ್ರಾಮಗಳಲ್ಲಿ ಒಂಟು ಸಲಗ ಕಾಣಿಸಿಕೊಂಡಿದೆ. ನಂತರ ಅರಣ್ಯಾಧಿಕಾರಿಗಳು, ಸಿಬ್ಬಂದಿ, ಒಂಟಿಸಲಗವನ್ನು ರಾಷ್ಟ್ರೀಯ ಹೆದ್ದಾರಿಯನ್ನು ದಾಟಿಸಿ ಬಸವನ ಬೆಟ್ಟದ ಅರಣ್ಯ ಪ್ರದೇಶಕ್ಕೆ ಓಡಿಸಿದ್ದಾರೆ.ವಡ್ಡರದೊಡ್ಡಿ ಗ್ರಾಮದ ವೆಂಕಟೇಶ್ ಮಾತನಾಡಿ, ನಾವು ವ್ಯವಸಾಯ ಮಾಡಿ ಜೀವನ ನಡೆಸುತ್ತಿದ್ದು, ಎಂದಿನಂತೆ ತೋಟದ ಮನೆಯಲ್ಲಿ ರೇಷ್ಮೆ ಹುಳುವಿಗೆ ಸೊಪ್ಪು ಹಾಕುತ್ತಿದ್ದಾಗ ಹಸು ಚಿರಾಟ ಸದ್ದಿನಿಂದ ಹೊರಗೆ ಬಂದು ನೋಡಿದಾಗ ಒಂಟಿ ಸಲಗ ನಮ್ಮ ಹಸುವಿನ ಮೇಲೆ ದಾಳಿ ಮಾಡಿದೆ.
ಕಾಡಿನಿಂದ ಕಾಡಾನೆಗಳು ನಾಡಿನತ್ತ ಬರದಂತೆ ಕಾಡಿನಂಚಿನಲ್ಲಿ ಆನೆ ಕಂದಕಗಳನ್ನು ತೆಗೆಯುವ ಮೂಲಕ ನಾವು ಬೆಳೆದ ಫಸಲು ಹಾಗೂ ಸಾಕು ಪ್ರಾಣಿಗಳು, ರೈತರ ಪ್ರಾಣರಕ್ಷಣೆ ಮಾಡುವಂತೆ ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿದರು.
ಮುಂಜಾಗ್ರತೆ ಕ್ರಮವಾಗಿ ಸಬ್ ಇನ್ಸ್ ಪೆಕ್ಟರ್ ಲೋಕೇಶ್ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ರಾಷ್ಟ್ರೀಯ ಹೆದ್ದಾರಿಯನ್ನು ಒಂಟಿ ಸಲಗ ದಾಟುವ ಸಮಯದಲ್ಲಿ ವಾಹನಗಳನ್ನು ನಿಲ್ಲಿಸಿ ರಸ್ತೆ ಆನೆ ದಾಟಿದ ನಂತರ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಅರಣ್ಯ ವೀಕ್ಷಕರು ಹಾಗೂ ವಾಹನ ಚಾಲಕರು ಸೇರಿದಂತೆ ಪೊಲೀಸ್ ಸಿಬ್ಬಂದಿ ಮೋಹನ್ ,ಶ್ರೀಕಾಂತ ಸೇರಿದಂತೆ ಇತರರು ಇದ್ದರು.