ಕಿಕ್ಕೇರಿಯಲ್ಲಿ 29ರಂದು ತವರಿನ ಕವಿ ಕೆಎಸ್‌ನ ಗೀತಗಾಯನ

KannadaprabhaNewsNetwork |  
Published : Oct 27, 2025, 12:15 AM IST
26ಕೆಎಂಎನ್ ಡಿ19 | Kannada Prabha

ಸಾರಾಂಶ

ಪ್ರಸ್ತುತ ಮಕ್ಕಳಲ್ಲಿ ಮೊಬೈಲ್, ಟಿವಿ ಬಿಟ್ಟರೆ ಶ್ರೇಷ್ಟ ಸಾಹಿತಿ, ಕವಿ, ಇತಿಹಾಸದ ಪರಿಚಯ ಮಾಯವಾಗುತ್ತಿದೆ. ಭವಿಷ್ಯದ ಮಕ್ಕಳಲ್ಲಿ ಮೊದಲು ಸ್ಥಳೀಯ ಇತಿಹಾಸ, ಮಹಾನೀಯರ ಪರಿಚಯವಾಗುವ ದಿಸೆಯಲ್ಲಿ ಈ ವಿನೂತನ ಕಾರ್ಯಕ್ರಮ ಅಗತ್ಯವಿದೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಕಿಕ್ಕೇರಿಯ ಸುಪುತ್ರ ಮೈಸೂರು ಮಲ್ಲಿಗೆ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಕುರಿತು ಅ.29ರಂದು ಆಯೋಜಿಸಿರುವ ಒಂದು ನೆನಪು, ಉಪನ್ಯಾಸ, ಗೀತಗಾಯನ ಕಾರ್ಯಕ್ರಮದ ಕುರಿತು ಚರ್ಚಿಸಲು ಪೂರ್ವಭಾವಿ ಸಭೆ ನಡೆಯಿತು.

ಪಟ್ಟಣದ ಕೆಪಿಎಸ್ ಶಾಲಾವರಣದಲ್ಲಿ ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್, ಮೈಸೂರು ಆಕಾಶವಾಣಿ ಕೇಂದ್ರ, ಮಂಡ್ಯ ಕರ್ನಾಟಕ ಸಂಘದ ಆಶ್ರಯದಲ್ಲಿ ಆಯೋಜಿಸಿರುವ ಕಾರ್ಯಕ್ರಮದ ಅಂಗವಾಗಿ ಮಲ್ಲಿಗೆ ಕವಿಯ ಪರಿಚಯ ಹಿರಿಯರಲ್ಲಿ ಮಾತ್ರವಿದ್ದು, ಯುವಕರು, ಶಾಲಾ ಕಾಲೇಜು ಮಕ್ಕಳ ಮನದಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡಲು ಕಾರ್ಯಕ್ರಮ ರೂಪಿಸಲು ನಿರ್ಧರಿಸಲಾಯಿತು.

ಟ್ರಸ್ಟ್‌ ಅಧ್ಯಕ್ಷ, ಗಾಯಕ ಡಾ.ಕಿಕ್ಕೇರಿಕೃಷ್ಣಮೂರ್ತಿ ಮಾತನಾಡಿ, ಪ್ರಸ್ತುತ ಮಕ್ಕಳಲ್ಲಿ ಮೊಬೈಲ್, ಟಿವಿ ಬಿಟ್ಟರೆ ಶ್ರೇಷ್ಟ ಸಾಹಿತಿ, ಕವಿ, ಇತಿಹಾಸದ ಪರಿಚಯ ಮಾಯವಾಗುತ್ತಿದೆ. ಭವಿಷ್ಯದ ಮಕ್ಕಳಲ್ಲಿ ಮೊದಲು ಸ್ಥಳೀಯ ಇತಿಹಾಸ, ಮಹಾನೀಯರ ಪರಿಚಯವಾಗುವ ದಿಸೆಯಲ್ಲಿ ಈ ವಿನೂತನ ಕಾರ್ಯಕ್ರಮ ಅಗತ್ಯವಿದೆ ಎಂದರು.

ಮಕ್ಕಳಲ್ಲಿ ಕವಿ, ಕವಿತೆ, ಸಂಗೀತದ ಅಭಿರುಚಿ ಮೂಡಿಸಲು ಕೆಎಸ್ ನ ಕುರಿತು ಪ್ರಬಂಧ ಸ್ಪರ್ಧೆ, ವಿವಿಧ ಶಾಲಾ ಕಾಲೇಜು ಮಕ್ಕಳಿಂದಲೇ ಗೀತಗಾಯನ ವಿಶೇಷವಾಗಿ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮವನ್ನು ಶಾಸಕ ಎಚ್.ಟಿ.ಮಂಜು ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಡಾ.ಕಿಕ್ಕೇರಿಕೃಷ್ಣಮೂರ್ತಿ ವಹಿಸುವರು. ಟ್ರಸ್ಟಿ ಸುರೇಶ್ ಪ್ರಸ್ತಾವಿಕವಾಗಿ ಮಾತನಾಡುವರು. ಡಾ.ಎಸ್.ಬಿ.ಶಂಕರೇಗೌಡ ವಿಶೇಷ ಉಪನ್ಯಾಸ ನೀಡುವರು. ವಿಶೇಷ ಆಹ್ವಾನಿತರಾಗಿ ಪಾಂಡವಪುರ ಉಪವಿಭಾಗಾಧಿಕಾರಿ ಆರ್.ಶ್ರೀನಿವಾಸ, ಆಕಾಶವಾಣಿ ಸಹಾಯಕ ನಿರ್ದೇಶಕ ಟಿ.ಬಿ.ವಿದ್ಯಾಶಂಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಬಿ.ವಿ.ನಂದೀಶ್ ಭಾಗವಹಿಸುವರು.

ಅತಿಥಿಗಳಾಗಿ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಡಾ.ಜಯಪ್ರಕಾಶಗೌಡ, ತಹಸೀಲ್ದಾರ್ ಯು.ಎಸ್.ಅಶೋಕ, ಬಿಇಒ ವೈ.ಕೆ.ತಿಮ್ಮೇಗೌಡ, ತಾಪಂ ಇಒಸುಷ್ಮಾ, ಗ್ರಾಪಂ ಅಧ್ಯಕ್ಷ ಕೆ.ಬಿ.ಚಂದ್ರಶೇಖರ್, ಕ್ಷೇತ್ರಸಮನ್ವಯಾಧಿಕಾರಿ ಮಂಜುನಾಥ, ಎಸ್‌ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ, ಪ್ರಾಂಶುಪಾಲ ಸಹದೇವ, ಉಪಪ್ರಾಂಶುಪಾಲ ಚಲುವನಾರಾಯಣಸ್ವಾಮಿ, ಮುಖ್ಯಶಿಕ್ಷಕಿ ಮಮತಾ, ಟ್ರಸ್ಟ್ ನಿರ್ದೇಶಕರು ಮತ್ತಿತರರು ಭಾಗವಹಿಸಲಿದ್ದಾರೆ.

ಗಾಯಕರಾದ ಡಾ.ಕಿಕ್ಕೇರಿ ಕೃಷ್ಣಮೂರ್ತಿ, ಡಾ.ಅಪ್ಪಗೆರೆ ತಿಮ್ಮರಾಜು, ನಗರ ಶ್ರೀನಿವಾಸ ಉಡುಪ, ಡಾ.ಎಂ.ಡಿ. ಶ್ರೀನಿವಾಸನ್, ಹಂಸಿನಿ, ಅಮೂಲ್ಯ, ಶ್ರೀಧರ್, ಡೇವಿಡ್‌ಅವರಿಂದ ಕೆ.ಎಸ್ ನ ಗೀತಗಾಯನ ನಡೆಯಲಿದೆ.

ಸಭೆಯಲ್ಲಿ ಪ್ರಾಂಶುಪಾಲ ಸಹದೇವು, ಉಪಪ್ರಾಂಶುಪಾಲ ಚಲುವನಾರಾಯಣಸ್ವಾಮಿ, ಎಸ್‌ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ, ಮುಖ್ಯಶಿಕ್ಷಕಿ ಮಮತಾ, ಭಾರತಿ, ಮುಖಂಡರಾದ ಲಕ್ಷ್ಮೀಪುರಚಂದ್ರೇಗೌಡ, ಚಂದ್ರಮೋಹನ್, ಕೆ.ಎನ್. ಪುಟ್ಟೇಗೌಡ, ಮಹದೇವು, ದಯಾನಂದ್, ನಾಗರಾಜು, ಗಾಯಕ ನಗರ ಶ್ರೀನಿವಾಸ ಉಡುಪ, ಉಪನ್ಯಾಸಕ, ಶಿಕ್ಷಕ ವೃಂದ ಹಾಜರಿದ್ದರು.

PREV

Recommended Stories

ಮೋಂಥಾ ಚಂಡಮಾರುತ ಅಬ್ಬರ : ಹವಾಮಾನ ಇಲಾಖೆ ಕಟ್ಟೆಚ್ಚರ
ಕೆಆರ್‌ಎಸ್‌ ವರ್ಷದಲ್ಲಿ 3ನೇ ಬಾರಿ ಭರ್ತಿ-ಬೆಂಗಳೂರಿಗಿಲ್ಲ ಜಲ ಸಂಕಷ್ಟ: ಡಿಸಿಎಂ